ಶಿವಮೊಗ್ಗ: ನಿವೃತ್ತ ASI ಜಯರಾಮ್ ಎಂ ನಿಧನ-ಸಂತಾಪ

ಶಿವಮೊಗ್ಗ:  ನಿವೃತ್ತ ASI ಜಯರಾಮ್ ಎಂ, ಇಂದು ( 19-07-2026) ಬೆಳಗ್ಗೆ 6 ಗಂಟೆಗೆ ನಿಧನರಾದರು.
ಮೃತರು ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಮತ್ತು ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.
ಇವರು  ಸೇವೆಗೆ ಸೇರಿದ ದಿ.02-06-1993 ನಿವೃತ್ತರಾದ ದಿ. 31-05-2020. ಆಗಿದೆ.
ಮೃತರು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯತ್ವವನ್ನು ಸಹ ಹೊಂದಿದ್ದರು. 

ಮೃತರ ನಿಧನದ ಸುದ್ದಿಯನ್ನು ತಿಳಿದ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದರು. ಕಂಬನಿ ಮಿಡಿದಿದ್ದಾರೆ. 

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಂಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಮೃತರು ಅವರ ಕುಟುಂಬದ ಸದಸ್ಯರು ಸ್ನೇಹಿತರು ಮತ್ತು ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.




ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.