ಶಿವಮೊಗ್ಗ:ಡೊನೇಷನ್ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆ-ಸುಲಿಗೆ!! ಜಿಲ್ಲಾಡಳಿತ ಮತ್ತು DDPI,BEO ಗಮನಹರಿಸುವರೇ....
ಶಿವಮೊಗ್ಗ : ಶಿವಮೊಗ್ಗದಲ್ಲಿ ಡೊನೇಷನ್,ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಪೋಷಕರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆ,ಸುಲಿಗೆ ಮಾಡುತ್ತಿದ್ದಾರೆ. ಹೇಳುವವರು.. ಕೇಳುವವರು ಯಾರು ಇಲ್ಲವಾಗಿದೆ.ವಿದ್ಯಾರ್ಥಿಗಳ ಪೋಷಕರು ಖಾಸಾಗಿ ಶಿಕ್ಷಣ ಸಂಸ್ಥೆಗಳಿಗೆ ಅಧಿಕ ಶುಲ್ಕವನ್ನು ಕಟ್ಟಲಾಗದೇ ಕಣ್ಣೀರುಡುತ್ತಿದ್ದಾರೆ. ಇದಕ್ಕೆ ಕೊನೆ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಶಿವಮೊಗ್ಗ ನಗರದ
ಖಾಸಗಿ ಶಾಲಾ - ಕಾಲೇಜುಗಳಲ್ಲಿ
ಡೊನೇಷನ್ ಹೆಸರಿನಲ್ಲಿ ಪೋಷಕ
ರಿಂದ ಮಿತಿಮೀರಿದ ಹಣವನ್ನು
ವಸೂಲಿ ಮಾಡಲಾಗುತ್ತಿದೆ.
ಶಿಕ್ಷಣವನ್ನು ವ್ಯಾಪಾರೀಕರಣ
ಮಾಡಲಾಗಿದೆ .
ಸರ್ಕಾರದ ನಿಯಮಗಳನ್ನು
ಅನುಷ್ಠಾನ ಮಾಡಬೇಕಾದ ಸಂಬಂಧಿ
ಸಿದ ಶಿಕ್ಷಣ ಇಲಾಖೆಯಿ ಅಧಿಕಾರಿಗಳು DDPI,BEO ರವರು ಮತ್ತು ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು
ಮೌನಕ್ಕೆ ಶರಣಾಗಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ತಮಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸಂಬಂಧವೇ ಇಲ್ಲದಂತೆ ನಡೆದು
ಕೊಳ್ಳುತ್ತಿದ್ದಾರೆ. ಕಣ್ಣಿದ್ದು
ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಹಲವಾರು ಮಕ್ಕಳ ಪೋಷಕರು ನಮ್ಮ ಪತ್ರಿಕೆಗೆ ತಮ್ಮ ಅಹವಾಲನ್ನು ಪೋನ್ ಮಾಡಿ ಹೇಳುತ್ತಿದ್ದಾರೆ.
ಸರ್ಕಾರದ ಆದೇಶಗಳನ್ನು ಖಾಸಾಗಿ ಶಿಕ್ಷಣ ಸಂಸ್ಥೆಗಳು ಪಾಲನೆ ಮಾಡುತ್ತಿಲ್ಲ..
ಉಲ್ಲಂಘಿಸಿ ನಗರದ ಕೆಲ ಖಾಸಗಿ
ಶಿಕ್ಷಣ ಸಂಸ್ಥೆಗಳು 'ಡೊನೇಷನ್'* ಅಭಿವೃದ್ಧಿ ಶುಲ್ಕ'ದ ಹೆಸರಿನಲ್ಲಿ
ಹಗಲು ದರೋಡೆಗೆ ಇಳಿದಿವೆ.
ವಿದ್ಯಾರ್ಥಿಗಳ ಪೋಷಕರಿಂದ ಸಾವಿರಾರು ರೂ.ಗಳ ಸುಲಿಗೆ!!
RTE ಅಡಿಯಲ್ಲಿ ಕೆಲ ಪ್ರತಿಷ್ಠಿತ ಖಾಸಗಿ ಶಿಕ್ಷಣಸಂಸ್ಥೆಗಳಂತೂ ಮನಸೋಇಚ್ಚೆ
ಡೊನೇಷನ್ ಸಂಗ್ರಹಿಸುತ್ತಿವೆ. ಉಚಿತ ಪುಸ್ತಕಗಳನ್ನು ನೀಡುವ ಬದಲು ಅರ್ಧ ಹಣ ಕೊಡಿ ಎಂದು ತಾಕೀತು ಮಾಡುತ್ತಿದ್ದಾರೆ.
ಸರ್ಕಾರದ ಯಾವುದೇ ನೀತಿ-
ನಿಯಮಗಳು ಈ ಸಂಸ್ಥೆಗಳಿಗೆ ಅನ್ವ
ಯವಾಗುವುದಿಲ್ಲ. ಎಲ್ಲವುಗಳನ್ನೂ
ಗಾಳಿಗೆ ತೂರಿವೆ. ತಮ್ಮದೇ ಆದ
ಪ್ರತ್ಯೇಕ ನೀತಿ-ನಿಯಮಗಳನ್ನು
ಪಾಲಿಸುತ್ತಿವೆ.
ಪ್ರತಿವರ್ಷದಂತೆ ಈ ವರ್ಷವೂ
ಕೂಡ ಸಂಬಂಧಿಸಿದ ಅಧಿಕಾರಿಗಳು ಕಾಟಾಚಾರಕ್ಕೆ 'ಖಾಸಗಿ ಶಿಕ್ಷಣ ಸಂಸ್ಥೆಗಳು
ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ
ಮಾಡುವುದು ಅಪರಾಧ. ಪೋಷ
ಕರು ಈ ಕುರಿತು ದೂರು ನೀಡಿದರೇ
ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ವಿರುದ್ದ
ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾ
ಗುವುದು' ಎಂದು ಹೇಳುತ್ತಿದ್ದಾರೆ.
ಆದರೆ ಹಾಡಹಗಲೇ ಪ್ರತಿಷ್ಠಿತ
ಪ್ರಭಾವಿ ವ್ಯಕ್ತಿಗಳ ಒಡೆತನದ ಖಾಸಗಿ
ಸಂಸ್ಥೆಗಳು ಪೋಷಕರಿಂದ ಸಾವಿರ
ಸಾವಿರ ರೂ.ಗಳ ಲೆಕ್ಕದಲ್ಲಿ ಡೊನೇ
ಷನ್ ಸಂಗ್ರಹಿಸುತ್ತಿದ್ದರೂ ಈ ಅಧಿ
ಕಾರಿಗಳ ಗಮನಕ್ಕೆ ಬಾರದಿರುವುದು
ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ
ಎಂದು ಪೋಷಕರು ದೂರುತ್ತಾರೆ.
ಡೊನೇಷನ್ ಪಡೆಯುವ ಸಂಸ್ಥೆಗಳ
ವಿರುದ್ಧ ಕಠಿಣ ಕ್ರಮಕೈಗೊಳ್ಳಲಾ
ಗುವುದು ಎಂದು ಹೇಳಿದ್ದಾರೆ. ಆದರೆ
ಇಂದಿಗೂ ಕೂಡ ಡೊನೇಷನ್ ಭೂತ
ಕುಣಿದು ಕುಪ್ಪಳಿಸುತ್ತಲೇ ಇದೆ.
ಸರ್ಕಾರವೂ ಕೂಡ ಡೊನೇಷನ್
ಹಾವಳಿ ತಡೆಗಟ್ಟುವಲ್ಲಿ ವಿಫಲವಾ
ಗಿದೆ.ಒಂದೆಡೆ ಕಡ್ಡಾಯ ಶಿಕ್ಷಣ ಹಕ್ಕು
ಕಾಯಿದೆಯನ್ನು ಜಾರಿಗೊಳಿಸಲಾ
ಗಿದೆ. ಇದರ ಹೊರತಾಗಿಯೂ ಬಡ,
ಮಧ್ಯಮ ವರ್ಗದವರಿಗೆ ಗುಣಮ
ಟ್ಟದ ಶಿಕ್ಷಣ ಅಲಭ್ಯವಾಗಿದೆ.
ಶಿಕ್ಷಣ ಹಕ್ಕು (RTE) ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ: ಪುಸ್ತಕ ಸಹ ಉಚಿತ:
ಈ ಕಾಯ್ದೆಯ ಪ್ರಕಾರ, ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರವೇ ಉಚಿತ ಶಿಕ್ಷಣವನ್ನು ಒದಗಿಸುತ್ತದೆ ಮತ್ತು ವಿದ್ಯಾರ್ಥಿಗಳ ಬೋಧನಾ ಶುಲ್ಕವನ್ನು ಸರ್ಕಾರದ ವತಿಯಿಂದಲೇ ಸಂಬಂಧಪಟ್ಟ ಶಾಲೆಗಳಿಗೆ ಮರುಪಾವತಿಸಲಾಗುತ್ತದೆ.ಉಚಿತವಾಗಿ ಪುಸ್ತಕ ವನ್ನು ಸಹ ವಿತರಿಸಲಾಗುತ್ತದೆ.
RTE ಶುಲ್ಕಕ್ಕೆ ಸಂಬಂಧಿಸಿದ ಪ್ರಮುಖ ವಿವರಗಳು
ಈ ಕೆಳಗಿನಂತಿವೆ:ಶುಲ್ಕ ಪಾವತಿಸಬೇಕಾಗಿಲ್ಲ: RTE ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಯಾವುದೇ ಬೋಧನಾ ಶುಲ್ಕ (Tuition Fee) ಪಾವತಿಸಬೇಕಾಗಿಲ್ಲ.ಅಕ್ರಮ ಶುಲ್ಕಕ್ಕೆ ಅವಕಾಶವಿಲ್ಲ: ಒಂದು ವೇಳೆ ಶಾಲೆಗಳು ಪೋಷಕರಿಂದ ಯಾವುದೇ ಪ್ರವೇಶ ಶುಲ್ಕ ಅಥವಾ ಇತರ ದೇಣಿಗೆಗಳನ್ನು ವಸೂಲಿ ಮಾಡಲು ಮುಂದಾದಲ್ಲಿ, ಅದು ಕಾನೂನುಬಾಹಿರವಾಗಿರುತ್ತದೆ.
ಸರ್ಕಾರದಿಂದ ಮರುಪಾವತಿ:
ರಾಜ್ಯ ಸರ್ಕಾರವು ಪ್ರತಿ ಮಗುವಿನ ಶಿಕ್ಷಣದ ವೆಚ್ಚವನ್ನು ನಿರ್ಧರಿಸಿ, ಆಯಾ ಖಾಸಗಿ ಶಾಲೆಗಳಿಗೆ ನೇರವಾಗಿ ಶುಲ್ಕ ಮರುಪಾವತಿ ಮಾಡುತ್ತದೆ.
ಜೊತೆಗೆತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ
ಓದಿಸಬೇಕೆಂಬ ಪೋಷಕರ ಮಹಾ
ದಾಸೆಯೂ ಕೂಡ, ಡೊನೇಷನ್
ಹಾವಳಿ ಹೆಚ್ಚಲು ಕಾರಣವಾಗಿದೆ.
ನಗರದಲ್ಲಿ ಸರ್ಕಾರದ ಆದೇಶ
ಉಲ್ಲಂಘಿಸಿ ಡೊನೇಷನ್ ವಸೂಲಿ
ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ
ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ವರಿಷ್ಟಾಧಿಕಾರಿಗಳು, ಕಠಿಣ ಕಾನೂನು ಕ್ರಮಜರುಗಿಸಬೇಕೆಂದು
ಆಗ್ರಹಿಸಿದ್ದಾರೆ.
ಸುಲಿಗೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗೆಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೇ ಡೊನೇ ಷನ್
ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ
ಮೇಲೆ DDPI ಮತ್ತು BEO ರವರು ದೀಡೀರ್ದಾಳಿ ನಡೆಸಿ ಸೂಕ್ತವಾದ ಕಾನೂನು ರೀತ್ಯಾ ಕ್ತಮ ಕೈಗೊಳ್ಳ ಬೇಕು ಎಂಬುದು ನೊಂದ ವಿದ್ಯಾರ್ಥಿಗಳ ಪೋಷಕರ ಒತ್ತಾಯವಾಗಿದೆ.

Leave a Comment