ಶಿವಮೊಗ್ಗ:ಅಕ್ರಮ ಮರಳುಗಾರಿಕೆಯ ಜಾಲದ ಹಿಂದೆ ಬಲಾಢ್ಯ 4 ಜನ ಪತ್ರಕರ್ತರು!! ರಿಟೈರ್ಡ್ ಎಸ್.ಪಿ?!! ಹೀಗೂ ಉಂಟೆ?

ಶಿವಮೊಗ್ಗದಲ್ಲಿ ಮೇ 30, 2026 ಶನಿವಾರ ಅಕ್ರಮ ಮರಳು ದಂಧೆ ಮೇಲೆ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ.

ಶಿವಮೊಗ್ಗ:  ಈ ಅಕ್ರಮ ಮರಳುಗಾರಿಕೆಯ ಜಾಲದ ಹಿಂದೆ ಬಲಾಢ್ಯ 4 ಜನ ಪತ್ರಕರ್ತರು , ಒಬ್ಬರು ತೀರ್ಥಹಳ್ಳಿ, ಒಬ್ಬರು ಭದ್ರಾವತಿ,ಇಬ್ಬರು ಶಿವಮೊಗ್ಗದಲ್ಲಿ ನೆಲೆಸಿದವರು ಎಂದು ಹೇಳಲಾಗುತ್ತಿದೆ.ಶಿವಮೊಗ್ಗದ ಒಬ್ಬ Journalist ಅಂತು 5-6 ವರ್ಷದಿಂದ 2-3 ಟಿಪ್ಪರ್ ಇಟ್ಟುಕೊಂಡು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಮಾಧ್ಯಮ ವಲಯದಲ್ಲಿ ಮತ್ತು ಸಾರ್ವಜನಿಕವಲಯದಲ್ಲಿ ಚರ್ಚಿತವಾಗುತ್ತಿರುವ ಸುದ್ದಿಯಾಗಿದೆ.ಈತನನ್ನು ಕೂಡಲೇ ಅರೆಸ್ಟ್ ಮಾಡಬೇಕು ಎನ್ನುವುದು ನೈಜ ಸಮಾನ ಪತ್ರಕರ್ತರ ಒತ್ತಾಸೆಯಾಗಿದೆ.ಇದೀಗ ಹಲವು ಪತ್ರಕರ್ತರ ಹೆಸರು ಹರಿದಾಡುತ್ತಿದೆ. ಯಾರಿರಬಹುದು ಎಂಬ ಚರ್ಚೆ ಇದೀಗ ಶುರುವಾಗಿದೆ. ಅಕ್ರಮ ಮರಳುಗಾರಿಕೆಯಿಂದ ಕೆಲವು ಶಿವಮೊಗ್ಗದ ಪತ್ರಕರ್ತರು ಸಂಪಾಗಿದ್ದಾರೆ.ಆ ಬಗ್ಗೆ ಸಹ ತನಿಖೆಯಾಗ ಬೇಕು ಎನ್ನುವುದು ಆಗ್ರಹವಾಗಿದೆ.
ಈ ಅಕ್ರಮ ಮರಳುಗಾರಿಕೆಯ ಜಾಲದ ಹಿಂದೆ ಪೋಲೀಸ್ ಅಧಿಕಾರಿಗಳು,ಪೋಲೀಸರು,ನಿವೃತ್ತ ಎಸ್.ಪಿ ಸಹ ಇದ್ದಾರೆ ಎಂದು ಹೇಳಲಾಗುತ್ತಿದೆ.ಅದೇ ರೀತಿಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ನೇರವಾಗಿ ಶಾಮೀಲು ಆಗಿ ನಡೆಯುತ್ತಿತ್ತು ಎಂದು ಇದೀಗ ಶಿವಮೊಗ್ಗದಲ್ಲಿ ಹರಿದಾಡುತ್ತಿರುವ ಸುದ್ದಿ ಚರ್ಚಿತವಾಗುತ್ತಿರುವ ಸುದ್ದಿಯಾಗಿದೆ.ಲೋಕಾಯುಕ್ತದಿಂದ ಈಗಾಗಲೇ ನೋಟಿಸ್ ಹೋಗಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.
ಈ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ.ಇದರ ಜೊತೆಗೆ, ಅಕ್ರಮ ಮರಳು ಸಾಗಣೆಗೆ ಅನುವು ಮಾಡಿಕೊಟ್ಟಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತರು ಮಾಹಿತಿ ನೀಡಿದ್ದಾರೆ.

ಈ ಶೋಧ ಕಾರ್ಯಾಚರಣೆಯು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯು ಸ್ವಯಂಪ್ರೇರಿತವಾಗಿ ದಾಖಲಿಸಿದ ಪ್ರಕರಣದ ಆಧಾರದ ಮೇಲೆ ನಡೆದಿದೆ.ಲೋಕಾಯುಕ್ತಕ್ಕೆ ದಾಳಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಕಾರ್ಯಾಚರಣೆಯಲ್ಲಿ 17,000 ಮೆಟ್ರಿಕ್ ಟನ್ ಮರಳು ಮತ್ತು 52 ವಾಹನಗಳನ್ನು ಜಪ್ತಿ ಮಾಡಲಾಗಿದೆ.ಲೋಕಾಯುಕ್ತ ಎಸ್.ಪಿ.ಚಂದ್ರಶೇಖರ್ 12 ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ನಡೆದಿತ್ತು.

ದಾಳಿಯ ಪ್ರಮುಖ ವಿವರಗಳು:
ಕಾರ್ಯಾಚರಣೆಯ ಹೆಸರು ತುಷಾರ,ಎರಡು ತಿಂಗಳಿಂದ ಸಿದ್ದತೆ, ಸಾರ್ವಜನಿಕರ ದೂರು,ಮಾಧ್ಯಮಗಳಲ್ಲಿ ಬಂದ ದೂರು ಆಧರಸಿ ಲೋಕಾಯುಕ್ತ ನ್ಯಾಯಾಮೂರ್ತಿ ಬಿ.ಎಸ್.ಪಾಟೀಲ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ  ದಾಳಿ ಮಾಡಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆಗೆ ಬ್ರೇಕ್ ಹಾಕಿದ್ದಾರೆ.ಈ ದಾಳಿಯಿಂದ ಜಿಲ್ಲೆಯಲ್ಲಿನ  ಮರಳು ಮಾಫಿಯಾಕ್ಕೆ ದೊಡ್ಡ ಏಟು ಬಿದ್ದಿದೆ

ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ಅಕ್ರಮ ಮರಳು ಅಡ್ಡಿಗಳು,ಭದ್ರಾವತಿ,ತೀರ್ಥಹಳ್ಳಿ, ಹೊಸನಗರ,ಸಾಗರ

ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಮೇ 30ರ ಶನಿವಾರದಂದು ಸುಮಾರು 25 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಸುಮಾರು 17000 ಸಾವಿರ ಮೆಟ್ರಿಕ್ ಟನ್‌ನಷ್ಟು ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಹಾಗೂ 52 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳ ತುಂಗಭದ್ರಾ ಹಾಗೂ ಶರಾವತಿ ನದಿ ತೀರಗಳಲ್ಲಿ ಈ ದಾಳಿಗಳು ನಡೆದಿವೆ. ಅಲ್ಲದೆ, ಶಿವಮೊಗ್ಗದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳ ಕಚೇರಿ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಈ ಅಕ್ರಮ ಮರಳುಗಾರಿಕೆಯ ಜಾಲದ ಹಿಂದೆ ಬಲಾಢ್ಯರು ಇದ್ದು, ಈ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ.ಇದರ ಜೊತೆಗೆ, ಅಕ್ರಮ ಮರಳು ಸಾಗಣೆಗೆ ಅನುವು ಮಾಡಿಕೊಟ್ಟಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತರು ಮಾಹಿತಿ ನೀಡಿದ್ದಾರೆ.

ಈ ಶೋಧ ಕಾರ್ಯಾಚರಣೆಯು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯು ಸ್ವಯಂಪ್ರೇರಿತವಾಗಿ ದಾಖಲಿಸಿದ ಪ್ರಕರಣದ ಆಧಾರದ ಮೇಲೆ ನಡೆದಿದೆ.

ತೀರ್ಥಹಳ್ಳಿ ಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೆಲವು ಅಕ್ರಮ ಮರಳು ಕೋರೆಗಳಿಗೆ ಬೇಟಿ ನೀಡಿಲ್ಲ ದಾಳಿ ಮಾಡಿಲ್ಲ ಎಂಬ ಬಗ್ಗೆ ಸಹ ಚರ್ಚೆ ಆಗುತ್ತಿದೆ.

ಶಿವಮೊಗ್ಗದಲ್ಲಿ ತುಂಗಾನಗರದಲ್ಲಿ ಹಾಗೂ ಶಿವಮೊಗ್ಗ ನಗರದ  ಹಲವು ಕಡೆ ಕಡೆ ನೂರಾರು ಲೋಡ್ ಮರಳು ಸಂಗ್ರಹಿಸಲಾಗಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಈ ಬಗ್ಗೆ ಸಹ ಪೋಲೀಸ್ ಇಲಾಖೆ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳು ಗಮನಹರಿಸಿ ಸೂಕ್ತವಾದ ಕಾನೂನು ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಗಣಿ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ರಾ,ಕಡ್ಲೆಕಾಯಿ ತಿಂತಿದ್ರಾ, ಇವರಿಗೆ ಇದೆಲ್ಲಾ ಗೊತ್ತಿಲ್ವಾ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚಿತ ವಾಗುತ್ತಿರುವ ವಿಷಯವಾಗಿದೆ.

ಈಗಲೂ ಅಕ್ರಮವಾಗಿ ಮರಳು ಸಾಗಾಣೆ ನಡೆಯುತ್ತಾ ಇದೆ. ತೀರ್ಥಹಳ್ಳಿ ಭಾಗದಲ್ಲಿ,ಶಿವಮೊಗ್ಗದ ಹೊರವಲಯದಲ್ಲಿ ನಿಂತಿಲ್ಲ ಎಂದು ಹೇಳಲಾಗುತ್ತಿದೆ.
 




ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.