ಗೋಪಾಲಗೌಡ ಬಡಾವಣೆಯಲ್ಲಿ ಅರ್ಧಗಂಟೆ ಮಳೆಗೆ ಮನೆಗೆ ನುಗ್ಗಿದ ನೀರು :ಸುದ್ದಿ ತಿಳಿದ ಶಿವಮೊಗ್ಗ MLA ಚನ್ನಬಸಪ್ಪ(ಚೆನ್ನಿ) ಬೇಟಿ- ಪರಿಶೀಲನೆ.
ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಲ್ಲಿ ನಿನ್ನೆ ಸುರಿದ ಅರ್ಧ ಗಂಟೆ ಮಳೆಗೆ ರಾಜಕಾಲುವೆ ಭರ್ತಿ ಆಗಿ ಕೆರೆ ಅಂತಾಗಿ ಕೆಲವು ಮನೆಗೆ ನೀರು ನುಗ್ಗಿದ ಘಟನೆ ನಡೆಯಿತು.
ಸ್ಥಳೀಯರು ಸದರಿ ಸುದ್ದಿಯನ್ನು ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ ರವರಿಗೆ ಪೋನ್ ಮುಖಾಂತರ ಸಮಸ್ಯೆಯನ್ನು ತಿಳಿಸಿದಾಗ ತಕ್ಷಣ ಸ್ಪಂದಿಸಿ ಬೆಂಗಳೂರು ನಿಂದ ಬರುತ್ತಿದ್ದ ಅವರು ನೇರವಾಗಿ ರಾತ್ರಿ 9 ಗಂಟೆಗೆ ಸದರಿ ಗೋಪಾಲಗೌಡ ಬಡಾವಣೆಗೆ ಬಂದು ವೀಕ್ಷಿಸಿದರು.ಸಮಸ್ಯೆ ಆಲಿಸಿದರು.
ಸ್ಥಳೀಯ ಬಡಾವಣೆಯ ಜನರೋಂಧಿಗೆ ಏನು ಸಮಸ್ಯೆ ಆಗಿದೆ ಎಂಬುದನ್ನು ವೀಕ್ಷಿಸಿದರು.ಸ್ಥಳದಲ್ಲಿ ಹಾಜರಿದ್ದ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಮತ್ತು ಇತರ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೇ ಸೂಚಿಸಿದರು.
ಸದರಿ ಬಡಾವಣೆಯಲ್ಲಿ 4-5 ವರ್ಷದಿಂದ ಮಳೆಗಾಲ ಬಂದಾಗ ಗೋಪಾಲಗೌಡ ಬಡಾವಣೆಯ ಎ ಬ್ಲಾಕ್,ಬಿ ಬ್ಲಾಕ್,ಸಿ ಬ್ಲಾಕ್ ನಲ್ಲಿ ಇದೇ ಸಮಸ್ಯೆ ರಿಪೀಟ್ ಆಗುತ್ತಿದ್ದು ಶಾಶ್ವತವಾಗಿ ಈ ಸಮಸ್ಯೆ ಬಾರದಂತೆ ಮುಂದಿನ ದಿನಗಳಲ್ಲಿ ಕ್ತಮ ಕೈಗೊಳ್ಳುವುದಾಗಿ MLA ಚನ್ನಬಸಪ್ಪ ತಿಳಿಸಿದರು. ಸ್ಥಳದಲ್ಲಿ ಇದ್ದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಕೆಲವು ಮನೆಗಳಿಗೆ ನೀರು ನುಗ್ಗಿದ್ದು,ನೀರಿನ ಸಂಪ್ಗಳಿಗೆ ಸಹ ಗಲೀಜು ನೀರು ಹೋಗಿದ್ದರಿಂದ, ಸಮಸ್ಯೆ ಆಗಿದೆ ಎಂದು ಪತ್ರಕರ್ತರು ನಾಗರಾಜ್ ತಿಳಿಸಿದಾಗ ಮೋಟಾರ್ ತಂದು ನೀರು ಪಂಪ್ ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಅದನ್ನು ಸಹ ಅಧಿಕಾರಿಗಳು ಕಾರ್ಯಗತ ಮಾಡಿದ್ದಾರೆ.
ಅದೇ ರೀತಿಯಲ್ಲಿ ರಾಜಕಾಲುವೆ ಬಿಡ್ಜ್ ಹತ್ತಿರ ಕಸ ಜಾಮ್ ಆಗಿದ್ದನ್ನು ಇಂದು ಪೆಂಚಾಲಯ್ಯ ಮೇಸ್ತ್ರಿ ರವರು ಹಬ್ಬ ಇದ್ದರೂ ಸಹ ಸ್ಥಳಿಯ ಜನರ ಸಮಸ್ಯೆ ಗಳಿಗೆ ಸ್ಪಂದಿಸುವ ಮೂಲಕ ಕಾರ್ಯ ನಿರ್ವಹಿಸಿದ್ದಾರೆ. ಜೆಸಿಬಿ ಮುಖಾಂತರ ಅಡೆತಡೆಯಾಗಿದ್ದ ಕಾಲುವೆಯ ಮಣ್ಣನ್ನು ಕಸವನ್ನು ತೆಗೆಸಿರುತ್ತಾರೆ.ಜನರ ಸಮಸ್ಯೆ ಗಳಿಗೆ ಸ್ಪಂದಿಸಿದ್ದಾರೆ ಅಂತಾ ಹೇಳಬಹುದು.
ಕೂಡಲೇ ಸ್ಪಂದಿಸಿದ MLA ಚನ್ನಬಸಪ್ಪ ಮತ್ತು ಇತರೇ ಅಧಿಕಾರಿಗಳಿಗೆ ಹಾಗೂ ಪೆಂಚಲಯ್ಯ ಮೇಸ್ತ್ರಿ ಗೆ ಸ್ಥಳಿಯರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಿಯ ಬಿಜೆಪಿ ಮುಖಂಡರಾದ ಅಶೋಕ್,ಪತ್ರಕರ್ತ ನಾಗರಾಜ್, ಗೋಣಿ ಬಸಪ್ಪ ಸೇರಿದಂತೆ ಸ್ಥಳೀಯರು ಹಾಜರಿದ್ದರು.

Leave a Comment