ಶಿವಮೊಗ್ಗ ಕ್ಷೇತ್ರ-113 ಭೂತ್ ನಂ.221 BLO ನಾಗಮ್ಮ ಮತ್ತು ಅವರ ತಂಡದ SIR-2026 ಪ್ರಕ್ರಿಯೆ ಸೂಪರ್: ಮತದಾರರ ಮೆಚ್ಚುಗೆ
ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಭೂತ್ ಮಟ್ಟದಲ್ಲಿ SIR-2026 ಪ್ರಕ್ರಿಯೆ ನಡೆಯುತ್ತಿದೆ.ಅದರಲ್ಲಿ ವಿಧಾನ ಸಭಾ ಕ್ಷೇತ್ರದ 113 ಶಿವಮೊಗ್ಗ, ಭೂತ್ ನಂಬರ್ 221 ವಾಣಿಜ್ಯ ತೆರಿಗೆ ಭವನ,ACTO ಕಚೇರಿ ಗೋಪಾಳ,ಶಿವಮೊಗ್ಗದಲ್ಲಿನ SIR-2026 ಪ್ರಕ್ರಿಯೆ ತುಂಬಾ ಅಚ್ಚುಕಟ್ಟಾಗಿ ಚೆನ್ನಾಗಿ ನಡೆಯುತ್ತಿದೆ.
ಭೂತ್ ನಂಬರ್ 221 BLO ನಾಗಮ್ಮ ಮತ್ತು ಅವರ ಪಾಲಿಕೆಯ ತಂಡದ ಕಾರ್ಯ ಚಟುವಟಿಕೆ SIR-2026 ಪ್ರಕ್ರಿಯೆ ಸೂಪರ್ ;
ನಾನು BLO ನಾಗಮ್ಮರವರನ್ನು ನಾನು ಇದುವರೆಗೂ ಸರಿಯಾಗಿ ನೋಡಿರಲಿಲ್ಲ. SIR ಪ್ರಕ್ರಿಯೆ ಜೂನ್ 30 ರಂದು ಶುರುವಾದ ನಂತರ ನನಗೆ ಒಂದು ಪೋನ್ ಬಂತು ಸರ್ SIR ಪ್ರಕ್ರಿಯೆ ಶುರುವಾಗಿದೆ SIR ಫಾರಂ ಕೊಡುತ್ತಿದ್ದೆವೆ. ನೀವು ಬಂದು ತೆಗೆದು ಕೊಂಡು ಹೋಗಿ ಸರ್ ಅಂತಾ ಹೇಳಿದರು.
ಆಗಾಗಿ ನಾನೇ BLO ನಾಗಮ್ಮ ಅವರು ಇದ್ದಲ್ಲಿಗೆ ಹೋದೆ ಅದು ಸಮಯ ಆ ದಿನ ರಾತ್ರಿ 7 ಗಂಟೆ ಆಗಿತ್ತು ಆದರೂ ಕರ್ತವ್ಯವನ್ನು ಮಾಡುತ್ತಿದ್ದಾರೆ. ಅವರು ಒಬ್ಬರೆ ವಾಣಿಜ್ಯ ತೆರಿಗೆ ಭವನದ ಎದುರು ಕೂತುಕೊಂಡು ಬಂದವರಿಗೆ SIR ಫಾರಂ ಕೊಡುತ್ತಿದ್ದರು.
ಆ ಸಮಯದಲ್ಲಿ ಅಂದು ಆ ದಿನ ಶಿವಮೊಗ್ಗದಲ್ಲಿ ಮಳೆ ಬರುತ್ತಿತ್ತು ಸರ್ ಆಗಾಗಿ ಮನೆಯ ಹತ್ತಿರ ಬಂದು SIR Form ಕೊಡಲು ಆಗಲಿಲ್ಲ ಸರ್ ಬೇಜರಾಗಬೇಡಿ ನಾನು ಮಹಿಳೆ ಬೇರೆ ನಮ್ಮ ಭೂತ್ ನಲ್ಲಿ 900 ಜನ ಮತದಾರರು ಇದ್ದಾರೆ ಆಗಾಗಿ ಎಲ್ಲರಿಗೂ ಮನೆ ಮನೆಗೆ ಹೋಗಿ form ಕೊಡುವುದು ಕಷ್ಟ ಎಂದು ಹೇಳಿಕೊಂಡರು.
ನಾನು ಏನು ಮೇಡಮ್ ಇಷ್ಟು ರಾತ್ರಿಯಲ್ಲಿ 7 ಗಂಟೆಗೆ ನೀವು ಇನ್ನು ಮನೆಗೆ ಹೋಗಿಲ್ಲ ಯಾಕೇ ಮೇಡಮ್ ಅಂತಾ ನಾನು ಕೇಳಿದೆ. ಸರ್ ಇವತ್ತು ಡಿ.ಸಿ ಸಾಹೇಬರವರ ಮೀಟಿಂಗ್ ಇತ್ತು.ಚೆನ್ನಾಗಿ ಉಗಿದಿದ್ದಾರೆ.ಯಾರಾದರೂ ಕರ್ತವ್ಯ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿದರೇ ಕಂಪ್ಲೆಂಟ್ ಬಂದರೇ ಮನೆಗೆ ಕಳಿಸುತ್ತೆನೆ ಎಂದು ಎಲ್ಲಾ BLO ಮತ್ತು ಅಧಿಕಾರಿ ಗಳಿಗೆ ಹೇಳಿದ್ದಾರೆ ಸರ್ ಅದಕ್ಕೆ ಇದ್ದೆನೆ ಸರ್ ಎಂದರು. ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡಬೇಕು ಎಂದು ಹೇಳಿದರು.ನಿಜವಾಗಿಯೂ ಇವರ ಶ್ರದ್ದೆ ಕಾರ್ಯವನ್ನು ಮೆಚ್ಚಬೇಕು. ಅಂದು ನಮ್ಮ ಮನೆಯವರದು ಎಲ್ಲರ SIR form ಕೊಟ್ಟು ಕಳುಹಿಸಿದರು.
ಆ ಮೇಲೆ BLO ನಾಗಮ್ಮರವರು ಅವರು ಅಷ್ಟಕ್ಕೇ ಬಿಡಲಿಲ್ಲ ಸರ್ ವಾಣಿಜ್ಯ ತೆರಿಗೆ ಭವನದಿಂದ ಇದೀಗ ಗೋಪಾಳಗೌಡ ಬಡಾವಣೆಯಲ್ಲಿ D ಬ್ಲಾಕ್ ಕ್ರೀಡಾ ಭವನಕ್ಕೆ ಬಂದಿದ್ದೆವೆ. ನೀವು SIR ಫಾರಂ ಭರ್ತಿ ಮಾಡಿ ತಂದು ಕೊಡಿ ಎಂದು ತಿಳಿಸಿದರು. ಇವರು ಭೂತ್ ನಂಬರ್ 221 ರ ಮತದಾರರ ವ್ಯಾಟ್ಸಪ್ ಗ್ರೂಪ್ ಸಹ ಮಾಡಿಕೊಂಡು ಅದರಲ್ಲಿ SIR-2026 ಪ್ತಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಹ ನೀಡುತ್ತಿದ್ದಾರೆ. BLO ನಾಗಮ್ಮ ರವರ ಕಾರ್ಯವನ್ನು ಮೆಚ್ಚಿ ಶ್ಲಾಘಿಸ ಬೇಕಾಗಿದೆ.ಇವರೆಲ್ಲರೂ ಬೆಳಿಗ್ಗೆಯಿಂದ ಸಂಜೆಯವರೆಗೂ ಸದರಿ ಜಾಗದಲ್ಲಿ ವಾಸ್ತವ್
ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ.ಆಗಾಗಿ ಇವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೆನೆ.
ಅದೇ ರೀತಿ 221 ಭೂತ್ ನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ವಸಂತ್ ಕುಮಾರ್ ಮತ್ತು ಪಾಲಿಕೆಯ ಕಂಪ್ಯೂಟರ್ ಆಪರೇಟರ್ ವರುಣ್ ಸಹ ಇದ್ದಾರೆ. ನಾನು ದಿನಾಂಕ:15-7-2026 SIR Form ಭರ್ತಿ ಮಾಡಿದ್ದನ್ನು ಸುಮಾರು 4 ಗಂಟೆಗೆ ಕೊಡಲು ಗೋಪಾಲಗೌಡ ಬಡಾವಣೆಯಲ್ಲಿ ಡಿ ಬ್ಲಾಕ್ ನಲ್ಲಿ ಕ್ರೀಡಾಭವನದ ಹತ್ತಿರ ಹೋದೆ.ಆಗ ಅಲ್ಲಿ BLO ನಾಗಮ್ಮ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ವಸಂತ್ ಕುಮಾರ್ ಹಾಗೂ ಪಾಲಿಕೆಯ ಕಂಪ್ಯೂಟರ್ ಆಪರೇಟರ್ ವರುಣ್ ಸಹ ಇದ್ದರು. ನಾನು ನಮ್ಮ ಫ್ಯಾಮಿಲಿಯ ನಾಲ್ಕು SIR form ಭರ್ತಿ ಮಾಡಿದ್ದನ್ನು ಅಲ್ಲಿರುವ BLO ನಾಗಮ್ಮ ರವರಿಗೆ ಕೊಟ್ಟೆ ಕೊಟ್ಟ ತಕ್ಷಣ ಒಂದು ಫಾರಂ ಅವರು ಇಟ್ಟುಕೊಂಡು ಇನ್ನೋಂದು ಫಾರಂಗೆ ತಾವು ಫಾರಂ ಸ್ವೀಕರಿಸಿದ ಬಗ್ಗೆ ಸಹಿ ಮಾಡಿಕೊಟ್ಟರು. ಅಲ್ಲೆ ಇದ್ದ ಪಾಲಿಕೆ ಅಧಿಕಾರಿ ವಸಂತ್ ಕುಮಾರ್ ರವರಗೆ ತೋರಿಸಿದರು. ಅವರು ತಕ್ಷಣ ಅಲ್ಲೆ ಇದ್ದ ಕಂಪ್ಯೂಟರ್ ಆಪರೇಟರ್ ವರುಣ್ ಗೆ updates ಮಾಡಲು ಕೊಟ್ಟರು.ಕ್ಷಣಾರ್ಧದಲ್ಲಿ ಕಂಪ್ಯೂಟರ್ ಆಪರೇಟರ್ ವರುಣ್ ಸ್ಕ್ಯಾನ್ ಮಾಡಿ ಮೊಬೈಲ್ ನಲ್ಲೆ ನಮ್ಮ 4 SIR form updates ವಿವರಗಳನ್ನು ಮ್ಯಾಪಿಂಗ್ ಮಾಡಿದರು.ನಿಜವಾಗಿಯೂ ಇವರ ಕಾರ್ಯವನ್ನು ಮೆಚ್ಚುವಂತಹದ್ದು.
ಕಂಪ್ಯೂಟರ್ ಆಪರೇಟರ್ ವರುಣ್ ಗೆ
ಪಾಲಿಕೆ ಆಯುಕ್ತರು ಸನ್ಮಾನಿಸಿ ಗೌರವಿಸಲೀ...
ಕಂಪ್ಯೂಟರ್ ಆಪರೇಟರ್ ವರುಣ್ ಗೆ ಅತ್ಯುತ್ತಮ ಕಂಪ್ಯೂಟರ್ ಆಪರೇಟರ್ ಎಂದು ಜಿಲ್ಲಾಧಿಕಾರಿಗಳು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ರಾದ ಮಾಯಣ್ಣಗೌಡರುರವರು ಇವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಬೇಕು.
ಜಿಲ್ಲಾಡಳಿತ ಮತ್ತು ಚುನಾವಣಾ ಅಧಿಕಾರಿಗಳು ಕಂಪ್ಯೂಟರ್ ಆಪರೇಟರ್ ಗಳಿಗೆ ಕಂಪ್ಯೂಟರ್ ವೈಫೈ ಸೌಲಭ್ಯಗಳನ್ನು ನೀಡಬೇಕಾಗಿತ್ತು.ಆದರೆ ನೀಡಿಲ್ಲ.ಆದರೂ ಸಹ ಭೂತ್ ನಂ.221 ತಂಡ SIR -2026 ಪ್ರಕ್ರಿಯೆ ಯನ್ನು ಶೇಕಡ 60 ಭಾಗ ಸುಮಾರು 500 ಜನ ಮತದಾರರ SIR form ವಿವರದ ಮ್ಯಾಫಿಂಗ್ ಮಾಡಿ ಮುಗಿಸಿರುವುದಾಗಿ ಮಾಹಿತಿಯನ್ನು ನೀಡಿದರು.
ಜಿಲ್ಲಾಡಳಿತ ಚುನಾವಣಾಧಿಕಾರಿಗಳು ಅಭಿನಂದಿಸಿ ಸನ್ಮಾನಿಸಲೀ...
ಜಿಲ್ಲಾಡಳಿತ ಮತ್ತು ಚುನಾವಣಾ ಅಧಿಕಾರಿಗಳು ಭೂತ್ ನಂಬರ್ 221 ರ BLO ನಾಗಮ್ಮಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ವಸಂತ್ ಕುಮಾರ್ ಹಾಗೂ ಪಾಲಿಕೆಯ ಕಂಪ್ಯೂಟರ್ ಆಪರೇಟರ್ ವರುಣ್ ಅವರ ಕಾರ್ಯವನ್ನು ಶ್ಲಾಘಿಸಿ,ಅಭಿನಂಧಿಸಿ ಸನ್ಮಾನಿಸ ಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ.
SIR ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಕರ್ತವ್ಯವನ್ನು ನಿರ್ವಹಿಸುತ್ತಿರುವ ಮತ್ತು ಅವರ ಅತ್ಯುತ್ತಮ ಸೇವೆಗೆ ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆಯ ಬಳಗದ ಕಡೆಯಿಂದ ಭೂತ್ ನಂಬರ್ 221 ತಂಡಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತು ಶಿವಮೊಗ್ಗ ನಗರ ಕ್ಷೇತ್ರದ ಭೂತ್ ಮಟ್ಟದಲ್ಲಿ SIR-2026 ಪ್ರಕ್ರಿಯೆ ನಡೆಯುತ್ತಿದೆ.ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ SIR ಪ್ರಕ್ರಿಯೆ ವ್ಯಾಪಿಸಿದೆ.
ಪ್ರತಿಯೊಂದು ಬೂತ್‌ನಲ್ಲಿ BLO ಮತ್ತು ಚುನಾವಣಾ ಅಧಿಕಾರಿಗಳು ಮನೆ-ಮನೆಗೆ ಭೇಟಿ SIR Form ನೀಡುತ್ತಿದ್ದರೆ., ಕೆಲವು BLO ರವರು ಪೋನ್ ಮಾಡಿ ಮತದಾರರಿಗೆ ತಾವು ಇದ್ದಲ್ಲಿಗೆ ಬರಲು ಹೇಳಿ SIR Form ನೀಡುತ್ತಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ನೇ ಸಾಲಿನ ಮತದಾರ ಪಟ್ಟಿಯನ್ನು 2025ರ ಮತದಾರಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಈ ಬಗ್ಗೆ 2002 ರ ನಂತರ ಮದುವೆಯಾಗಿ ಬಂದವರು ಅಥವಾ ಸ್ಥಳಾಂತರಗೊಂಡವರು/ಹೊಸದಾಗಿ ಸೇರ್ಪಡೆಯಾದವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬಿ.ಎಲ್.ಒ ಮುಖಾಂತರ ಮ್ಯಾಪಿಂಗ್ ಮಾಡಿಕೊಳ್ಳಲು ತಾವು ಹಿಂದೆ ವಾಸ್ತವ್ಯವಿದ್ದ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ನಂಬರ್, ಭಾಗ(ಬೂತ್) ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆಯನ್ನು, ಒಂದು ವೇಳೆ ನಿಮ್ಮ ಹೆಸರು 2002 ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನಿಮ್ಮ ತಂದೆ -ತಾಯಿಯವರ ಕ್ರಮ ಸಂಖ್ಯೆ ಅಥವಾ ಅಜ್ಜ -ಅಜ್ಜಿಯರ ಕ್ರಮ ಸಂಖ್ಯೆಯೊಂದಿಗೆ ಮಾಹಿತಿಯನ್ನು ಸಂಬಂಧಪಟ್ಟ BLO (Booth Level officer) ರವರಲ್ಲಿ ನೀಡಿ ಮ್ಯಾಪಿಂಗ್ ಮಾಡಿಕೊಳ್ಳ ಬಹುದು.
*2002 ರ ಮತದಾರರ ಪಟ್ಟಿ* https://ceo.karnataka.gov.in/363/electoral-roll--2002/en
ಕರ್ನಾಟಕದಲ್ಲಿ 2026-ನೇ ವರ್ಷದ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR 2026) ಪ್ರಕ್ರಿಯೆ ಜೂನ್ 30, 2026 ರಂದು ಆರಂಭವಾಗಿದೆ ಮತ್ತು ಜುಲೈ 29, 2026 ರವರೆಗೆ ಮನೆ ಮನೆಗೆ ಭೇಟಿ ಮೂಲಕ ಮತದಾರರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
SIR ಪ್ರಕ್ರಿಯೆಯ ಮನೆ-ಮನೆ ಪರಿಶೀಲನೆ SIR Form ವಿತರಣೆ ಅವಧಿ ಇಂದಿಗೂ ಚಾಲ್ತಿಯಲ್ಲಿದೆ ಮತ್ತು ಆಗಸ್ಟ್ 5, 2026 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ.
ಮುಖ್ಯ ದಿನಾಂಕಗಳು (Karnataka SIR 2026)
ಅರ್ಹತಾ ದಿನಾಂಕ: 1 ಅಕ್ಟೋಬರ್ 2026
BLO ಮನೆ-ಮನೆ ಭೇಟಿ: 30 ಜೂನ್ 2026 – 29 ಜುಲೈ 2026 ಇರಲಿದೆ.
ಕರಡು ಮತದಾರರ ಪಟ್ಟಿ ಪ್ರಕಟಣೆ: 5 ಆಗಸ್ಟ್ 2026.
ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಧಿ: 5 ಆಗಸ್ಟ್ 2026 – 4 ಸೆಪ್ಟೆಂಬರ್ 2026.
ಅಂತಿಮ ಮತದಾರರ ಪಟ್ಟಿ ಪ್ರಕಟಣೆ:
7 ಅಕ್ಟೋಬರ್ 2026
ಮತದಾರರಾಗಲು ಅರ್ಹತೆಗಳು
ಭಾರತದ ಸಂವಿಧಾನದ 326ನೇ ವಿಧಿಯ ಪ್ರಕಾರ:
ಭಾರತ ನಾಗರಿಕರಾಗಿರಬೇಕು.
ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಸಂಬಂಧಿತ ವಿಧಾನಸಭಾ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು.
ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹರಾಗಿರಬಾರದು.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ಚೆಕ್ ಮಾಡುವುದು ಹೇಗೆ?
CEO ಕರ್ನಾಟಕ ವೋಟರ್ ಸರ್ಚ್:
https://ceo.karnataka.gov.in ಆಗ್ರಿಯಲ್ಲಿ “Electoral Roll” / “Search in Electoral Roll” ಬಟನ್ ಒತ್ತಿ
ನಿಮ್ಮ ಹೆಸರು, ಎಲ್.ಎ./ವಿಧಾನಸಭಾ ಕ್ಷೇತ್ರ, ಪೋಷಿತ ವಿಭಾಗಗಳನ್ನು ದಾಖಲಿಸಿ ಸರ್ಚ್ ಮಾಡಿ.
National Electoral Roll Portal (NERP):
https://voters.eci.gov.in ಮೂಲಕ ರಾಜ್ಯ, ಕ್ಷೇತ್ರ ಮತ್ತು ವಿವರಗಳನ್ನು ದಾಖಲಿಸಿ ಹೆಸರು ಪರಿಶೀಲಿಸಬಹುದು .
BLO ಸಂಪರ್ಕ:
ನಿಮ್ಮ ಬೂತ್ ಮಟ್ಟದ ಅಧಿಕಾರಿ (BLO) ಅವರನ್ನು ಸ್ವತಃ ಸಂಪರ್ಕಿಸಿ, ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಖಚಿತಪಡಿಸಬಹುದು .
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು / ಪರಿಷ್ಕರಿಸುವುದು ಹೇಗೆ?
BLO ಮನೆ-ಮನೆ ಭೇಟಿ: ಜೂನ್ 30 ರಿಂದ ಜುಲೈ 29 ರಲ್ಲಿ ನಿಮ್ಮ ಮನೆಗೆ BLO ಭೇಟಿ ನೀಡಿ, ಎನ್ಯೂಮರೇಷನ್ ಫಾರಂ ದಾಖಲಿಸುತ್ತಾರೆ.
ಹೊಸದಾಗಿ ಮತದಾರರಾಗಲು ಅಥವಾ-existing ವಿವರಗಳನ್ನು (ಹೆಸರು ಬದಲಾವಣೆ, ವಿಳಾಸ ಬದಲಾವಣೆ, ವಯಸ್ಸು ನವೀಕರಣ ಇತ್ಯಾದಿ) ಪರಿಷ್ಕರಿಸಲು ಅಗತ್ಯ ದಾಖಲೆಗಳನ್ನು (ಆದಾಯ ಪಾಸ್‌ಪೋರ್ಟ್/ಜನ್ಮ ದಿನಾಂಕ ಪ್ರಮಾಣಪತ್ರ, ಪಾಸ್‌ಪೋರ್ಟ್/ವಿಳಾಸ ಪ್ರಮಾಣಪತ್ರ, ಇತ್ಯಾದಿ ಇಟ್ಟುಕೊಳ್ಳಿ.
ಆಗಸ್ಟ್ 5 ರ ನಂತರ ಕರಡು ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಅಥವಾ ವಿವರಗಳು ತಪ್ಪಾಗಿದ್ದರೆ, ಹಕ್ಕು/ಆಕ್ಷೇಪಣೆ ಅರ್ಜಿಯನ್ನು ಸಂಬಂಧಿಕ ಚುನಾವಣಾಧಿಕಾರಿ ಕಚೇರಿಯಲ್ಲಿ ಅಥವಾ ಆನ್‌ಲೈನ್ ಮೂಲಕ ಸಲ್ಲಿಸಬಹುದು.
ನಿಮ್ಮ ನಿರ್ದಿಷ್ಟ ಬೂತ್/ವಿಧಾನಸಭಾ ಕ್ಷೇತ್ರದ ವಿವರಗಳಿಗೆ:
https://ceo.karnataka.gov.in/vfc/details/ ಮೂಲಕ ನಿಮ್ಮ ವೋಟರ್‌ಫ್ರೇಂ ಕೇಂದ್ರ (VFC) ವಿವರ ಪಡೆಯಬಹುದು.

Leave a Comment