ಶಿವಮೊಗ್ಗ- ಸಾರ್ವಜನಿಕರಿಗೆ KHB ನಿವೇಶನ ಕೊಡಿ: High court Judgment -ಶಿವಮೊಗ್ಗದ ಪತ್ರಕರ್ತರು ಸಲ್ಲಿಸಿದ ರಿಟ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

  ಶಿವಮೊಗ್ಗ- ಸಾರ್ವಜನಿಕರಿಗೆ KHB ನಿವೇಶನ ಕೊಡಿ: High court Judgment
ಹೈಕೋರ್ಟ್ ಮೊರೆ ಹೋಗಿದ್ದ 29 ಪತ್ರಕರ್ತರ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಶಿವಮೊಗ್ಗ:18.   ಶಿವಮೊಗ್ಗದ ಸೋಮಿನಕೊಪ್ಪ ಪತ್ರಕರ್ತರ ಲೇಔಟ್ ನಲ್ಲಿ ಪತ್ರಕರ್ತರಿಗೆ ಮೀಸಲಿಟ್ಟಿದ್ದ ನಿವೇಶನಕ್ಕ್ಕೆ ಅರ್ಜಿಯನ್ನು ಆಹ್ವಾನ ಮಾಡಿದ್ದು...82. ಜನ ಶಿವಮೊಗ್ಗದ ಪತ್ರಕರ್ತರು ನಿವೇಶನ ಕೋರಿ ಆನ್ ಲೈನ್ ನಲ್ಲಿ  ಅರ್ಜಿಯನ್ನು ಸಲ್ಲಿಸಿದ್ದು ಸರಿಯಷ್ಟೆ... 

ಈ ಲೀಸ್ಟ್ ನಲ್ಲಿ ಕೆಲವು ಪತ್ರಕರ್ತರ ಹೆಸರು ಬಿಟ್ಟು ಹಿಂದಿನ ವಾರ್ತಾಧಿಕಾರಿ ಮಾರುತಿ ತಾರತಮ್ಯವನ್ನು ಮಾಡಿದ್ದರಿಂದ  ಪತ್ರಕರ್ತರು ಆಕ್ಷೇಪಣೆ ಸಲ್ಲಿಸಿದ್ದರಿಂದ ತಡೆ ಆಗಿತ್ತು.

ಅದೇ ರೀತಿಯಲ್ಲಿ ಸದರಿ ಲೇಔಟ್ ನಲ್ಲಿ ಸಾರ್ವಜನಿಕರು 2009-10 ನೇ ಸಾಲಿನಲ್ಲಿ ನಿವೇಶನ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.ಅವರಿಗೆ ಇದುವರೆಗೂ KHB ಯವರು ನಿವೇಶನ ನೀಡದೇ ಇದ್ದರಿಂದ 10 ಜನ ಸಾರ್ವಜನಿಕರು ನ್ಯಾಯ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಸ್ಟೇ ಕೂಡ ಆಗಿತ್ತು.

ಅದೇ ರೀತಿಯಲ್ಲಿ 29 ಜನ ಶಿವಮೊಗ್ಗದ ಪತ್ರಕರ್ತರು ಇತ್ತಿಚೆಗೆ ಕಳೆದ ತಿಂಗಳು KHB ನಿವೇಶನ ಕೋರಿ  ಅರ್ಜಿಯನ್ನು ಸಲ್ಲಿಸಿದವರು ನಮಗೆ KHB ನಿವೇಶನ ನೀಡುವುದು ತಡವಾಗಿದೆ. ತಕ್ಷಣ KHB ನಿವೇಶನ ಮಂಜೂರು ಮಾಡಿ ಕೊಡಿ ಎಂದು  ಹೈಕೋರ್ಟ್ ಮೊರೆ ಹೋಗಿದ್ದರು... 

ಹೈಕೋರ್ಟ್ ಮೊರೆ ಹೋಗಲು KHB ನಿವೇಶನಕ್ಕೆ ಅರ್ಜಿಯನ್ನು ಸಲ್ಲಿಸಿದ ಕೆಲವು ಪತ್ರಕರ್ತರಿಂದ  ತಲಾ 4000/- ರೂ  ಹಣವನ್ನು ಮತ್ತು ಈ ಹಿಂದೇ 1500/- ಸಾವಿರ ಹಣ ಸಂಗ್ರಹಿಸಿ, ಇದುಆಗದ ಕೆಲಸ, ವಿಫಲವಾದ ಕೆಲಸ ಅಂತಾ ಗೊತ್ತಿದ್ದರೂ 29 ಜನ ಪತ್ರಕರ್ತರು ಇತ್ತೀಚೆಗೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಇದೀಗ ಸೋಲನ್ನು, ಮುಖ ಭಂಗ, ಅವಮಾನ ಅನುಭವಿಸಬೇಕಾಯಿತು. ಇವರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.ಇದೀಗ ಇವರ ಕಥೆಯೇನು...?

ಇದೀಗ ಪತ್ರಕರ್ತರು 29 ಜನ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ದಿನಾಂಕ 11-3-2026 ರಂದು ಕೇಸನ್ನು Dispose ಮಾಡಿದೆ.ಇವರ ಅರ್ಜಿಯನ್ನು ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ..

ಅದೇ ರೀತಿಯಲ್ಲಿ ಪತ್ರಕರ್ತರು ಒಬ್ಬರು ಲೋಕಾಯುಕ್ತಕ್ಕೆ KHB ನಿವೇಶನ ಲಿಸ್ಟ್ ತಾರತಮ್ಯ ದಿಂದ ಕೂಡಿದೆ. ಕೆಲವರ ಹೆಸರನ್ನು ಉದ್ದೇಶ ಪೂರ್ವಕವಾಗಿ  ಹಿಂದಿನ ಅಯೋಗ್ಯ ಅವಿವೇಕಿ ವಾರ್ತಾಧಿಕಾರಿ ಮಾರುತಿ ಬಿಟ್ಟಿದ್ದಾರೆ.ಅನ್ಯಾಯವಾಗಿದೆ ಸರಿಪಡಿಸಿಕೊಡಿ.ಅರ್ಹಪತ್ರಕರ್ತರಿಗೆ ನಿವೇಶನ ಕೊಡಿ ಅನರ್ಹರನ್ನು ಕೈಬಿಡಿ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು,ಇದೀಗ ವಿಚಾರಣೆ ಶುರುವಾಗಿದೆ.

ಇದೀಗ ಹೈಕೋರ್ಟ್ ನ್ಯಾಯಾಲಯದಿಂದ ಈ ಕೇಸಿಗೆ ಸಂಬಂಧಿಸಿದಂತೆ Judgement  ಬಂದಿದೆ.

ಸಾರ್ವಜನಿಕರಿಗೆ KHB ನಿವೇಶನ ಕೊಡಿ: ಹೈಕೋರ್ಟ್ ಆದೇಶ Judgment

 *ಸಾರ್ವಜನಿಕರಿಗೆ KHB ನಿವೇಶನ ಕೊಡಿ ಎಂದು ಹೈಕೋರ್ಟ್ ಪೀಠದ ನ್ಯಾಯಾಧೀಶರು ದಿನಾಂಕ 17-3-2026 ರಂದು ಆದೇಶ ನೀಡಿದ್ದಾರೆ.* Judgment ಆಗಿದೆ.

ಶಿವಮೊಗ್ಗದ 29 ಪತ್ರಕರ್ತರು ಸಲ್ಲಿಸಿದ ರಿಟ್ ತಿರಸ್ಕರಿಸಿದ ಹೈಕೋರ್ಟ್

 *ಅದೇ ರೀತಿಯಲ್ಲಿ ಶಿವಮೊಗ್ಗದ 29 ಪತ್ರಕರ್ತರು ಕಳೆದ ತಿಂಗಳು ಸಲ್ಲಿಸಿದ ರಿಟ್ ಅರ್ಜಿಯನ್ನು ತಿರಸ್ಕರಿಸಿ,ಅರ್ಜಿಯನ್ನು ವಿಲೇವಾರಿ ಗೋಳಿಸಿದ್ದಾರೆ.* 

ಪದೇ ಪದೇ ಒಂದು ಪತ್ರಿಕೆಯ ಹೆಸರಿನಲ್ಲಿ KHB ನಿವೇಶನಕ್ಕೆ ಅರ್ಜಿಯನ್ನು ಸಲ್ಲಿಸಿ ನಿವೇಶನ ಪಡೆಯುವ ಪತ್ರಕರ್ತರಿಗೆ ಇದೋಂದು ಪಾಠವಾಗಿದೆ.

ಆದರೇ ಇದುವರೆಗೂ ಒಂದು ನಿವೇಶನ ಪಡೆಯದ ಪತ್ರಕರ್ತರಿಗೆ, ಸಿಬ್ಬಂಧಿಗಳಿಗೆ KHB ನಿವೇಶನ ನೀಡದೇ ಇರುವುದು ಸಹ ಅನ್ಯಾಯವಾದಂತಾಗಿದೆ.

.ಒಟ್ಟಿನಲ್ಲಿ ಹೈಕೋರ್ಟ್ ಮೆಟ್ಟಿಲು ಏರಿ ನಾವು ನ್ಯಾಯ ಪಡೆಯುತ್ತೆವೆ KHB ನಿವೇಶನ ಪಡೆಯುತ್ತೆವೆ ಎಂದು ಹಣವಸೂಲಿ ಮಾಡಿದ ಲೀಡರ್ ಪತ್ರಕರ್ತರಿಗೆ ಅವಮಾನವಾಗಿದೆ. 

ಇದೀಗ ಪತ್ರಕರ್ತರಿಂದ ಹೈಕೋರ್ಟ್ ಹೆಸರಿನಲ್ಲಿ  ಹಣ ವಸೂಲಿ ಮಾಡಿದ್ದನ್ನು ಕೂಡಲೇ ವಾಪಾಸ್ಸು ನೀಡಬೇಕು ಎನ್ನುವುದು ನಮ್ಮ ಒತ್ತಾಸೆಯಾಗಿದೆ.

ಒಬ್ಬರಿಗೆ ಅನ್ಯಾಯ ಮಾಡಿ ಇನ್ನೊಬ್ಬರಿಗೆ ನಿವೇಶನ ಕೊಡಿಸುತ್ತೆನೆ ಎನ್ನುವ ಪತ್ರಕರ್ತರಿಗೆ ಮತ್ತು ಹಿಂದಿನ ಬ್ರಷ್ಟ,ಅವಿವೇಕಿ ಮಾರುತಿ ವಾರ್ತಾಧಿಕಾರಿಗೆ ಮತ್ತು ಮಹಾನ್ ಪತ್ರಕರ್ತರಿಗೆ ಒಂದು ಪಾಠವಾಗಿದೆ.

ನಮ್ಮ ಹೋರಾಟ ಅರ್ಹ ಪತ್ರಕರ್ತರ ಪರವಾಗಿ ನಿರಂತರ ಇರುತ್ತದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.