ಶಿವಮೊಗ್ಗ ಟ್ರಾಫಿಕ್ ನಿಯಮ ಉಲ್ಲಂಘನೆಗಳ ವಿರುದ್ಧ *ಇ-ಚಲನ್ ವ್ಯವಸ್ಥೆ ಪರಿಣಾಮಕಾರಿಯಾಗಿ* ಜಾರಿ:ಪೋಲಿಸ್ ಪ್ರಕಟಣೆ

*ಶಿವಮೊಗ್ಗ ಜಿಲ್ಲಾ ಪೊಲೀಸ್* ವತಿಯಿಂದ ಜಿಲ್ಲೆಯಲ್ಲಿನ *ವಾಹನ ಸಂಚಾರದ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ* ಮಾಡುವ ಉದ್ದೇಶದಿಂದ *Intelligent Traffic Management System (ITMS)* ಮೂಲಕ ಟ್ರಾಫಿಕ್ ನಿಯಮ ಉಲ್ಲಂಘನೆಗಳ ವಿರುದ್ಧ *ಇ-ಚಲನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ* ಜಾರಿಗೊಳಿಸಲಾಗಿದೆ.

       *2026ನೇ ಸಾಲಿನ ಏಪ್ರಿಲ್ ತಿಂಗಳಿನಿಂದ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆ* ಮಾಡುವ ವಾಹನ ಸವಾರರನ್ನು ಸ್ಥಳದಲ್ಲಿಯೇ ತಡೆದು ದಂಡ ವಿಧಿಸಲಾಗುವುದು. 

ಇದರ ಜೊತೆಗೆ, *ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ಪೋಟೊಗಳನ್ನು  ಜಿಪಿಎಸ್ ಆಧಾರಿತ ಕ್ಯಾಮೆರಾ ಮೂಲಕ ಸೆರೆಹಿಡಿದು, ಐಟಿಎಂಎಸ್ (ITMS) ತಂತ್ರಾಂಶದ ಮೂಲಕ ಇನ್ನಷ್ಟು ಕಟ್ಟುನಿಟ್ಟಾಗಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್ ಪ್ರಕರಣಗಳನ್ನು* ದಾಖಲಿಸಲಾಗುವುದು.

           ಆದ್ದರಿಂದ, ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ತಮ್ಮ ಹಾಗೂ ಇತರರ ಸುರಕ್ಷತೆಯನ್ನು ಕಾಪಾಡುವಂತೆ  ಸೂಚಿಸಲಾಗಿದೆ. *ಜೊತೆಗೆ ತಮ್ಮ ವಾಹನಗಳ ಮೇಲೆ ಬಾಕಿ ಇರುವ ಇ-ಚಲನ್ ದಂಡಗಳನ್ನು ಈ  ಕೆಳಗಿನ ವಿಧಾನಗಳ ಮೂಲಕ ಪಾವತಿಸಬಹುದಾಗಿದೆ.*

ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ಸ್ಥಳಗಳು:-  
1. *ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ*  ದಂಡವನ್ನು ಪಾವತಿಸಬಹುದಾಗಿದೆ.
2. *ಕರ್ತವ್ಯ ನಿರತ ಶಿವಮೊಗ್ಗ ಮತ್ತು ಭದ್ರಾವತಿ ಸಂಚಾರ* ಠಾಣೆಯ ಇ-ಚಲನ್ ಪಿಡಿಎ machine 
     ಹೊಂದಿರುವ ಎಎಸ್ಐ  ಹಾಗೂ  ಮೇಲ್ಪಟ್ಟ  ಪೊಲೀಸ್ ಅಧಿಕಾರಿಗಳ ಬಳಿ ದಂಡವನ್ನು 
     ಪಾವತಿಸಬಹುದಾಗಿದೆ.
3. ಸಾರ್ವಜನಿಕರು ತಮ್ಮ ವಾಹನಗಳ ಮೇಲೆ ಇರುವ ಇ-ಚಲನ್ಗಳನ್ನು online ಈ  ಲಿಂಕ್ *https://echallan.parivahan.gov.in/index/accused-challan* ಮೂಲಕ ದಂಡದ ವಿವರಗಳನ್ನು ವೀಕ್ಷಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.