ಆಕರ್ಷಕ ಬಹುಮಾನ ಹಾಗೂ ಸ್ಕೀಮ್ ಹೆಸರಿನಲ್ಲಿ ಹಣ ವಸೂಲಿ ಮಾಡಿ ವಂಚನೆ‌ ಮೋಸ : 3 ಕೋಟಿಗೂ ಅಧಿಕ ಮೋಸ ಆರೋಪಿ ಬಂಧನ

   ಶಿವಮೊಗ್ಗ: *ಪಿರ್ಯಾದಿ ನಿಖಿಲ್, 27 ವರ್ಷ ಹೊಸ ನಗರ ಇವರಿಗೆ 2023* ರಲ್ಲಿ ನನ್ನ ಸ್ನೇಹಿತರಿಂದ ಪರಿಚಯವಾದ *ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್* ಎಂಬುವವರು ಅಯಾನ್ ಗ್ರೂಪ್ನ ಮಾಲೀಕರಾಗಿದ್ದು, ನಮ್ಮಲ್ಲಿ 13, 16, 21 ತಿಂಗಳ ಸ್ಕೀಮ್ ಗಳು ಇವೆ. ಇದಕ್ಕೆ ಪ್ರತಿ ತಿಂಗಳು ಒಂದು ಸಾವಿರದಂತೆ ಸಾರ್ವಜನಿಕರಿಂದ ವಂತಿಗೆ ಪಡೆದು ಸ್ಕೀಮಿನ ಅವಧಿಯ ಮಧ್ಯದಲ್ಲಿ *ಆಕರ್ಷಕ ಬಹುಮಾನ ಹಾಗೂ ಸ್ಕೀಮ್* ಮುಗಿದ ನಂತರ ಸಮಾಧಾನಕರ ಬಹುಮಾನ ನೀಡುವುದಾಗಿಯೂ, *ಪ್ರತಿಕಾರ್ಡಿಗೆ 300 ರೂ. ಹಾಗೆ ಕಮೀಷನ್ ನೀಡುವುದಾಗಿಯೂ ಭರವಸೆ* ನೀಡಿದ ಮೇರೆಗೆ ನಾನು 2023 ನೇ ಸಾಲಿನ ಮೇ ತಿಂಗಳಿನಿಂದ ಒಟ್ಟು 150 ಕಾರ್ಡುದಾರರನ್ನು ಸಂಪರ್ಕಿಸಿ ಅವರಿಂದ ಪ್ರತಿ ತಿಂಗಳು ಕಂತಿನ ಹಣವನ್ನು ನೇರವಾಗಿ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರ ಫೋನ್ ಪೆ ನಂ :- 8123203441, 9036793134 ಮತ್ತು 9945880441 ಇವರ ವಿವಿಧ *ಫೋನ್ ಪೆ ಖಾತೆಗೆ ಜಮಾ ಮಾಡುತ್ತಾ* ಬಂದಿರುತ್ತಾರೆ. ನಂತರ ದಿನಾಂಕ: 04/05/2025 ರಲ್ಲಿ ಸ್ಕೀಮ್ ಮುಕ್ತಾಯವಾಗಿದ್ದರು ಸಹ ಸ್ಕೀಮಿನ ಕಾರ್ಡಿನಲ್ಲಿ ಹೇಳಲಾಗಿದ್ದ *ಯಾವುದೇ ಗೃಹ ಉಪಯೋಗಿ ವಸ್ತುಗಳನ್ನಾಗಲೀ ಅಥವಾ ನಗದು ಹಣವನ್ನಾಗಲಿ ಮರುಪಾವತಿ* ಮಾಡಿರುವುದಿಲ್ಲ. 

            *ಒಟ್ಟು ಸುಮಾರು ರೂ. 24,00,000/- ಅನ್ನು* ಗ್ರಾಹಕರ ರೂಪದಲ್ಲಿ ಪಾವತಿಯಾಗಿರುತ್ತದೆ. ಈ ಬಗ್ಗೆ ನಾನು ಅನೇಕ ಬಾರಿ *ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರಿಗೆ* ಕೇಳಿದರು ಅವರಿಂದ ಯಾವುದೇ ಸಕಾರಾತ್ಮಕ ಉತ್ತರಗಳು ಬಂದಿರುವುದಿಲ್ಲ. ನನ್ನಂತೆಯೇ ಇತರೆ 7-8 ಜನ ಏಜೆಂಟರುಗಳು ಸಹ ಸಾರ್ವಜನಿಕರಿಂದ ಹಣವನ್ನು ಸಂಗ್ರಹ ಮಾಡಿ ಅಯಾನ್ ಗ್ರೂಪ್ ಗೆ ಹಣವನ್ನು ಹಾಕಿಸಿರುತ್ತಾರೆ. ಸುಮಾರು *1960 ಕ್ಕೂ ಹೆಚ್ಚು ಜನರಿಗೆ ಮೋಸ, ನಂಬಿಕೆ ದ್ರೋಹ,* ವಂಚನೆ ಮಾಡಿರುವ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮ್ಮಿಂದ ಪಾವತಿಯಾಗಿರುವ ಸುಮಾರು 03 ಕೋಟಿಗೂ ಅಧಿಕ ಹಣವನ್ನು ಹಿಂದಿರುಗಿಸಿಕೊಡಿಸಬೇಕಾಗಿ ನೀಡಿದ ದೂರನ್ನು ಸ್ವೀಕರಿಸಿಕೊಳ್ಳಲಾಗಿದೆ.,

 ಪಿಎಸ್ಐ ಹೊಸನಗರ ಮತ್ತು ಸಿಬ್ಬಂಧಿಗಳ ತಂಡವು ತನಿಖೆ ಕೈಗೊಂಡು, ಪ್ರಕರಣದ *ಆರೋಪಿ ಅಬ್ದುಲ್ ರಜಾಕ್ 47 ವರ್ಷ ವಾಸ ಉಡುಪಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರ್* ಪಡಿಸಿರುತ್ತದೆ.ತನಿಖೆ ಮುಂದುವರಿದಿದೆ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.