ಭದ್ರಾವತಿ:ದ್ವಿಚಕ್ರ ವಾಹನ ಕಳ್ಳತನ ಆರೋಪಿಯ ಬಂಧನ, 11 ಪ್ರಕರಣಗಳ ಪತ್ತೆ ಹಾಗೂ 4 ಬೈಕ್ ವಶ

*ಭದ್ರಾವತಿ ನ್ಯೂಟೌನ್ ಪೊಲೀಸರ ಕಾರ್ಯಾಚರಣೆ, ಜಾನುವಾರು & ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ಆರೋಪಿಯ ಬಂಧನ, 11 ಪ್ರಕರಣಗಳ ಪತ್ತೆ ಹಾಗೂ 4 ಬೈಕ್ ಗಳು & 20,500/- ನಗದು ಸೇರಿ ಒಟ್ಟು 1,16,000/- ಮೌಲ್ಯದ ಮಾಲು ವಶ.* 
  ದಿನಾಂಕ:24-09-2025 ರಂದು ರಾತ್ರಿ  *ಭದ್ರಾವತಿ ಹೊಸಸಿದ್ದಾಪುರ ಗ್ರಾಮದಲ್ಲಿ ಯಾರೋ ಕಳ್ಳರು* ಕೊಟ್ಟಿಗೆಯಲ್ಲಿದ್ದ *02 ಹಸುಗಳನ್ನು ಮತ್ತು 01 ಕರುವನ್ನು ಕಳ್ಳತನ*  ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪಿರ್ಯಾದಿದಾರರಾದ *ರಂಜಿತ್ ತಂದೆ ಶ್ರೀನಿವಾಸ, 35  ವರ್ಷ,  ಹೊಸಸಿದ್ದಾಪುರ ಭದ್ರಾವತಿ* ರವರು ನೀಡಿದ ದೂರಿನ ಮೇರೆಗೆ *ಠಾಣಾ ಗುನ್ನೆ ಸಂಖ್ಯೆ:231/2025 ಕಲಂ 305(A), 331(4) ಬಿ.ಎನ್.ಎಸ್* ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

       ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿತನ ಪತ್ತೆಗಾಗಿ *ಶ್ರೀ ನಿಖಿಲ್.ಬಿ. ಐ.ಪಿ.ಎಸ್* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,  *ಶ್ರೀ ಎ.ಜಿ.ಕಾರಿಯಪ್ಪ*  ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, *ಶ್ರೀ ರಮೇಶ್ ಕುಮಾರ್ ಎಸ್,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹಾಗೂ, *ಶ್ರೀ ಪ್ರಕಾಶ್ ರಾಥೋಡ್*  ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪವಿಭಾಗ ರವರ ಹಾಗೂ *ಶ್ರೀಮತಿ ಕೆ.ನಾಗಮ್ಮ.*  ಸಿ.ಪಿ.ಐ ನಗರ ವೃತ್ತ ಭದ್ರಾವತಿ ರವರ ಮೇಲ್ವಿಚಾರಣೆಯಲ್ಲಿ *ಶ್ರೀ ರಮೇಶ್.ಟಿ*  ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನ್ಯೂಟೌನ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ *ಪಿ.ಎಸ್.ಐ ಶ್ರೀಮತಿ ಕವಿತಾ* ಹಾಗೂ ಸಿಬ್ಬಂದಿಗಳಾದ ಹೆಚ್.ಸಿ 374 ನವೀನ್.ಟಿ, ಹೆಚ್.ಸಿ 408 ಆದರ್ಶ.ಆರ್, ಸಿ.ಪಿ.ಸಿ 1514 ಪ್ರಕಾಶ.ಜಿ.ಕೆ, ಸಿ.ಪಿ.ಸಿ 1675 ಪ್ರಸನ್ನ.ಹೆಚ್ ರವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿರುತ್ತದೆ. 

     ಸದರಿ ತನಿಖಾ ತಂಡವು ಪ್ರಕರಣದ *ಆರೋಪಿತನಾದ 1) ದಿಲೀಪ.ಎಸ್ @ ಕರಿಯ, 20 ವರ್ಷ, ವಾಸ ಪುತ್ತೂರು ಆಯುರ್ವೇದಿಕ್ ಆಸ್ಪತ್ರೆಯ ಬಳಿ ಅಪ್ಪರ್ ಹುತ್ತಾ ಭದ್ರಾವತಿ* ಈತನನ್ನು ಪತ್ತೆ ಮಾಡಿ ಸದರಿ ಆರೋಪಿತನಿಂದ  *5 ಜಾನುವಾರು ಕಳ್ಳತನ ಪ್ರಕರಣ, 4 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ, 1 ಕೊಲೆಗೆ ಯತ್ನ ಪ್ರಕರಣ, 1 ಹಲ್ಲೆ ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳನ್ನು ಪತ್ತೆ* ಹಚ್ಚಿದ್ದು, ಸದರಿ ಪ್ರಕರಣಗಳಿಗೆ ಸಂಬಂಧಿಸಿದ *ಒಟ್ಟು ರೂ 20,500/- ನಗದು ಹಾಗೂ ಅಂದಾಜು ಮೌಲ್ಯ 95,500/- ರೂಗಳ 4 ದ್ವಿ ಚಕ್ರ ವಾಹನಗಳನ್ನು ವಶ* ಪಡಿಸಿಕೊಂಡಿರುತ್ತಾರೆ. 

   ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು  *ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ* ಅಭಿನಂದಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.