ಉಚ್ಚ ನ್ಯಾಯಾಲಯ ಕರ್ನಾಟಕ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಶ್ರೀಕಾಂತ್ ಪಾಟೀಲ್ ನೇಮಕ

          ‌‌‌‌ಪೋಟೋ: ಶ್ರೀಕಾಂತ್ ಪಾಟೀಲ್.
ಶಿಕಾರಿಪುರ ಪಟ್ಟಣದ ಕೆ ಶ್ರೀಕಾಂತ್ ಪಾಟೀಲ್ ಇವರನ್ನು ಕರ್ನಾಟಕ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಉಚ್ಚ ನ್ಯಾಯಾಲಯ ಬೆಂಗಳೂರು ಈ ಸ್ಥಾನಕ್ಕೆ ಕರ್ನಾಟಕ ಸರ್ಕಾರದಿಂದ  ನೇಮಕ ಮಾಡಿ  ಆದೇಶ ಹೊರಡಿಸಲಾಗಿದೆ.

 ಇವರು ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀಮತಿ ಸರ್ವ ಮಂಗಳಮ್ಮ ಹಾಗೂ ಶಿವ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ  ನಿಜಲಿಂಗಪ್ಪ ಗೌಡ್ರುರವರ  ಹಿರಿಯ ಮಗನಾಗಿದ್ದಾರೆ.

 ಇವರಿಗೆ ತಾಲೂಕು ವಕೀಲರ ಸಂಘ ಹಾಗೂ ಸ್ನೇಹಿತರು ಅಭಿನಂದನೆಗಳನ್ನು ತಿಳಿಸಿದ್ದಾರೆ. 
ಹಲೋ ಶಿವಮೊಗ್ಗ ದಿನಪತ್ರಿಕೆಯ ಬಳಗದ ವತಿಯಿಂದ ಇವರಿಗೆ ಅಭಿನಂದನೆಗಳು....

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.