ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಫೋಸ್ಟರ್ ಬಿಡುಗಡೆ…
ಶಿವಮೊಗ್ಗ :- ನಗರದ ಸುಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿಯ ಜತ್ರಾ ಮಹೋತ್ಸವವು ಫೆ. 24ರಿಂದ ಆರಂಭವಾಗಲಿದ್ದು, ಈ ಅಂಗವಾಗಿ ದೇವಸ್ಥಾನ ಸಮಿತಿಯಿಂದ ಇದರ ಮಾಹಿತಿಯ ಫೋಸ್ಟರ್ ಚಿತ್ರವನ್ನು ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.
ಮಾರಿಕಾಂಬ ದೇವಿ ಜಾತ್ರೆಯ ಬಿತ್ತಿ ಪತ್ರದಲ್ಲಿ ಕುರಿ ಕಾಳಗ, ಕುಸ್ತಿ ಪಂದ್ಯಾವಳಿ ಸೇರಿದಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಇದನ್ನು ನಗರದ ಎಲ್ಲಾ ಬಡಾವಣೆಗಳು, ಅಂಗಡಿಮುಂಗಟ್ಟುಗಳು, ವೃತ್ತಗಳು ಮತ್ತಿತರೆಡೆ ವಿತರಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ಪ್ರಮುಖರಾದ ಸುನೀಲ್ ಹಾಗೂ ನಿರ್ದೇಶಕರು ಸೇರಿದಂತೆ ಹಲವರಿದ್ದರು.

Leave a Comment