ಭದ್ರಾವತಿಯ ಉಜ್ಜಿನಿಪುರ ಮನೆಯಲ್ಲಿ ವೇಶ್ಯಾವಾಟಿಕೆ* ವ್ಯವಹಾರ: 3 ಜನ ಆರೋಪಿಗಳಿಗೆ ತಲಾ 10 ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಕೋರ್ಟ್ ಆದೇಶ.
ಆರೋಪಿತರು 1) ಚಂದ್ರಕಲಾ @ ಶ್ವೇತಾ, 31 ವರ್ಷ ವಾಸ ಜೇಡಿಕಟ್ಟೆ, ಹೊಸುರು, ಭದ್ರಾವತಿ ಶಿವಮೊಗ್ಗ. 2) ಶಿಲ್ಪಾ ಎಸ್, 35 ವರ್ಷ , ವಾಸ ಮಾರಿಯಮ್ಮ ದೇವಸ್ಥಾನ ಹಿಂಭಾಗ ಉಜ್ಜನಿಪುರ, ಭದ್ರಾವತಿ ಶಿವಮೊಗ್ಗ. ಮತ್ತು 3) ಕವಿತಾ, 40 ವರ್ಷ, ವಾಸ ಹೊಸ ಸಿದ್ದಾಪುರ, ಭದ್ರಾವತಿ ಶಿವಮೊಗ್ಗ
ಭದ್ರಾವತಿ:ದಿನಾಂಕ 24-12-2021 ರಂದು ಶ್ರೀ ಜಿತೇಂದ್ರ ಕುಮಾರ್ ದಯಾಮ ಐಪಿಎಸ್ ರವರು ಉಜ್ಜನಿಪುರದ ಮಾರಿಯಮ್ಮ ದೇವಸ್ಥಾನದ ಹಿಂಭಾಗ, 03ನೇ ಕ್ರಾಸ್ ನಲ್ಲಿರುವ ಆರೋಪಿತರ ವಾಸದ ಮನೆಯ ಮೇಲೆ ದಾಳಿ ಮಾಡಿದ್ದರು.
ಆರೋಪಿತರಾದ *ಚಂದ್ರಕಲಾ ಮತ್ತು ಶಿಲ್ಪಾ ರವರುಗಳು ಹಣ ಸಂಪಾದನೆ* ಮಾಡಲು *ಕವಿತಾ ಮತ್ತು ಯೊಗೇಶ್* ರವರೊಂದಿಗೆ ಸೇರಿಕೊಂಡು, *ಶಿಲ್ಪಾ ರವರ ಮನೆಗೆ ಹೆಣ್ಣು ಮಕ್ಕಳನ್ನು ಕರೆಯಿಸಿಕೊಂಡು ವೇಶ್ಯಾವಾಟಿಕೆ* ವ್ಯವಹಾರ ಮಾಡುವ ಸಲುವಾಗಿ, ನೊಂದ ಮಹಿಳೆಯರಿಗೆ *ನಿಮಗೆ ನಾವು ಹಣವನ್ನು ನೀಡುತ್ತೇವೆ ಎಂದು ಹೇಳಿ, ಈ ವಿಚಾರ ಮನೆಯವರಿಗೆ ಹೇಳಿದರೆ ಟಾರ್ಚರ್ ಮಾಡುವುದಾಗಿ ಹೆದರಿಸಿ, ಮನೆಯ ಒಳಗೆ ಇರಿಸಿಕೊಂಡು, ನಾವು ಹೇಳಿದಂತೆ ಕೇಳಬೇಕು ಎಂದ ಹೇಳಿ ಹಿಂಸೆ ನೀಡಿ, ಆರೋಪಿಗಳು ಕಾನೂನು ಬಾಹಿರವಾಗಿ ವೇಶ್ಯಾವಾಟಿಕೆ ನಡೆಸಿ,* ಹಣ ಸಂಪಾದನೆ ಮಾಡುವ ಉದ್ದೇಶದಿಂದ ವಾಸದ ಮನೆಯನ್ನು ವೇಶ್ಯಾವಾಟಿಕೆ ನಡೆಸುತ್ತಿದ್ದರು.
ಈ ಸಂಬಂಧ *ಪೇಪರ್ ಟೌನ್ ಪೊಲೀಸ್ ಠಾಣೆ ಗುನ್ನೆ ನಂ 163/2021 ಕಲಂ 370(3),37ಎ(2) IPC, U/s: 3, 4, 5, 6 Immoral Traffic Prevention Act 1956 ರಿತ್ಯಾ* ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ *ಶ್ರೀ ಮಂಜುನಾಥ ಇ ಓ* ಪಿಐ ಪೇಪರ್ ಟೌನ್ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ *ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು* ವಾದ ಮಂಡಿಸಿದ್ದು *ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ* ಪ್ರಕರಣದ ವಿಚಾರಣೆ ನಡೆದಿರುತ್ತದೆ.
ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ *ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್* ರವರು ದಿನಾಂಕ:07-02-2026 ರಂದು *ಆರೋಪಿತರಾದ 1) ಚಂದ್ರಕಲಾ @ ಶ್ವೇತಾ, 31 ವರ್ಷ ವಾಸ ಜೇಡಿಕಟ್ಟೆ, ಹೊಸುರು, ಭದ್ರಾವತಿ ಶಿವಮೊಗ್ಗ. 2) ಶಿಲ್ಪಾ ಎಸ್, 35 ವರ್ಷ , ವಾಸ ಮಾರಿಯಮ್ಮ ದೇವಸ್ಥಾನ ಹಿಂಭಾಗ ಉಜ್ಜನಿಪುರ, ಭದ್ರಾವತಿ ಶಿವಮೊಗ್ಗ. ಮತ್ತು 3) ಕವಿತಾ, 40 ವರ್ಷ, ವಾಸ ಹೊಸ ಸಿದ್ದಾಪುರ, ಭದ್ರಾವತಿ ಶಿವಮೊಗ್ಗ. ಇವರಿಗೆ ತಲಾ 10 ವರ್ಷ ಕಠಿಣ ಕಾರಾವಾಸ ಮತ್ತು 1,61,000/- ರೂ ದಂಡವನ್ನು* ವಿಧಿಸಿ ಆದೇಶಿಸಿರುತ್ತದೆ.

Leave a Comment