ಸೌಹಾರ್ದ ಸಹಕಾರಿ ಸಂಘಗಳ ಸಮಾಪನೆಗೆ ಕ್ರಮ; ಆಕ್ಷೇಪಣೆ ಆಹ್ವಾನಫೆ. 28 ರೊಳಗೆ ವರ್ತಕರ ಪರವಾನಿಗೆ ನವೀಕರಿಸಲು ಸೂಚನೆ

ಶಿವಮೊಗ್ಗ ಫೆಬ್ರವರಿ 06 : ಶಿವಮೊಗ್ಗ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಶಿವಮೊಗ್ಗ ಉಪವಿಭಾಗವು ಶಿವಮೊಗ್ಗ ತಾಲೂಕಿನಲ್ಲಿ ಸ್ಥಗಿತಗೊಂಡಿದ್ದ ಅಬ್ಬಲಗೆರೆಯ ಹಿತೈಷಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ., ಶಿವಮೊಗ್ಗ ನಗರದ ಗಾಂಧಿಬಜಾರ್ ಎಲೆರೇವಣ್ಣನ ಬೀದಿ, 4ನೇ ತಿರುವಿನಲ್ಲಿರುವ ಸಾನಿಧ್ಯ ಮಹಿಳಾ ಪತ್ತಿನ ಸೌಹಾರ್ದ ಸಹಕಾರ ನಿ., ವಿನೋಬನಗರ 60 ಅಡಿ ರಸ್ತೆ, ಎಪಿಎಂಸಿ ಹತ್ತಿರ ಸಪ್ನ ಬಿಲ್ಡಿಂಗ್‌ನಲ್ಲಿರುವ ಪ್ರಗತಿ ಸಿಟಿ ಸೌಹಾರ್ದ ಸಹಕಾರಿ ನಿ., ಸವಳಂಗ ರಸ್ತೆ, ವೆಂಕಟಪುರದ 2ನೇ ತಿರುವು, ಶ್ರೀನಿವಾಸ ನಿಲಯದ ಶಿವಮೊಗ್ಗ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ ಲಿ., ಈ 4 ಸೌಹಾರ್ದ ಸಹಕಾರಿ ಸಂಘಗಳನ್ನು ಸಮಾಪನೆ ಮಾಡಲು ಕ್ರಮಕೈಗೊಂಡಿದೆ.
 ಈ ಬಗ್ಗೆ ಸಹಕಾರ ಸಂಘಗಳಿಂದ ಅಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಫೆ. 24 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
 ---------------------------
ಫೆ. 28 ರೊಳಗೆ ವರ್ತಕರ ಪರವಾನಿಗೆ ನವೀಕರಿಸಲು ಸೂಚನೆ
ಶಿವಮೊಗ್ಗ ಫೆಬ್ರವರಿ 06 : ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 2016 ರಿಂದ 2026 ನೇ ಸಾಲಿಗೆ ಲೈಸೆನ್ಸ್ ಪಡೆದ ವರ್ತಕರ ಪರವಾನಿಗೆ ಅವಧಿಯು 2026 ರ ಮಾರ್ಚ್ 31 ರಂದು ಮುಕ್ತಾಯಗೊಳಲ್ಲಿದ್ದು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ರ ಕಲಂ 72 ಮತ್ತು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಾವಳಿ 1968 ರ ನಿಯಮ 76(ಎ) ಲೈಸೆನ್ಸ್ ನವೀಕರಿಸಲು ಇಚ್ಛಿಸುವ ಪೇಟೆಕಾರ್ಯಕರ್ತರು ನಿಗಧಿತ ಲೈಸೆನ್ಸ್ ಫಾರಂನ್ನು ಭರ್ತಿ ಮಾಡಿ, ನಿಗಧಿತ ಶುಲ್ಕ ಪಾವತಿಸಿ, ಅವಶ್ಯಕ ದಾಖಲೆಗಳೊಂದಿಗೆ ಫೆ. 28 ರೊಳಗಾಗಿ ಕಾರ್ಯದರ್ಶಿ, ಎಪಿಎಂಸಿ, ಶಿವಮೊಗ್ಗ ಮತ್ತು ಉಪ/ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸುವುದು. ಫೆ. 28 ರ ನಂತರ ಲೈಸೆನ್ಸ್ ಗಳನ್ನು ನವೀಕರಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು, ತಪ್ಪಿದಲ್ಲಿ ವರ್ತಕರೇ ಹೊಣೆಗಾರರಾಗಿರುತ್ತೀರಿ ಹಾಗೂ ಸಮಿತಿಯಿಂದ ನಿಯಮಾನುಸಾರ ಕಾನೂನಾತ್ಮಕ ಕ್ರಮಗೊಳ್ಳಲಾಗುವುದು ಎಂದು ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸುವುದು.
--------------------------
ಫೆ.07 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ
 ಶಿವಮೊಗ್ಗ, ಫೆಬ್ರವರಿ 06  ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿಯಿರುವುದರಿಂದ ವಿದ್ಯಾನಗರ ಮಧ್ಯಂತರ ಯಂತ್ರಗಾರಕ್ಕೆ ಫೆ. 07 ರಂದು ವಿದ್ಯುತ್ ನಿಲುಗಡೆ ಮಾಡುವುದರಿಂದ ಫೆ.07 ಮತ್ತು 08 ರಂದು ಮಲವಗೊಪ್ಪ ಮತ್ತು ಹರಿಗೆ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊAದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.