2028ರ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿಯಿಂದ JDS ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ!!
ಶಿವಮೊಗ್ಗ: ನಿಖಿಲ್ ಕುಮಾರಸ್ವಾಮಿ ಕರ್ನಾಟಕದ ಜನತಾ ದಳ (ಎಸ್) ಪಕ್ಷದ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 2028 ಸಾಲಿನಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಒಕ್ಕಲಿಗರ ಬೆಲ್ಟ್ ಜೆಡಿಎಸ್ ಪಜ್ಷ ಪ್ರಾಬಲ್ಯ ಇರುವ ಭದ್ರಾವತಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಇದೀಗ JDS ಪಕ್ಷದ ವಲಯದಲ್ಲಿ ಚರ್ಚಿತವಾಗುತ್ತಿರುವ ವಿಷಯವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹೊಂದಾಣಿಕೆಯ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ದೆಗೆ ತಯಾರಿ ನಡೆಸಿದ್ದು, ಬಿಜೆಪಿ ಪಕ್ಷದ ಮುಖಂಡರು ಮತ್ತು ಭದ್ರಾವತಿಯ ಜೆಡಿಎಸ್ ಪಕ್ಷದ ಮುಂಡರಾದ ಶಾರದಾ ಅಪ್ಪಾಜಿ ಮತ್ತಿತರ ಜೊತೆಗೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ H.D.ಕುಮಾರಸ್ವಾಮಿಯವರು ಮಾತನಾಡಿ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಖಿಲ್ ಕುಮಾರ ಸ್ವಾಮಿಯವರ ರಾಜಕೀಯ ಪಯಣ:
2019ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸುಮಲತಾ ಅಂಬರೀಷ್‌ಗೆ ಸೋತರು. 2023ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಎದುರಿಸಿದರು; 2024ರ ಚನ್ನಪಟ್ನ ಉಪಚುನಾವಣೆಯಲ್ಲೂ ಸೋತರು.ಸೋಲಿನಿಂದ ಕಂಗಾಲಾಗಿದ್ದು ಇದೀಗ ಹೊಸ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ಭದ್ರಾವತಿಯ ಬಂದಾಗ ಹೆಚ್.ಡಿ.ಕುಮಾರಸ್ವಾಮಿಯವರ ಮಾತುಗಳು:
ಶೀಘ್ರದಲ್ಲೇ ಭದ್ರಾವತಿಯ VISl ಪುನಶ್ಚೇತನ : ಕೇಂದ್ರ ಬೃಹತ್ ಕೈಗಾರಿಕಾಸಚಿವರಾದ H.D.ಕುಮಾರಸ್ವಾಮಿರವರು ಈ ಬಗ್ಗೆ ಸ್ಪಂದಿಸಿ ಸದ್ಯದಲ್ಲಿಯೇ₹8,000 ರಿಂದ ₹15,000 ಕೋಟಿ ವೆಚ್ಚದಲ್ಲಿ ಸಂಪೂರ್ಣವಾಗಿ ಅನುದಾನ ಬಿಡುಗಡೆ ಮಾಡಿ ಶೀಘ್ರದಲ್ಲೇ ಭದ್ರಾವತಿಯ VISl ಪುನಾರಂಭ ಮತ್ತು ಪುನಶ್ಚೇತನ ಮಾಡುವುದಾಗಿ ಭರವಸೆ ನೀಡಿದ್ದಾರೆ . ಕೇಂದ್ರ ಸರ್ಕಾರವು ಹಲವು ವರ್ಷಗಳಿಂದ VISL ಕಾರ್ಖಾನೆಯನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದೆ.
ವಿಐಎಸ್‌ಎಲ್ (VISL) ಎಂದರೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (Visvesvaraya Iron and Steel Plant). ಇದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ಒಂದು ಐತಿಹಾಸಿಕ ಕೈಗಾರಿಕೆಯಾಗಿದ್ದು, "ಉಕ್ಕಿನ ನಗರಿ" ಎಂದೇ ಭದ್ರಾವತಿಯನ್ನು ಗುರುತಿಸಲು ಕಾರಣವಾಗಿದೆ.ವಿಐಎಸ್‌ಎಲ್ (VISL) ಪ್ರಮುಖ ಮಾಹಿತಿ
- ಪೂರ್ಣ ಹೆಸರು: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (Visvesvaraya Iron and Steel Plant - VISL).
- ಸ್ಥಳ: ಭದ್ರಾವತಿ, ಶಿವಮೊಗ್ಗ ಜಿಲ್ಲೆ, ಕರ್ನಾಟಕ.
- ಸ್ಥಾಪನೆ: ಇದನ್ನು ಸರ್ ಎಂ. ವಿಶ್ವೇಶ್ವರಯ್ಯನವರು 1918 ರಲ್ಲಿ (ಮೈಸೂರು ಐರನ್ ವರ್ಕ್ಸ್ ಆಗಿ) ಪ್ರಾರಂಭಿಸಿದರು. ಇದು ಸುಮಾರು ಒಂದು ಶತಮಾನದ ಇತಿಹಾಸವನ್ನು ಹೊಂದಿದೆ.
- ಮಾಲೀಕತ್ವ: ಇದು ಪ್ರಸ್ತುತ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ನ ಒಂದು ಘಟಕವಾಗಿದೆ.
- ಉತ್ಪನ್ನಗಳು: ಅಲಾಯ್ ಸ್ಟೀಲ್ಸ್, ವಿಶೇಷ ಉಕ್ಕುಗಳು (Special Steels) ಮತ್ತು ಪಿಗ್ ಐರನ್ (Pig Iron) ಉತ್ಪಾದನೆಯಲ್ಲಿ ಈ ಕಾರ್ಖಾನೆ ಹೆಸರುವಾಸಿಯಾಗಿತ್ತು.
ಪ್ರಸ್ತುತ ಸ್ಥಿತಿ ಮತ್ತು ವಿವಾದಗಳು
- ಸ್ಥಗಿತ ಮತ್ತು ನಷ್ಟ: VISL ಕಾರ್ಖಾನೆಯು ಹಳೆಯ ಯಂತ್ರೋಪಕರಣಗಳು, ಗಣಿಯ ಕೊರತೆ ಮತ್ತು ನಿರಂತರ ಆರ್ಥಿಕ ನಷ್ಟದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿ ಹಲವು ವರ್ಷಗಳಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.
- ಖಾಸಗೀಕರಣ ಪ್ರಯತ್ನ: ಕೇಂದ್ರ ಸರ್ಕಾರವು ಈ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು (ಮಾರಾಟ ಮಾಡಲು) ಪ್ರಯತ್ನಿಸಿತ್ತು. ಆದರೆ, ಖಾಸಗಿ ಹೂಡಿಕೆದಾರರು ಆಸಕ್ತಿ ವಹಿಸದ ಕಾರಣ 2022ರ ನವೆಂಬರ್‌ನಲ್ಲಿ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಲಾಯಿತು.
- ಮುಚ್ಚುವ ನಿರ್ಧಾರ: ಖಾಸಗೀಕರಣ ಕೈಬಿಟ್ಟ ನಂತರ, ಕೇಂದ್ರ ಉಕ್ಕು ಸಚಿವಾಲಯವು ಕಾರ್ಖಾನೆಯನ್ನು ಮುಚ್ಚಲು ನಿರ್ಧರಿಸಿದೆ ಎಂದು ಘೋಷಿಸಲಾಗಿತ್ತು.
- ಪುನಶ್ಚೇತನದ ಆಶಯ:
- ಕಾರ್ಖಾನೆಯನ್ನು ಉಳಿಸಲು ಸ್ಥಳೀಯ ಕಾರ್ಮಿಕರು, ರಾಜಕಾರಣಿಗಳು ಮತ್ತು ಸಾರ್ವಜನಿಕರಿಂದ ತೀವ್ರ ಹೋರಾಟ ಮತ್ತು ಬೇಡಿಕೆ ಇದೆ.
- ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು (ಎಚ್. ಡಿ. ಕುಮಾರಸ್ವಾಮಿ) ಕಾರ್ಖಾನೆಯನ್ನು ₹8,000 ರಿಂದ ₹15,000 ಕೋಟಿ ವೆಚ್ಚದಲ್ಲಿ ಸಂಪೂರ್ಣವಾಗಿ ಪುನಶ್ಚೇತನಗೊಳಿಸುವ ಬಗ್ಗೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಿ, ಈ ವರ್ಷಾಂತ್ಯಕ್ಕೆ ಪ್ರಧಾನಿ ಮೋದಿ ಅವರಿಂದ ಯೋಜನೆಗೆ ಅಡಿಗಲ್ಲು ಹಾಕುವ ಆಶಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಪುನರುಜ್ಜೀವನಕ್ಕೆ ಯಾವುದೇ ಯೋಜನೆಯಿಲ್ಲ ಎಂದು ಆಗಸ್ಟ್ 2024 ರಲ್ಲಿ ಕೇಂದ್ರ ಉಕ್ಕು ಸಚಿವಾಲಯವು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದೆ.
ಸಂಕ್ಷಿಪ್ತವಾಗಿ, ವಿಐಎಸ್‌ಎಲ್ ಭದ್ರಾವತಿ ಒಂದು ಶತಮಾನದ ಇತಿಹಾಸವಿರುವ ಪ್ರತಿಷ್ಠಿತ ಉಕ್ಕು ಕಾರ್ಖಾನೆಯಾಗಿದ್ದು, ನಷ್ಟದ ಕಾರಣದಿಂದ ಸ್ಥಗಿತಗೊಂಡಿದೆ ಮತ್ತು ಪ್ರಸ್ತುತ ಅದರ ಉಳಿವಿನ ಬಗ್ಗೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ನಿಖಿಲ್ ಕುಮಾರಸ್ವಾಮಿರವರ ವೈಯಕ್ತಿಕ ಮಾಹಿತಿ:
ಅವರು 1988 ಜನವರಿ 22ರಂದು ಜನಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮೊಮ್ಮಗ ಆಗಿದ್ದಾರೆ.
ಕನ್ನಡ ಚಲನಚಿತ್ರಗಳಲ್ಲಿ ನಟನೆಯೂ ಮಾಡಿದ್ದಾರೆ.
ಕೂಡ ಪಕ್ಷದ ರಾಜ್ಯ ಯುವ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷವನ್ನು ಗಟ್ಟಿಗೊಳಿಸುವಲ್ಲಿ ತೊಡಗಿದ್ದಾರೆ.
ಚುನಾವಣಾ ಯೋಜನೆಗಳು
2025ರ ಜಿಲ್ಲಾ/ತಾಲೂಕು ಪಂಚಾಯಿತಿ ಚುನಾವಣೆಗಳಿಂದ ಪಕ್ಷವನ್ನು ಬಲಪಡಿಸುವ ಉದ್ದೇಶ;
2028 ವಿಧಾನಸಭಾ ಚುನಾವಣೆಯಲ್ಲಿ NDA ಸಂಬಂಧದೊಂದಿಗೆ 150 ಸೀಟ್ ಗೆಲುವು ಎಂಬ ಗುರಿ. ಅವರು ಖಂಡಿತವಾಗಿ ವಿಧಾನಸಭೆಗೆ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದ್ದಾರೆ;
ಸಂಘಟನಾ ಚಟುವಟಿಕೆಗಳು
ರಾಜ್ಯ ಪ್ರವಾಸಗಳ ಮೂಲಕ 50 ಲಕ್ಷ ಮತದಾರರನ್ನು ಸಂಪರ್ಕಿಸುವ ಉದ್ದೇಶ; ಕೋಲಾರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ 8 ಸೀಟ್ ಗೆಲುವು ಗುರಿ. ಯುವಕರನ್ನು ರಾಜಕೀಯಕ್ಕೆ ಆಕರ್ಷಿಸುವಂತೆ ಕರೆ ನೀಡಿದ್ದಾರೆ
ಭದ್ರಾವತಿ ಯಲ್ಲಿ 2028 ರ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಶಾಸಕರಾಗಿರುವ ಸಂಗಮೇಶ್ ನಿಲ್ಲುವುದು ಅನುಮಾನ, ಅವರ ಮಗನನ್ನು ನಿಲ್ಲಿಸಲು ತಯಾರಿ ನಡೆದಿದೆ ಎನ್ನಲಾಗಿದೆ.
ಒಟ್ಟಿನಲ್ಲಿ 2028 ರ ಚುನಾವಣಾ ಕಣ ಭದ್ರಾವತಿ ಕ್ಷೇತ್ರ ಕರ್ನಾಟಕದಲ್ಲಿ ಎಲ್ಲರ ಗಮನ ಸೆಳೆಯಲಿದೆ ಅಂತಾನೇ ಹೇಳಬಹುದು.

Leave a Comment