ಶಿವಮೊಗ್ಗ ಎಸ್ಪಿಯಾಗಿ ಬಿ.ನಿಖಿಲ್ ಅಧಿಕಾರ ಸ್ವೀಕಾರ

   ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ವರ್ಗಾವಣೆಯಾಗಿರುವ  ಬಿ. ನಿಖಿಲ್ ಐಪಿಎಸ್, ಪೊಲೀಸ್ ಅಧೀಕ್ಷಕರವರು ದಿನಾಂಕಃ 01-01-2026 ರಂದು ಸಂಜೆ ಶಿವಮೊಗ್ಗ ಜಿಲ್ಲೆಗೆ ಬಂದು ವರದಿ ಮಾಡಿಕೊಂಡಿರುತ್ತಾರೆ.
 ಎ ಜಿ ಕಾರ್ಯಪ್ಪ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ರವರಿಂದ *ಶಿವಮೊಗ್ಗ ಜಿಲ್ಲೆಯ ಪ್ರಭಾರವನ್ನು* ವಹಿಸಿಕೊಂಡಿರುತ್ತಾರೆ. 

   ಆ ನಂತರ ಶಿವಮೊಗ್ಗ ನಗರದ ಪಿಐ ದರ್ಜೆಯ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ ಸೂಕ್ತ ಸೂಚನೆ ಮತ್ತು ಸಲಹೆಗಳನ್ನು ನೀಡಿರುತ್ತಾರೆ.

 ಮಿಥುನ್ ಕುಮಾರ್, ಜಿ. ಕೆ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು *ಡಿಸಿಪಿ ನಾರ್ಥ್ ಈಸ್ಟ್ ಡಿವಿಶನ್* ಬೆಂಗಳೂರು ನಗರಕ್ಕೆ ವರ್ಗಾವಣೆಯಾಗಿದ್ದು, ದಿನಾಂಕಃ 01-01-2026 ರಂದು ಶಿವಮೊಗ್ಗ ಜಿಲ್ಲೆಯ ಪ್ರಭಾರವನ್ನು  ಕಾರ್ಯಪ್ಪ ಎ. ಜಿ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆರವರಿಗೆ ಹಸ್ತಾಂತರಿಸಿ ಹೋಗಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.