*ಎಲೆ ಬಣ್ಣದ ಬದಲಾವಣೆ: ಸಸ್ಯದ ಪೋಷಕಾಂಶ ಆರೋಗ್ಯದ ಕನ್ನಡಿ*

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ (RAWE) ಕಾರ್ಯಕ್ರಮದ ಅಂಗವಾಗಿ “ಪೋಷಕಾಂಶಗಳ ಕೊರತೆ – ಅದರ ಲಕ್ಷಣಗಳು ಮತ್ತು ನಿರ್ವಹಣಾ ಕ್ರಮಗಳು” ಎಂಬ ವಿಷಯದ ಕುರಿತು ಗುಂಪು ಚರ್ಚೆ ಕಾರ್ಯಕ್ರಮವನ್ನು ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದರು.

ಈ ಕಾರ್ಯಕ್ರಮದ ಉದ್ದೇಶ ರೈತರು ಮತ್ತು ವಿದ್ಯಾರ್ಥಿಗಳಲ್ಲಿ ಪೋಷಕಾಂಶಗಳ ಮಹತ್ವ, ಕೊರತೆಯ ಲಕ್ಷಣಗಳು ಹಾಗೂ ಸರಿಯಾದ ನಿರ್ವಹಣಾ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು.

ವಿದ್ಯಾರ್ಥಿಗಳು ನೈಟ್ರೋಜನ್, ಫಾಸ್ಫರಸ್, ಪೊಟ್ಯಾಸಿಯಂ, ಐರನ್, ಜಿಂಕ್, ಬೋರಾನ್ ಮುಂತಾದ ಅವಶ್ಯಕ ಪೋಷಕಾಂಶಗಳ ಪಾತ್ರ ಮತ್ತು ಅವುಗಳ ಕೊರತೆಯಿಂದ ಉಂಟಾಗುವ ಎಲೆಗಳ ಹಳದಿ ಬಣ್ಣ, ಬೆಳವಣಿಗೆಯ ಕುಂಠಿತತೆ, ಹೂ-ಹಣ್ಣು ಬೀಳುವಿಕೆ, ಎಲೆ ಕಲೆಗಳು ಇತ್ಯಾದಿ ಲಕ್ಷಣಗಳ ಬಗ್ಗೆ ವಿವರಿಸಿದರು. ಅವರು ಚಿತ್ರ ಹಾಗೂ ಚಾರ್ಟುಗಳ ಮಾದರಿಯ ಸಹಾಯದಿಂದ ರೈತರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದರು.

ಕಾರ್ಯಕ್ರಮದಲ್ಲಿ ದೇವೇಂದ್ರಪ್ಪ,ಸುರೇಶ್, ಪ್ರದೀಪ್, ಕುಮಾರಣ್ಣ,ಜಗದೀಶ್,ನೇತ್ರಾನಂದ, ಅನಿಲ್ ಮತ್ತು ಇತರ ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಿ ಪೋಷಕಾಂಶ ಕೊರತೆಯ ಲಕ್ಷಣ ಗುರುತಿಸುವ ಚಟುವಟಿಕೆಯಲ್ಲಿ ತೊಡಗಿಕೊಂಡರು. ಈ ಕಾರ್ಯಕ್ರಮದ ಮೂಲಕ ಪೋಷಕಾಂಶಗಳ ಸಮತೋಲನದ ಅಗತ್ಯತೆ ಮತ್ತು ಅದರ ಕೃಷಿ ಉತ್ಪಾದನೆಯಲ್ಲಿ ಪಾತ್ರದ ಕುರಿತು ಸ್ಪಷ್ಟ ಅರಿವು ಮೂಡಿತು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.