ಪಟಾಕಿ ಹೊಡೆಯುವುದರ ದುಷ್ಪರಿಣಾಮಗಳು
ಶಿಕಾರಿಪುರ: ತಾಲೂಕಿನ ಅಂಜನಾಪುರ ಹೋಬಳಿಯ ಈಸೂರು ಗ್ರಾಮ ಪಂಚಾಯಿತಿ ಯಲ್ಲಿ ಬರುವ ಈಸೂರು ಗ್ರಾಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಅಂತಿಮ ವರ್ಷದ ಬಿಎಸ್ಸಿ ಕೃಷಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ದಿನಾಂಕ 21.10 .2025 ರಂದು ಪಟಾಕಿ ಹೊಡೆಯುವುದರಿಂದ ಉಂಟಾಗುವ ಸಮಸ್ಯೆಗಳು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೀಪಾವಳಿಯ ರಾತ್ರಿ ಮನೆಗಳಲ್ಲಿ ದೀಪಗಳು ಹೊತ್ತಿಕೊಂಡು ಕತ್ತಲೆಯನ್ನು ಓಡಿಸಿ ಸಂತೋಷವನ್ನು ಹರಡುವ ಸಮಯದಲ್ಲಿ ಆಕಾಶವು ಬಣ್ಣ ಬಣ್ಣದ ಪಟಾಕಿಗಳಿಂದ ಹೊಳೆಯುತ್ತದೆ. ದೀಪಾವಳಿ ಎಂಬುದು ಕೇವಲ ಬೆಳಕಿನ ಹಬ್ಬವಲ್ಲ ಅದು ಧ್ವನಿ ಮತ್ತು ಬೆಳಕಿನ ಸಂಯೋಜನೆಯಿಂದ ಸೃಷ್ಟಿಯಾಗುವ ಸಂಭ್ರಮದ ಹಬ್ಬ . ಆಕಾಶವನ್ನು ಬೆಳಗಿಸುವ ಪಟಾಕಿಗಳ ಆಕರ್ಷಣೆಯಲ್ಲಿ ಮುಳುಗಿ ಹೋಗುವಾಗ ಅವುಗಳ ಬಳಕೆಯ ಬಗ್ಗೆ ಜಾಗರೂಕತೆ ವಹಿಸಬೇಕು.
ಪಟಾಕಿಗಳಿಂದ ಉಂಟಾಗುವ ಸಮಸ್ಯೆಗಳು ಹಾಗೂ ತೊಂದರೆಗಳೆಂದರೆ ವಾಯುಮಾಲಿನ್ಯ ಇದರಿಂದ ಉಸಿರಾಟದ ಸಮಸ್ಯೆ ಅಸ್ತಮ ಅಲರ್ಜಿ ಕುರುಡುತನ ಕಿವುಡುತನ ಹಾಗೂ ಪರಿಸರಕ್ಕೆ ಈ ಪಟಾಕಿಗಳ ತಯಾರಿಕೆಗೆ ಬಳಸುವ ರಾಸಾಯನಿಕ ಮಣ್ಣು ಮತ್ತು ನೀರನ್ನು ಮಾಲಿನ್ಯಗೊಳಿಸುತ್ತದೆ, ಮಾನವನ ರೋಗದ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ ಪ್ರಾಣಿಗಳಿಗೂ ಸಹ ಪಟಾಕಿಗಳ ಶಬ್ದದಿಂದ ನಾಯಿಗಳು ಹಕ್ಕಿಗಳು ಪಶುಗಳಿಗೂ ಭಯದಿಂದ ತತ್ತರಿಸುತ್ತವೆ.ಆರ್ಥಿಕ ವ್ಯಯ
ಪಟಾಕಿಗಳ ಮೇಲೆ ಖರ್ಚು ಮಾಡಿದ ಹಣವು ವ್ಯರ್ಥವಾಗುತ್ತದೆ.
ಅದೇ ಹಣವನ್ನು ಉಪಯುಕ್ತ ಕಾರ್ಯಗಳಿಗೆ ಬಳಸಬಹುದು (ಹಸಿರು ಪಟಾಕಿ ಅಥವಾ ಸಾಮಾಜಿಕ ಸೇವೆಗಳಿಗೆ).
ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸುವುದು ಅತ್ಯಗತ್ಯ.

Leave a Comment