*ರಾಷ್ಟ್ರ ರಕ್ಷಣೆಗಾಗಿ ಹಲಾಲ್ ಖರೀದಿ ಮಾಡದಂತೆ ವಿವಿಡೆದೆ ಮನವಿ ಜಾಗೃತಿ ಆಂದೋಲನ!*

 *ಶಿವಮೊಗ್ಗ, ಭದ್ರಾವತಿ, ಆನಂದಪುರ, ಶಿಕಾರಿಪುರ, ತೀರ್ಥಹಳ್ಳಿಯಲ್ಲಿ ಹಲಾಲ್ ಮುಕ್ತ ದೀಪಾವಳಿ" ಅಭಿಯಾನ!*

*ರಾಷ್ಟ್ರ ರಕ್ಷಣೆಗಾಗಿ ಹಲಾಲ್ ಖರೀದಿ ಮಾಡದಂತೆ ವಿವಿಡೆದೆ ಮನವಿ ಜಾಗೃತಿ ಆಂದೋಲನ!*
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ "ಹಲಾಲ್" ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಾ ಬಂದಿದೆ ಮತ್ತು ಹಿಂದೂ ವ್ಯಾಪಾರಿಗಳು ತಮ್ಮ ವ್ಯಾಪಾರ ಮುಂದುವರಿಸಲು "ಹಲಾಲ್ ಪ್ರಮಾಣಪತ್ರ" ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಮೊದಲು "ಹಲಾಲ್" ಎಂಬ ಪರಿಕಲ್ಪನೆ ಮಾಂಸಾಹಾರಿ ಉತ್ಪನ್ನಗಳು ಮತ್ತು ಮುಸ್ಲಿಂ ರಾಷ್ಟ್ರಗಳಿಗೆ ರಫ್ತು ಮಾಡುವ ವಸ್ತುಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಭಾರತದಲ್ಲೇ ಸಕ್ಕರೆ, ಎಣ್ಣೆ, ಒಟ್ಟು, ಚಾಕೋಲೇಟ್, ಮಿಠಾಯಿ, ಸೌಂದರ್ಯ ವಸ್ಸುಗಳು, ಔಷಧಿಗಳು ಮುಂತಾದ ಹಲವಾರು ವಸ್ತುಗಳು "ಹಲಾಲ್ ಪ್ರಮಾಣಿತ" ಆಗಿವೆ. "ಹಲಾಲ್" ಪರಿಕಲ್ಪನೆ ಈಗ ಯುನಾನಿ ಮತ್ತು ಆಯುರ್ವೇದ ಔಷಧಿಗಳಿಗೂ ಆನ್ವಯಿಸಲಾಗಿದೆ. ಇಷ್ಟೇ ಅಲ್ಲ, ತುಳಸಿ, ಸಾರ ಮತ್ತು ಚಹಾಗಳಿಗೂ "ಹಲಾಲ್ ಪ್ರಮಾಣಪತ್ರ" ನೀಡಲಾಗುತ್ತಿದೆ.
ಭಾರತ ಸರ್ಕಾರದ ಅಧಿಕೃತ ಆಹಾರ ಭದ್ರತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ಹಾಗೂ ಆಹಾರ ಮತ್ತು ಔಷಧಿ ಪ್ರಾಧಿಕಾರ (FDA) ಸಂಸ್ಥೆಗಳು ಉತ್ಪನ್ನಗಳನ್ನು ಪ್ರಮಾಣಿತಗೊಳಿಸುತ್ತಿರುವಾಗ, ಬೇರೆ ಧಾರ್ಮಿಕ "ಹಲಾಲ್ ಪ್ರಮಾಣಪತ್ರ" ಪಡೆಯುವ ಅಗತ್ಯವೇನು? ಇಂದು ಮ್ಯಾಕ್ ಡೊನಾಲ್ಡ್ ಕೆಎಫ್ಸಿ, ಬರ್ಗರ್ ಕಿಂಗ್, ಪಿಜ್ಜಾ ಹಟ್ ಮುಂತಾದ ಕಂಪನಿಗಳು ಹಿಂದೂ, ಜೈನ, ಸಿಖ್ ಮೊದಲಾದ ಮುಸ್ಲಿಮೇತರ ಸಮುದಾಯಗಳಿಗೆ "ಹಲಾಲ್ ಪ್ರಮಾಣಿತ" ಆಹಾರ ಮಾರುತ್ತಿವೆ. ಭಾರತದಲ್ಲಿ ಕೇವಲ 15% ಮುಸ್ಲಿಮರಿಗಾಗಿ 80% ಹಿಂದೂಗಳ ಮೇಲೆ "ಹಲಾಲ್" ಉತ್ಪನ್ನ ಹೇರಿಕೆ ಮಾಡುವುದು ನಾವು ಸಹಿಸುವುದಿಲ್ಲ.ಜಿಲ್ಲೆಯಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾಧಿಕಾರಿ, ತೀರ್ಥಹಳ್ಳಿ, ಶಿರಸ್ತೆದಾರ್, ಭದ್ರಾವತಿ, ಉಪ ತಹಶಿಲ್ದಾರ್ ಶ್ರೀ. ಭೀಮನಾಯ್ಕ್, ಶಿಕಾರಿಪುರ ತಹಶಿಲ್ದಾರ್,ಆನಂದಪುರ  ಶಿರಸ್ತೆದಾರ್ ಯವರ ಮೂಲಕ ಭಾರತ ಸರಕಾರ ಮತ್ತು ರಾಜ್ಯ ಸರಕಾರಕ್ಕೆ ಮನವಿ ನೀಡಲಾಯಿತು.
*ಜಿಲ್ಲೆಯ ವಿವಿಧ ಮಾಲ್ ಗಳಿಗೆ ಭೇಟಿ ನೀಡಿ ಭಾರತೀಯ ಆರ್ಥಿಕತೆಯನ್ನು ಉಳಿಸಬೇಕಾದರೆ "ಹಲಾಲ್ ಶಕ್ತಿ"ಗೆ ವಿರೋಧಿಸಬೇಕು.*
ನಾವು ನಿಮ್ಮನ್ನು ವಿನಂತಿಸುತ್ತೇವೆ - ನಿಮ್ಮ ಮಾಲ್‌ಗಳಲ್ಲಿ, ಮಾರಾಟ ಕೇಂದ್ರಗಳಲ್ಲಿ ಆಥವಾ ಮಾರುಕಟ್ಟೆಗಳಲ್ಲಿ ಇಂತಹ "ಹಲಾಲ್ ಪ್ರಮಾಣಿತ" ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿ, ದೇಶದ ಭದ್ರತೆಯನ್ನು ಹಾನಿಗೊಳಿಸುವ ಹವಾಲ್ ವ್ಯವಹಾರದಿಂದ ನಮಗೆ ಏನು ಲಾಭ? ಇದರ ದೂರಗಾಮಿ ಪರಿಣಾಮವನ್ನು ಸಂಪೂರ್ಣ ಸಮಾಜವೇ ಅನುಭವಿಸಬೇಕಾಗುತ್ತದೆ. ನೀವು ಕೇವಲ ದೀಪಾವಳಿಯ ಸಮಯದಲ್ಲಿ ಮಾತ್ರವಲ್ಲದೆ, ಎಲ್ಲ ಉತ್ಪನ್ನಗಳಿಗೂ "ಹಲಾದ್ ಮುಕ್ತ" ಭಾರತ ನಿರ್ಮಾಣದ ದೃಷ್ಟಿಯಿಂದ "ಹಲಾಲ್ ಮುಕ್ತ ದೀಪಾವಳಿ" ಅಭಿಯಾನದಲ್ಲಿ ಪಾಲ್ಗೊಳ್ಳಿ. ಎಂದು ಶಿವಮೊಗ್ಗ, ತೀರ್ಥಹಳ್ಳಿ, ಆನಂದಪುರದಲ್ಲಿ ವಿವಿಧ ಮಾಲ್ ಗಳಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ  ಶಿವಮೊಗ್ಗ ನಗರ ಮಾರಾಠ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಶ್ರೀ. ದಿನೇಶ್ ಚೌಹಾಣ್, ವಕೀಲರಾದ ಶ್ರೀ.ವಾಗೀಶ್, ಸೌ.ಗೀತಾಬಾಯಿ, ಶ್ರೀ.ನಟರಾಜ್, ಶ್ರೀ. ರಾಕೇಶ್ ಮಾನೆ, ಬಜರಂಗದಳದ ಶ್ರೀ.ಜಗನ್ನಾಥ್, ಶ್ರೀ ಗೋಪಾಲ್ ಕದಮ್, ಶ್ರೀ.ಮಹೇಶ್. ಶಬರೀಶ್. ಪ್ರದೀಪ್. ಶಿವಕುಮಾರ್. ತೀರ್ಥಹಳ್ಳಿಯ ವಿವೇಕ ಬಳಗದ ಮುಖ್ಯಸ್ಥರಾದ ಶ್ರೀ, ರಾಘವೇಂದ್ರ, ರಾಮಲಿಂಗಶ್ವರ ದೇವಸ್ಥಾನದ ಕಾರ್ಯದರ್ಶಿಗಳಾದ ಶ್ರೀ, ನಾರಾಯಣ, ಬಿಜೆಪಿ ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಸೌ.ಪದ್ಮಾ  ನವೀನ್, ಭಜನಾ ಮಂಡಳಿಯ,, ಶ್ರೀ.ಕಾಂತೇಶ ಪ್ರಭು, ಅರಣ್ಯ ಇಲಾಖೆ ನಿವೃತ್ತರಾದ ಶ್ರೀ, ನಾಗರಾಜ್ , ಸಮನ್ವಯ ಯೋಗ ಸಮಿತಿಯ ಶ್ರೀ.ನಾಗೇಂದ್ರ, ಹಿಂದೂ ಜನಜಾಗೃತಿಯ ಸಮಿತಿಯ ಶ್ರೀ. ವಿಶ್ವನಾಥ್, ಸೌ. ಕಾಂಚನ ಶೇಟ್, ಶ್ರೀ.ರಾಘವೇಂದ್ರ, ಶ್ರೀ ವಿಠ್ಠಲ ಆಚಾರ್, ಶ್ರೀ ಹರೀಶ್ ಗೌಡ  ಸೇರಿದಂತೆ ರಾಷ್ಟ್ರ, ಹಾಗೂ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.