ಅ.28ರಂದು ಕರ್ನಾಟಕ ಪೊಲೀಸರ ಕೈಸೇರಲಿವೆ ಹೊಸ ಪೀಕ್ ಕ್ಯಾಪ್:ಸ್ಲೋಚ್ ಹ್ಯಾಟ್​ಗೆ ಕೊಕ್

 *ಬೆಂಗಳೂರು : ಕರ್ನಾಟಕ ಪೊಲೀಸ್​ ಇಲಾಖೆಯ ಕಾನ್​ಸ್ಟೇಬಲ್‌ಗಳು ಮತ್ತು ಹೆಚ್​​ಸಿಗಳು ಧರಿಸುತ್ತಿದ್ದ ಬ್ರಿಟಿಷ್​ ಕಾಲದ ಟೋಪಿ  ಬದಲಾವಣೆಗೆ ಇದೀಗ ಕಾಲ ಸನ್ನಿಹಿತವಾಗಿದೆ. ಸ್ಲೋಚ್​​​ ಹ್ಯಾಟ್​ಗೆ ಕೊಕ್​​ ನೀಡಲಾಗುತ್ತಿದ್ದು, ಅದರ ಬದಲಿಗೆ ಪೀಕ್ ಕ್ಯಾಪ್​  ವಿತರಿಸುವ ಗೃಹ ಇಲಾಖೆ ಮುಂದಾಗಿದೆ.*ಸ್ಲೋಚ್ ಹ್ಯಾಟ್​ಗೆ ಕೊಕ್ ನೀಡಿ ಅ 28ರಿಂದಲೇ ಕರ್ನಾಟಕ ಪೊಲೀಸರಿಗೆ ಹೊಸ ಪೀಕ್ ಕ್ಯಾಪ್ ವಿತರಣೆ ಮಾಡಲಾಯಿತು.
 ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅ.28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಹೊಸ ಕ್ಯಾಪ್‌ಗಳ ವಿತರಣೆ ಮಾಡಲಿದ್ದಾರೆ. ಬಳಿಕ ಬೇರೆ ಜಿಲ್ಲೆಗಳ ಕಾನ್ಸ್​​ಟೇಬಲ್​ಗಳಿಗೂ ಹಂತ ಹಂತವಾಗಿ *ಕ್ಯಾಪ್ ವಿತರಣೆ ಮಾಡಲಾಯಿತು.
. ಜೂನ್‌ನಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕ್ಯಾಪ್​ ಬದಲಿಸುವ ಬಗ್ಗೆ ತೀರ್ಮಾನವಾಗಿತ್ತು. ತೆಲಂಗಾಣ ಪೊಲೀಸರು ಧರಿಸುವ *ಪೀಕ್ ಕ್ಯಾಪ್* ಬಗ್ಗೆ ತೀರ್ಮಾನವಾಗಿತ್ತು. ಸದ್ಯ ಹೊಸ ಟೋಪಿಗಳು ತಯಾರಾಗಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ಪೀಕ್​ ಕ್ಯಾಪ್​​ ವಿತರಣೆ ನಡೆಯಲಿದೆ.
ಇತ್ತೀಚೆಗೆ ಡಿಜಿಪಿ ಕಚೇರಿಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್​ಗಳನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ ಪರಿಶೀಲನೆ ಮಾಡಿದ್ದರು. *ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರ* ಕ್ಯಾಪ್​ಗಳನ್ನು ಪರಿಶೀಲಿಸಿದ್ದರು. ಬಳಿಕ ಪ್ರಸ್ತಾವಿತ ಕರ್ನಾಟಕ *ಪೊಲೀಸ್ ಕ್ಯಾಪ್* ಮಾದರಿ ಬಗ್ಗೆ ಚರ್ಚೆ ಮಾಡಿದ್ದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.