ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಇಂದು ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿಧೇ೯ಶಕರುಗಳು ಯಾರು ಅಂತೀರಾ ನೋಡಿ...
ಶಿವಮೊಗ್ಗ:*ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)ಸಂಘದ ಸರ್ವಸದಸ್ಯರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಆವರಣದಲ್ಲಿರುವ ಸಂಘದ ಕಛೇರಿಯ ಮುಂಭಾಗದ ಹಾಲ್ ನಲ್ಲಿ ನಡೆಯಿತು.
ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)ಸಂಘದ ಸರ್ವಸದಸ್ಯರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಹಿಂದಿನ ಸಂಘದ ಅಧ್ಯಕ್ಷರಾದ
ಶ್ರೀ ಎಂ.ಪಿ. ನಾಗರಾಜ್ ಎಸ್.ಪಿ. ನಿವೃತ್ತ
ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಡಿಷನಲ್ ಎಸ್.ಪಿ ಕಾರ್ಯಪ್ಪ ರವರು ಆಗಮಿಸಿದ್ದರು.ಸಂಘದ ಸದಸ್ಯರಾಗಿ ನಿವೃತ್ತರಾಗಿ 10 ವರ್ಷ ಪೂರೈಸಿದ 86 ಸದಸ್ಯರಿಗೆ ಅಡಿಷನಲ್ ಎಸ್.ಪಿರವರು ಸನ್ಮಾನಿಸಿ ಗೌರವಿಸಿದರು.
ನಂತರ ಕಾರ್ಯಕ್ರಮದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೆಲಸ ಮಾಡುವಾಗ ಸಾಕಷ್ಟು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದಾರೆ. ಇದೀಗ ತಾವು ಸೀನಿಯರ್ ಸಿಟಿಜನ್ ಆಗಿದ್ದಿರಾ, ತಮ್ಮ ಆರೋಗ್ಯದ ಬಗ್ಗೆ ಸಾಕಷ್ಡು ಗಮನ ನೀಡಿ, ತಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳಿ ಎಂದರು. ಎಲ್ಲರ ನಿವೃತ್ತ ಜೀವನ ಆನಂದದಾಯಕವಾಗಿರಲಿ.. ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಸದಸ್ಯರು ಇದ್ದು, ಹಿಂದಿನ ಪದಾಧಿಕಾರಿಗಳು ಮತ್ತು ನಿರ್ದೇಶಕರು ಗಳ 3 ವರ್ಷದ ಅವಧಿ ಮುಗಿದಿದ್ದರಿಂದ ದಿನಾಂಕ 28-9-2025 ರಂದು ಸರ್ವ ಸದಸ್ಯರ ಮಹಾಸಭೆಯ ಅನುಮತಿಯನ್ನು ಪಡೆದು ಚುನಾವಣೆಯನ್ನು ನಡೆಸಲಾಯಿತು.
ಪಾರದರ್ಶಕವಾಗಿ ಚುನಾವಣೆಯನ್ನು ನಡೆಸಲಾಯಿತು.ಮೊದಲಿಗೆ ಸದಸ್ಯರಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು. 18 ಜನ ಸದಸ್ಯರು ನಿರ್ದೇಶಕ ರುಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಕೈ ಎತ್ತುವ ಮೂಲಕ ಅತಿ ಹೆಚ್ಚು ಮತಗಳನ್ನು ಪಡೆದ ಸದಸ್ಯರನ್ನು ನಿರ್ದೇಶಕ ರಾಗಿ ಆಯ್ಕೆಯನ್ನು ಮಾಡಲಾಯಿತು.ಅದರಲ್ಲಿ 15 ಸದಸ್ಯರನ್ನು ನಿರ್ದೇಶಕ ರಾಗಿ ಆಯ್ಕೆ ಮಾಡಲಾಯಿತು. ನೂತನ ನಿರ್ದೇಶಕ ಕರುಗಳ ಅವಧಿ ಮೂರು ವರ್ಷದ ಅವಧಿಯಾಗಿರುತ್ತದೆ.
ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ದಿನಾಂಕ 28-9-2025 ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನಿಧೇ೯ಶಕರುಗಳು :
೧) ಕುಪ್ಪಯ್ಯ ASI(Rtd).
೨) ಚಂದ್ರಶೇಖರಪ್ಪ PSI (Rtd).
೩) ಜಗನ್ನಾಥಯ್ಯ ,PSI (Rtd).
೪) ಎ ಡಿ ಶಿವಮೂರ್ತಿ PSI (Rtd)
೫) ತುಕಾರಾಂ AHC (Rtd)
೬) ಹೆಚ್ ಇ ಮಂಜಪ್ಪ PI Rtd)
೭) ಡಿ ಜಿ ನಾಗರಾಜ CPC (Rtd)
೮) ಕ್ರಿಷ್ಣೇ ಗೌಡ HC (Rtd)
೯) ಬಾಬು ರಾವ್ ASI (Rtd)
೧೦) ಮಾರುತಿ RSI(Rtd)
೧೧) ಸಣ್ಣಯ್ಯ ASI (Rtd)
೧೨) ಜಾನ್ ಡಿಸೋಜ ASI (Rtd)
೧೩) ಪಿ ವಾಸುದೇವನ್ PSI (Rtd)
೧೪) ಎಸ್ ಮಂಜುನಾಥ್ ASI(Rtd)
೧೫)ಎಸ್ ಜಿ ನಾಯ್ಕ Dy S P (Rtd)
ವಿಜೇತರಾದ ಎಲ್ಲಾ ನಿರ್ದೇಶಕ ರಿಗೆ ಅಭಿನಂದನೆಗಳು!ಕಾರ್ಯಕ್ರಮದಲ್ಲಿ ಪ್ರಾರ್ಥನೆ ಯನ್ನು ಭದ್ರಾವತಿ ವಾಸು ತಂಡ ದಿಂದ ನಡೆಯಿತು.ಪ್ರಾರಂಭದಲ್ಲಿ ಕರೋಕೆ ಹಾಡುಗಳನ್ನು ಹಾಡಿ ನೆರೆದಿದ್ದ ಸದಸ್ಯರನ್ನು ರಂಜಿಸಿದರು.
ಕಾರ್ಯದರ್ಶಿ ಎಸ್.ಜಿ.ನಾಯ್ಕ್ ರವರು ಸ್ವಾಗತ ಕೋರಿದರು.
ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಡಿ.ಜಿ.ನಾಗರಾಜ್ ರವರು ಮಾಡಿದರು.
ಸಹಿ-
ಆಡಳಿತ ಮಂಡಳಿಯ ಅಪ್ಪಣೆಯ ಮೇರೆಗೆ
ಎಸ್.ಜಿ. ನಾಯ್ಕ ಡಿ.ವೈ.ಎಸ್.ಪಿ. (ನಿ.)
ಕಾರ್ಯದರ್ಶಿ

Leave a Comment