ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ತಂಡದ ಬಿಗ್ ಕಾರ್ಯಾಚರಣೆ : 3 ಸರಗಳ್ಳತನ ಪ್ತಕರಣಗಳ ಪತ್ತೆ-ಆರೋಪಿ ಅಂದರ್
ಶಿವಮೊಗ್ಗ: *ದಿನಾಂಕ: 11/09/2025* ರಂದು ಬೆಳಗ್ಗೆ *83 ವರ್ಷದ ಶಿವಮೊಗ್ಗ ರವೀಂದ್ರ ನಗರದ* ವಾಸಿ ಮಹಿಳೆಯೊಬ್ಬರು ರವೀಂದ್ರ ನಗರ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ *ಯಾರೋ ಒಬ್ಬ ವ್ಯಕ್ತಿ ಬೈಕ್ ನಲ್ಲಿ ಬಂದು ಕೊರಳಲ್ಲಿದ್ದ 25 ಗ್ರಾಂ ತೂಕದ 150000/- ಬೆಲೆಬಾಳುವ ಬಂಗಾರದ ಸರವನ್ನು ಕಿತ್ತುಕೊಂಡು* ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆ ಗುನ್ನೆ ನಂ: 0081/2025 ಕಲಂ 309(4) ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ *ಶ್ರೀ ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್* ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 *ಶ್ರೀ. ಎ ಜಿ ಕಾರಿಯಪ್ಪ* ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 *ಶ್ರೀ. ಎಸ್ ರಮೇಶ್ ಕುಮಾರ್,* ರವರ ಮಾರ್ಗದರ್ಶನದಲ್ಲಲಿ, ಶಿವಮೊಗ್ಗ ಉಪ ವಿಭಾಗ-ಬಿ ಡಿ ವೈ ಎಸ್ ಪಿ *ಶ್ರೀ. ಸಂಜೀವ್ ಕುಮಾರ್* ರವರ ಮಾರ್ಗದರ್ಶನದಲ್ಲಿ ಜಯನಗರ ಪೊಲೀಸ್ ಠಾಣೆ ಪಿ.ಐ. *ಶ್ರೀ. ಸಿದ್ದೇಗೌಡ ಹೆಚ್ ಎಂ,* ಪಿಎಸ್ಐ *ಶ್ರೀಮತಿ ಕೋಮಲ ಬಿ ಆರ್,* ಎ ಎಸ್ ಐ ಕರಿಬಸಪ್ಪ ಸಿ ಆರ್ ರವರು ಹಾಗೂ ಸಿಬ್ಬಂದಿಯವರಾದ ಎಚ್ ಸಿ ನಾಗರಾಜ್ ಕೆ, ಸಿ ಪಿ ಸಿ- ವಸಂತ ಜಿ, ಸಚಿನ್ ಎಚ್ ಎಸ್, ವೀರೇಶ್ ಬಿ ಎಂ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು *ದಿನಾಂಕ:12/09/2025 ರಂದು ಆರೋಪಿ ಹರೀಶ್ ಬಿ ಎಚ್, 39 ವರ್ಷ, ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕೆಲಸ ವಾಸ ರೇಣುಕಾ ನಿಲಯ ರವೀಂದ್ರ ನಗರ 6ನೇ ಕ್ರಾಸ್ ಶಿವಮೊಗ್ಗ ಸ್ವಂತ ಊರು ಬೇವಿನಹಳ್ಳಿ ಬಾಣಾವರ ಹೋಬಳಿ ಅರಸೀಕೆರೆ ತಾಲೂಕು ಈತನನ್ನು ದಸ್ತಗಿರಿ ಮಾಡಿ* ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತದೆ.
*ಆರೋಪಿತನ ಬಂಧನದಿಂದ ಜಯನಗರ ಪೊಲೀಸ್ ಠಾಣೆಯ ಒಟ್ಟು ಮೂರು ಸರಗಳ್ಳತನ ಪ್ರಕರಣಗಳು ಪತ್ತೆ ಆಗಿರುತ್ತದೆ.*
ಮೂರು ಪ್ರಕರಣಗಳಲ್ಲಿ ಸರಗಳ್ಳತನವಾಗಿದ್ದು *ಒಟ್ಟು 71 ಗ್ರಾಂ ನ 03 ಬಂಗಾರದ ಸರಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಅಂದಾಜು ಮೌಲ್ಯ 710000/- ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ಪ್ಲೆಂಡರ್ ಬೈಕ್ ಅನ್ನು ಮೌಲ್ಯ 30000/- ಅಮಾನತ್ತು ಪಡಿಸಿರುತ್ತದೆ.*
*ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ*
ಜಯನಗರ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಅವರ ತಂಡವು ಒಟ್ಟು ಮೂರು ಸರಗಳ್ಳತನ ಪ್ರಕರಣಗಳ ಸುಳಿವು ಪಡರದು ಆರೋಪಿಯನ್ನು ಪತ್ತೆಹಚ್ವಿ 3 ಬಂಗಾರದ ಸರವನ್ನು ವಶಪಡಿಸಿಕೊಂಡಿರುತ್ತಾರೆ.ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಹಲೋ ಶಿವಮೊಗ್ಗ ದಿನಪತ್ರಿಕೆಯ ಬಳಗದ ವತಿಯಿಂದ ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಗೆ ಮತ್ತು ಸಿಬ್ಬಂಧಿಗೆ ಅಭಿನಂದನೆಗಳು.
ಶಿವಮೊಗ್ಗ ಎಸ್ಪಿ ಯವರು ಅಭಿನಂದಿಸಿದ್ದಾರೆ OK ...ಆದರೇ ಉತ್ತಮ ವಾಗಿ ಕೆಲಸ ಮಾಡಿದ ತನಿಖಾ ತಂಡಕ್ಕೆ ಇವರಿಗೆ ಕ್ಯಾಷ್ ರಿವಾರ್ಡ್ ಹಾಗೂ ಪ್ರಶಂಸನಿಯ ಪತ್ರವನ್ನು ನೀಡಬೇಕು ಎನ್ನುವುದು ನಮ್ಮ ಮನವಿ..

Leave a Comment