ಕರ್ನಾಟಕದಲ್ಲಿ ಮೊದಲ ಬಾರಿ ನಾನು ಮತ್ತು ಗುಂಡ 2 ಪ್ರೇಮಿಯರ್ ಶೋ ಶಿವಮೊಗ್ಗದಲ್ಲಿ ..

ಶಿವಮೊಗ್ಗ: ಚಿತ್ರ ಪ್ರೇಮಿಗಳಿಗೊಂದು ಸಂತಸದ ಸುದ್ದಿ, ಮಲೆನಾಡಿನ ತೀರ್ಥಹಳ್ಳಿ- ಕೊಪ್ಪ, ತೀರ್ಥಹಳ್ಳಿ ತಾಲೂಕಿನ ದೇವಂಗಿ, ತುಪ್ಪದ ಮನೆ, ಆಗುಂಬೆ, ಬಸವಾನಿ, ಹಾರೋಗುಳಿಗೆ ಯಡೂರು  ಮುಂತಾದ ಮಲೆನಾಡಿನ ರಮಣೀಯ ಸೌಂದರ್ಯದ ತಾಣದಲ್ಲಿ ಚಿತ್ರೀಕರಣಗೊಂಡ ನಾನು ಮತ್ತು ಗುಂಡ 2 ಚಲನಚಿತ್ರ ಪ್ರೀಮಿಯರ್ ಶೋ ಶಿವಮೊಗ್ಗದ ಭಾರತ್ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 3ರಂದು ಮಧ್ಯಾಹ್ನ 2 ಗಂಟೆಗೆ  ಮಲೆನಾಡಿನ ಮನಸುಗಳಿಗಾಗಿ ತೋರಿಸಲಾಗುತ್ತಿದೆ.
ನಾನು ನನ್ನ ಮೊಮ್ಮಗ ಲೋಕಾಂಶ್ ಜೊತೆಯಲ್ಲಿ ಮಾಲ್ನಲ್ಲಿ ಪ್ರೀಮಿಯರ್ ಶೋನಲ್ಲಿ....
 ಭಾಗ ಒಂದರಲ್ಲಿ ನಟಿಸಿದ್ದ ಸಿಂಬು ಎಂಬ ಶ್ವಾನದ ಮಗ ಸಿಂಬ ಈ ಚಿತ್ರದ ಪ್ರಮುಖ ಪಾತ್ರದಾರಿ. ಶಿವಮೊಗ್ಗದ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆಗಾಗಿ ಸಿಂಬ ಆಗಮಿಸಲಿದ್ದಾನೆ. ಜೊತೆಗೆ ಕಾಮಿಡಿ ಕಿಲಾಡಿ ಖ್ಯಾತಿಯ  ನಯನ ಮುಂತಾದವರು ಈ ಪ್ರೀಮಿಯರ್ ಶೋಯಲ್ಲಿ ಭಾಗವಹಿಸುತ್ತಿದ್ದಾರೆ.
  ಈ ಚಿತ್ರದ ನಾಯಕ ನಟ ಬಿಗ್ ಬಾಸ್ ಖ್ಯಾತಿಯ  ರಾಕೇಶ್ ಅಡಿಗ  ಮಲೆನಾಡಿನ ತೀರ್ಥಹಳ್ಳಿ ಯವರು.
 ನಾಯಿ ಮತ್ತು ಹುಡುಗನ ಭಾಂದವ್ಯದ ಹಲವು ಅದ್ಭುತ ಕ್ಷಣಗಳು ಈ ಚಿತ್ರದಲ್ಲಿ ಕಾಣಸಿಗಲಿದೆ. ಸಿಂಬನ ಭಾವನಾತ್ಮಕ ಅಭಿನಯ 
 ಎಲ್ಲರ ಮನಸೂರೆ ಗೊಳ್ಳಲಿದೆ.
              ಚಿತ್ರ ತಂಡ ಶೋನಲ್ಲಿ ಭಾಗಿ
ಇಡೀ ಕುಟುಂಬ ಬಂದು ನೋಡಬಹುದಾದಂತಹ ಸಂಪೂರ್ಣ ಕೌಟುಂಬಿಕ ಚಿತ್ರವಿದು. ಈಗಾಗಲೇ ಇದರ ಎರಡು ಹಾಡುಗಳು ಜನಪ್ರಿಯ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.