ಶಿವಮೊಗ್ಗ: ನಿವೃತ್ತ DAR AHC ಬೋಜರಾಜ ನಿಧನ:ಸಂತಾಪ
ಶಿವಮೊಗ್ಗ: ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ ಶ್ರೀ ಬೋಜರಾಜ AHC(Rtd)DAR ಇವರು ನಿನ್ನೆ ಸಂಜೆ ಸೋಮವಾರ ಹೃದಯ ಸಂಬಂಧಿಸಿದ ಕಾಯಿಲೆಯಿಂದ ನಿಧನರಾಗಿದ್ದಾರೆ.
ದಿ - 01-08-1956 ರಂದು ಹುಟ್ಟಿದ ಇವರು,ನಂತರ ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರಿದರು. ದಿನಾಂಕ: 31-07-2016 ರಂದು ನಿವ್ರತ್ತರಾಗಿ,ಶಿವಮೊಗ್ಗಾ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ ಶ್ರೀ ಬೋಜರಾಜ AHC(Rtd)DAR ರವರು ದಿ-4-8-2025 ರಂದು ಸಂಜೆ 6 ಘಂಟೆಗೆ ಹೃದಯ ದ ಸಂಬಂಧಿಸಿದ ಕಾಯಿಲೆಯಿಂದ ನಂಜಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮ್ರತರು ಪತ್ನಿ ಶ್ರೀಮತಿ ನಾಗರತ್ನ,ಮಗ ವಿನಯ, ಹೆಣ್ಣುಮಕ್ಕಳಾದ ಭಾಗ್ಯಲಕ್ಷ್ಮಿ, ಮತ್ತು ಛಾಯಾ,ಅಳಿಯಂದಿರು,
ಮೊಮ್ಮೊಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮ್ರತರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.ಮೃತರ ಸಂಬಂದಿಕರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾಥಿ೯ಸುತ್ತೇವೆ.
ಮೃತರ ಸಾವಿನ ಸುದ್ದಿಯನ್ನು ತಿಳಿದು ಶಿವಮೊಗ್ಗದ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ವರು ಹಾಗೂ ಪಧಾದಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಸಂಬಂದಿಕರಿಗೆ ಪೊಲೀಸ್ ಇಲಾಖೆಯಿಂದ ಸಿಗಬಹುದಾದ ಸರ್ಕಾರದ ಸೌಲಭ್ಯಗಳನ್ನು ಮೃತರ ಅಂತ್ಯಕ್ರಿಯೆ ಗೆ ರೂ.10 ಸಾವಿರ ವನ್ನು ಕೂಡಲೇ ಕೊಡಿಸುವುದಾಗಿ ತಿಳಿಸಿದ್ದಾರೆ.
ಮ್ರತ ದೇಹವನ್ನು ಆಯನೂರು ಲೇಡೀಸ್ ಹಾಸ್ಟೆಲ್ ಎದುರಿಗೆ
ಇರುವ ಮೃತರ ಮನೆಯಲ್ಲಿ ಇಡಲಾಗಿದ್ದು,ದಿ:5-8-2025 ರಂದು ಮದ್ಯಾಹ್ನದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.
Leave a Comment