ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ- ಅಧಿಕಾರ ಸ್ವೀಕಾರ : ಅಯೋಗ್ಯ ವಾರ್ತಾಧಿಕಾರಿ ಮಾರುತಿ ಔಟ್...
ಶಿವಮೊಗ್ಗ.ಆಗಸ್ಟ್26: ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ರವರು ಇಂದು ಬೆಳಿಗ್ಗೆ ಶಿವಮೊಗ್ಗ ವಾರ್ತಾ ಇಲಾಖೆಯ ಕಚೇರಿಗೆ ಬಂದು ಸರ್ಕಾರದ ಆದೇಶದ ಮೇರೆಗೆ ಇಂದು ಅಧಿಕಾರ ಸ್ವೀಕರಿಸಿದರು.
ಅಯೋಗ್ಯ,ಅವಿವೇಕಿ,ವಾರ್ತಾಧಿಕಾರಿ ಮಾರುತಿ ಔಟ್: ನೈಜ ಪತ್ರಕರ್ತರಲ್ಲಿ ಸಂತಸ
ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್.ಇವರನ್ನು ಶಿವಮೊಗ್ಗ ದಿಂದ ದಾವಣಗೆರೆ ಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಈತನ ಮೇಲೆ ಅನೇಕ ಗುರುತರ ಆರೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.
ನೂತನ ವಾರ್ತಾಧಿಕಾರಿ ಯನ್ನು ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಶಿವಮೊಗ್ಗ ಘಟಕದಿಂದ ಸ್ವಾಗತಿಸಿ,ಸನ್ಮಾನಿಸಲಾಯಿತು.
ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಶಿವಮೊಗ್ಗ ವಾರ್ತಾಇಲಾಖೆಯಲ್ಲಿ 15 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಇದುವರೆಗೂ ವರ್ಗಾವಣೆ ಗೊಂಡಿರಲಿಲ್ಲ.ಈತ ನಾನು ನಿವೃತ್ತಿ ಆಗುವವರೆಗೂ ಶಿವಮೊಗ್ಗದಲ್ಲಿ ಇರುತ್ತೆನೆ ಎಂಬ ಹಗಲು ಕನಸು ಕಂಡಿದ್ದ.ಹಲವು ಪತ್ರಕರ್ತರ ಬಳಿ ನನಗೆ ಟ್ರಾನ್ಸಫರ್ ಮಾಡಿಸಲು ಯಾರಿಂದಲೂ ಆಗಲ್ಲ ಎಂದು ಬೆಂಚ್ ಕುಟ್ಟಿ ಬಡಿದು ಹೇಳುತ್ತಿದ್ದ.
ವಾರ್ತಾಧಿಕಾರಿ ಮಾರುತಿ ಇವರ ಮೇಲೆ ಅನೇಕ ದೂರುಗಳು ವಾರ್ತಾ ಇಲಾಖೆಯ ವರಿಷ್ಟ ಮೇಲಾಧಿಕಾರಿಗಳಿಗೆ ನೀಡಲಾಗಿತ್ತು. ಈತ 4-5 ಜನ ಪತ್ರಕರ್ತರ ಜೊತೆಯಲ್ಲಿ ಶಾಮೀಲಾಗಿ ತನಗೆ ಇಷ್ಟಬಂದಂತೆ ಕಾರ್ಯನಿರ್ವಹಿಸುತ್ತಾ. ನೈಜ ಪತ್ರಕರ್ತರಿಗೆ ತಾರತಮ್ಯ ಬೇದಭಾವ ಎಸಗುತ್ತಿದ್ದನು. ವಾರ್ತಾ ಇಲಾಖೆಯನ್ನು ಕುಲಗೆಡಿಸಿದ್ದನು. ಇದೀಗ ವರ್ಗಾವಣೆ ಗೊಂಡಿರುವುದು ಹಲವು ಸಮಾನ ಮನಸ್ಕ ನೈಜ ಪತ್ರಕರ್ತರಿಗೆ ಸಂತೋಷ ತಂದಿದೆ. ಇದು ಮಹಾನ್ ಪತ್ರಕರ್ತನಿಗೆ ಆಘಾತ ತಂದಿದೆ ಅಂತಲೇ ಹೇಳಬಹುದು.ಇನ್ನು ಮಹಾನ್ ಪತ್ರಕರ್ತನ ಆಟಕ್ಕೆ ಪೂರ್ತಿ ಬ್ರೇಕ್ ಬಿಳಲಿದೆ.
ಇದೀಗ ದಾವಣಗೆರೆ ಗೆ ವರ್ಗಾವಣೆ ಗೊಂಡಿರುವ ಮಾರುತಿ ಮಹಾನ್ ಪತ್ರಕರ್ತನಿಗೆ ರಿಪೋರ್ಟಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಯಾವುದೇ ಒಂದು ಅರ್ಜಿ ಅಥವಾ ಫೈಲ್ ಬಂದರೂ ಸಹ ಮಹಾನ್ ಪತ್ರಕರ್ತನ ಕಚೇರಿಗೆ ಹೋಗಿ ತೋರಿಸಿ ಬರುತ್ತಿದ್ದ ಎಂಬ ಆರೋಪ ಇದೆ. ಅವನ ಅಣತಿಯಂತೆ ವಾರ್ತಾ ಇಲಾಖೆಯ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದವು.ಇದು ಹಲವು ಪತ್ರಕರ್ತರನ್ನು ಕೆರಳಿಸಿತ್ತು.
ಶಿವಮೊಗ್ಗ ವಾರ್ತಾ ಇಲಾಖೆಯಿಂದ ಔಟ್ ಆಗಿರುವ ಮಾರುತಿ ಆರ್. ವಾರ್ತಾಧಿಕಾರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಶಿವಮೊಗ್ಗದ RTO ರಸ್ತೆಯಲ್ಲಿರುವ. ಸರ್ಕಾರದ ಕಟ್ಟಡ ಕೋಟಿ.. ಕೋಟಿ ಖರ್ಚು ಮಾಡಿ ಜಿಲ್ಲೆಯ ಪತ್ರಕರ್ತರಿಗೆ ಅನೂಕೂಲವಾಗಲೆಂದು ಕಟ್ಟಿದ ಸರ್ಕಾರದ ಪತ್ರಿಕಾಭವನ ಬೇರೊಬ್ಬರ ಪತ್ರಿಕಾಭವನ ಎಂದು ಬೋಬ್ಬೆ ಹೊಡೆದು ಹೇಳಿಕೊಂಡು ಹೇಳುತ್ತಿದ್ದ, ಪತ್ರಿಕಾಭವನ ಅಡವಿಟ್ಟಿದ್ದ. ವಾರ್ತಾ ಇಲಾಖೆಯ ಸಂಬಳ ಅನ್ನ ತಿನ್ನುತ್ತಿದ್ದರೂ ಮಹಾನ್ ಪತ್ರಕರ್ತನ ಪರ ಬ್ಯಾಟಿಂಗ್ ಮಾಡಿಕೊಂಡು ಆರಾಮಿಯಾಗಿದ್ದ, ವಾರ್ತಾ ಇಲಾಖೆಗೆ ಮತ್ತು ಹಲವು ಪತ್ರಕರ್ತರಿಗೆ ದ್ರೋಹ ಬಗೆದಿದ್ದ ಪತ್ರಿಕಾಭವನದ ಆದಾಯ ಕೂಡ ಸರ್ಕಾರಕ್ಕೆ ಸೇರದೇ ಒಬ್ಬ ವ್ಯಕ್ತಿ ಗೆ ಸಂದಾಯವಾಗುತ್ತಿತ್ತು. ಈ ಬಗ್ಗೆ ನಮ್ಮ ಶಿವಮೊಗ್ಗ ಘಟಕದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಧ್ವನಿ ಎತ್ತಿತ್ತು .ಹೋರಾಟ ಪ್ರತಿಭಟನೆ ಸಹ ಮಾಡಲಾಗಿತ್ತು.
ಪತ್ರಿಕಾಭವನದಲ್ಲಿ ಬರುವ ಆದಾಯವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ಒಂದು ಅಕೌಂಟ್ ಮಾಡಿ ಹಣ ಅಲ್ಲಿಗೆ ಕಟ್ಡಿದ್ದರೆ,,ಹಲವು ಪತ್ರಕರ್ತರಿಗೆ ಅನೂಕೂಲ ಆಗುತ್ತಿತ್ತು. ಆರೋಗ್ಯ ಸಮಸ್ಯೆ ಆದರೆ ಇದರಿಂದ ಚಿಕಿತ್ಸಾ ವೆಚ್ಚ ಕೊಡಲು ಅನುಕೂಲ ಆಗುತ್ತಿತ್ತು.ಪತ್ರಕರ್ತರು ಮೃತಪಟ್ಟರೆ ಅವರ ಕುಟುಂಬದ ಸದಸ್ಯರಿಗೆ ಅಂತ್ಯಕ್ರಿಯೆ ಗೆ ಹಣ ಕೊಡಬಹುದಾಗಿತ್ತು,ಇದ್ಯಾವುದನ್ನು ಮಾಡದೇ ಬಂದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.ನ್ಯಾಯ ಸಿಗುವ ವರೆಗೆ ಧ್ವನಿ ಸಂಘದ ಹೋರಾಟ ಮುಂದುವರಿಯುತ್ತದೆ.ಇದುವರೆಗೂ ವಸೂಲಿ ಮಾಡಿದ ಹಣವನ್ನು ವಾಪಾಸ್ಸು ಹಿಂಪೆಡೆಯುವರೆಗೆ ಹೋರಾಟ ಮುಂದುವರಿಯುತ್ತದೆ.
ಅಯೋಗ್ಯ ಅವಿವೇಕಿ, ಭ್ರಷ್ಟ ಅಧಿಕಾರಿ,ಮಾರುತಿ ಮಹಾನ್ ಪತ್ರಕರ್ತನ ಕೈಗೊಂಬೆಯಾಗಿದ್ದ, ಈತನನ್ನು ಕೂಡಲೇ ಎತ್ತಂಗಡಿ ಮಾಡಿರುವುದು ಸಂತಸ ತಂದಿದೆ.ಈತನ ವರ್ಗಾವಣೆಗೆ ಹಲೋ ಶಿವಮೊಗ್ಗ ದಿನಪತ್ರಿಕೆ ವತಿಯಿಂದ ಅನೇಕ ಪತ್ರಗಳನ್ನು ಬರೆದು ಈತನ ನಡವಳಿಕೆ ಕಾರ್ಯವೈಖರಿ ಬಗ್ಗೆ ತಿಳಿಸಲಾಗಿತ್ತು.ಆದರೇ ಈತನ ಚೇಲಾಗಳು ಇವನು ಮಾರುತಿ ವರ್ಗಾವಣೆ ಆಗದಂತೆ ತಡೆಯಲು ಏನೇನು ಸರ್ಕಸ್ ಮಾಡಿದರೂ ಸಹ ಈ ಬಾರಿ ಅದು ಫಲಿಸಲಿಲ್ಲ.ವಾರ್ತಾ ಇಲಾಖೆಗೆ ಹಿಡಿದಿದ್ದ ಗ್ರಹಣ ಬಿಟ್ಟಿದೆ ಅಂತಲೇ ಹೇಳಬಹುದು.
ಮಾರುತಿ ನಾನು ವರ್ಗಾವಣೆ ಆದರೆ ಸುದ್ದಿ ಮಾಡುವರು ಯಾರು ಇಲ್ಲ,ನಾನು ಇಲ್ಲಿಂದ ವರ್ಗಾವಣೆ ಆದರೇ ವಾರ್ತಾ ಇಲಾಖೆ ಮುಚ್ಚುತ್ತಾರೆ ಎಂದು ಅವನ ತಲೆಯಲ್ಲಿ ಇತ್ತು. 15 ವರ್ಷದಿಂದ ಒಂದೇ ಕಡೆ ರಾಜಕೀಯ ವ್ಯಕ್ತಿ ತರ ಕೆಲಸ ಮಾಡಿಕೊಂಡಿದ್ದ, ಕೊಟ್ಟ ವಾರ್ತಾಧಿಕಾರಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡದೇ ಕುಳಿತಿದ್ದ , ಇದೀಗ ಮಾರುತಿ ವಾರ್ತಾಧಿಕಾರಿ ಯನ್ನು ಯಾವುದೇ ಒತ್ತಡಕ್ಕೆ ಮಣಿಯದೇ ಎತ್ತಂಗಡಿ ಮಾಡಿರುವುದು ಶ್ಲಾಘನೀಯ.ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪರವರಿಗೆ ಮತ್ತು ಅವರ P.A,ಮತ್ತು ಸ್ಪೆಷಲ್ ಆಫೀಸರ್ ಗಳಿಗೆ ಹಾಗೂ ಕೇಂದ್ರ ವಾರ್ತಾ ಇಲಾಖೆಯ ಕಮೀಷನರ್ ಮತ್ತು ಇತರ ಅಧಿಕಾರಿಗಳಿಗೆ ,ಹಾಗೂ ಸರ್ಕಾರದ ಚೀಪ್ ಸೆಕ್ರೆಟರಿ ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿ ಮತ್ತು ಸಿ.ಎಂ ರವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.
ಇದೀಗ ನಮ್ಮ ಧ್ವನಿ ಸಂಘದ ಸತ್ಯದ ಹೋರಾಟಕ್ಕೆ ಜಯಸಿಕ್ಕಂತೆ ಆಗಿದೆ. ಈತ ವಾರ್ತಾಇಲಾಖೆಯಲ್ಲಿ 15 ವರ್ಷದಿಂದ ಇದ್ದು ಏನೇನು ಮಾಡಿದ್ದಾನೆ. ಮತ್ತು ಮಹಾನ್ ಪತ್ರಕರ್ತ 30 ವರ್ಷದಿಂದ ಏನು ಮಾಡಿದ್ದಾನೆ.ವಿದ್ಯಾಬ್ಯಾಸ ಏನು ಎಂಬುದರ ಬಗ್ಗೆ ಕರ್ಮ ಕಾಂಡದ ಬಗ್ಗೆ ಇವರಿಬ್ಬರುಗಳ ಪುಸ್ತಕವನ್ನು ಹೊರತರಲು ಎಲ್ಲಾ ಸಿದ್ದತೆ ಹಾಗೂ ಇವರ ಕರ್ಮಕಾಂಡ ಭ್ರಷ್ಟಾಚಾರದ ಬಗ್ಗೆ ಕಾನೂನು ಹೊರಾಟವನ್ನು ಮುಂದುವರಿಸಲಾಗುವುದು. ಇವರಿಬ್ಬರ ಮಾತನ್ನು ಕೇಳದೇ ಇದ್ದ ಪತ್ರಕರ್ತರಿಗೆ ಟಾರ್ಗೆಟ್ ಮಾಡಿ, ನೂತನವಾಗಿ ಬರುವ ಸಮಾನ ಮನಸ್ಕ ಪತ್ರಕರ್ತರನ್ನು ಹೆದರಿಸುವ ತಂತ್ರಗಾರಿಕೆಯನ್ನು ಇವರು ಮಾಡುತ್ತಿದ್ದರು. ಇದೀಗ ಮಾರುತಿ ವರ್ಗಾವಣೆಯಿಂದ ಎಲ್ಲಾ ಪತ್ರಕರ್ತರಿಗೆ ಒಳ್ಳೆಯದು ಆಗಲಿದೆ.ಇನ್ನೊಬ್ಬ ಮಹಾನ್ ಪತ್ರಕರ್ತ ಪತ್ರಿಕಾಭವನದಿಂದ ಹೊರಬಂದರೇ ಶಿವಮೊಗ್ಗದ ಪತ್ರಕರ್ತರಿಗೆ ಒಳ್ಳೆಯದು ಆಗಲಿದೆ. ಅಲ್ಲಿಯವರೆಗೆ ಧ್ವನಿ ಸಂಘದ ಹೋರಾಟ ನಿರಂತರವಾಗಿರುತ್ತದೆ. ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ಪತ್ರಕರ್ತರಿಗೆ ಧನ್ಯವಾದಗಳು.
ನೂತನ ವಾರ್ತಾಧಿಕಾರಿ ಧನಂಜಯ್ ರವರು ಜಿಲ್ಲೆಯ ಪತ್ರಕರ್ತರಿಗೆ ಮೀಡಿಯಾ ಮತ್ತು ನಾನ್ ಮೀಡಿಯಾ ತಾರತಮ್ಯ ತೋರದೇ ಬೇದಭಾವ ತೋರದೇ ಕರ್ತವ್ಯವನ್ನು ನಿರ್ವಹಣೆ ಮಾಡಿ ಶಿವಮೊಗ್ಗ ವಾರ್ತಾ ಇಲಾಖೆಯನ್ನು ಶುದ್ದಿಗೊಳಿಸಬೇಕಿದೆ. ಮೀಡಿಯಾ ಮತ್ತು ನಾನ್ ಮೀಡಿಯಾ ಅಂತಾ ವಿಂಗಡಿಸದೇ ಎಲ್ಲಾ ಪತ್ರಕರ್ತರ ಜನಸ್ನೇಹಿಯಾಗಿ ಕೆಲಸ ಮಾಡಲಿ ಎಂಬುದು ನಮ್ಮ ಆಶಯವಾಗಿದೆ.
ವಾರ್ತಾ ಇಲಾಖೆಯ ಅಧಿಕಾರಿಯಾಗಿದ್ದರೂ ಕೆಲವೇ ಪತ್ರಕರ್ತರಿಗಷ್ಟೇ ವಾರ್ತಾ ಇಲಾಖೆ ಮೀಸಲು ಎಂಬಂತೆ ವರ್ತಿಸುತ್ತಿದ್ದ. ಈತ ವಾರ್ತಾ ಇಲಾಖೆಯ ಶಿವಮೊಗ್ಗ ಕಚೇರಿಗೆ ಕಳೆದ 15 ವರ್ಷಗಳ ಹಿಂದೆ ವಾರ್ತಾ ಸಹಾಯಕನಾಗಿ ಬಂದಾಗಿನಿಂದಲೂ ಶಿವಮೊಗ್ಗದಲ್ಲಿ ಪತ್ರಕರ್ತರ ನಡುವೆ ಒಳಜಗಳ ತಂದಿಕ್ಕುವುದನ್ನೇ ಕಸುಬಾಗಿಸಿಕೊಂಡಿದ್ದ. ಆ ಮೂಲಕ ತನ್ನ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡಿದ್ದ.
ಈತನಿಗೆ ಹಲವಾರು ಬಾರಿ ವರ್ಗಾವಣೆಯಾದಾಗಲೂ ತನ್ನ ಪ್ರಭಾವ ಬಳಸಿಕೊಂಡು ಇದೇ ಜಾಗದಲ್ಲಿ ಮುಂದುವರೆದಿದ್ದಲ್ಲದೇ ಕಳೆದ ಎರಡು ವರ್ಷಗಳದ ಇಲ್ಲಿ ತೆರವಾಗಿದ್ದ ಹಿರಿಯ ಸಹಾಯಕರ ಹುದ್ದೆಗೆ ಯಾರೂ ಬರದಂತೆ ನೋಡಿಕೊಂಡಿದ್ದ. ಈತ ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರೂ ಈತನ ವರ್ಗಾವಣೆಗೆ ಕ್ರಮ ಕೈಗೊಂಡಿರಲಿಲ್ಲ.
ಇಂದು ಸರ್ಕಾರದ ಅಧೀನ ಕಾರ್ಯದರ್ಶಿಯವರು ಈತನನ್ನು ದಾವಣಗೆರೆಯ ವಾರ್ತಾ ಇಲಾಖೆಗೆ ವರ್ಗ ಮಾಡಿ ಆದೇಶಿಸಿದ್ದಾರೆ.
ಅಂತೂ ಇಂತೂ ಶಿವಮೊಗ್ಗದ ವಾರ್ತಾ ಇಲಾಖೆಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ.
Leave a Comment