ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಎತ್ತಂಗಡಿ

ಶಿವಮೊಗ್ಗ: ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್.ಇವರನ್ನು ಶಿವಮೊಗ್ಗ ದಿಂದ ದಾವಣಗೆರೆ ಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಶಿವಮೊಗ್ಗ ವಾರ್ತಾಇಲಾಖೆಯಲ್ಲಿ 15 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಇದುವರೆಗೂ ವರ್ಗಾವಣೆ ಗೊಂಡಿರಲಿಲ್ಲ.
ವಾರ್ತಾಧಿಕಾರಿ ಮಾರುತಿ ಇವರ ಮೇಲೆ ಅನೇಕ ದೂರುಗಳು ವಾರ್ತಾಇಲಾಖೆಯ ಮೇಲಾಧಿಕಾರಿಗಳಿಗೆ ನೀಡಲಾಗಿತ್ತು. ಈತ 4-5 ಜನ ಪತ್ರಕರ್ತರ ಜೊತೆಯಲ್ಲಿ ಶಾಮೀಲಾಗಿ ತನಗೆ ಇಷ್ಟಬಂದತೆ ಕಾರ್ಯನಿರ್ವಹಿಸುತ್ತಾ. ನೈಜ ಪತ್ರಕರ್ತರಿಗೆ ತಾರತಮ್ಯ ವೆಸಗುತ್ತಿದ್ದನು. ವಾರ್ತಾ ಇಲಾಖೆಯನ್ನು ಕುಲಗೆಡಿಸಿದ್ದನು. ಇದೀಗ ವರ್ಗಾವಣೆ ಗೊಂಡಿರುವುದು ಹಲವು ಪತ್ರಕರ್ತರಿಗೆ ಸಂತೋಷ ತಂದಿದೆ. ಇದು ಮಹಾನ್ ಪತ್ರಕರ್ತನಿಗೆ ಆಘಾತ ತಂದಿದೆ ಅಂತಲೇ ಹೇಳಬಹುದು.

ವಾರ್ತಾ ಇಲಾಖೆಯ ಅಧಿಕಾರಿಯಾಗಿದ್ದರೂ ಕೆಲವೇ ಪತ್ರಕರ್ತರಿಗಷ್ಟೇ ವಾರ್ತಾ ಇಲಾಖೆ ಮೀಸಲು‌ ಎಂಬಂತೆ ವರ್ತಿಸುತ್ತಿದ್ದ. ಈತ ವಾರ್ತಾ ಇಲಾಖೆಯ ಶಿವಮೊಗ್ಗ ಕಚೇರಿಗೆ ಕಳೆದ 15 ವರ್ಷಗಳ ಹಿಂದೆ ವಾರ್ತಾ ಸಹಾಯಕನಾಗಿ ಬಂದಾಗಿನಿಂದಲೂ ಶಿವಮೊಗ್ಗದಲ್ಲಿ ಪತ್ರಕರ್ತರ ನಡುವೆ ಒಳಜಗಳ ತಂದಿಕ್ಕುವುದನ್ನೇ ಕಸುಬಾಗಿಸಿಕೊಂಡಿದ್ದ. ಆ ಮೂಲಕ ತನ್ನ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡಿದ್ದ.
ಈತನಿಗೆ ಹಲವಾರು ಬಾರಿ ವರ್ಗಾವಣೆಯಾದಾಗಲೂ ತನ್ನ ಪ್ರಭಾವ ಬಳಸಿಕೊಂಡು ಇದೇ ಜಾಗದಲ್ಲಿ ಮುಂದುವರೆದಿದ್ದಲ್ಲದೇ ಕಳೆದ ಎರಡು ವರ್ಷಗಳದ ಇಲ್ಲಿ ತೆರವಾಗಿದ್ದ ಹಿರಿಯ ಸಹಾಯಕರ ಹುದ್ದೆಗೆ ಯಾರೂ ಬರದಂತೆ ನೋಡಿಕೊಂಡಿದ್ದ. ಈತ ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರೂ ಈತನ ವರ್ಗಾವಣೆಗೆ ಕ್ರಮ ಕೈಗೊಂಡಿರಲಿಲ್ಲ.

ಇಂದು ಸರ್ಕಾರದ ಅಧೀನ ಕಾರ್ಯದರ್ಶಿಯವರು ಈತನನ್ನು ದಾವಣಗೆರೆಯ ವಾರ್ತಾ ಇಲಾಖೆಗೆ ವರ್ಗ ಮಾಡಿ ಆದೇಶಿಸಿದ್ದಾರೆ.
ಅಂತೂ ಇಂತೂ ಶಿವಮೊಗ್ಗದ ವಾರ್ತಾ ಇಲಾಖೆಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.