ಶಿವಮೊಗ್ಗದ ಹೆಡ್ ಪೋಸ್ಟ್ ಆಫೀಸ್ ನಲ್ಲಿ ಸ್ಪೀಡ್ ಪೋಸ್ಟ್ ಸ್ಥಗಿತ: ವಾರದಿಂದ ಗ್ರಾಹಕರ ಪರದಾಟ

ಶಿವಮೊಗ್ಗ: ಹೊಸ ಸಾಫ್ಟ್ ವೇರ್ ಮತ್ತು ಸರ್ವರ್ ತಾಂತ್ರಿಕ ಸಮಸ್ಯೆಯಿಂದಾಗಿ ಒಂದು ವಾರದಿಂದ ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ಇರುವ ಮುಖ್ಯ ಅಂಚೆ ಕಚೇರಿ ಯಲ್ಲಿ  ಸ್ಪೀಡ್ ಪೋಸ್ಟ್ ಸೇವೆ ಸ್ಥಗಿತಗೊಂಡಿದೆ.ಗ್ರಾಹಕರು ಬಂದು ಕಾದು ಸುಸ್ತಾಗಿ ವಾಪಸ್ಸು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಂಚೆ ಕಚೇರಿ ಯಲ್ಲಿ ತಾಂತ್ರಿಕ ತೊಂದರೆ ಎಂದು ಬೋರ್ಡ್ ಸಹ ಹಾಕಲಾಗಿದೆ.
 ಶಿವಮೊಗ್ಗದಲ್ಲಿ ಗೋಪಿ ಸರ್ಕಲ್ ಹತ್ತಿರ ಇರುವ ಹೆಡ್ ಪೋಸ್ಟ್ ಆಫೀಸ್ ಚಿತ್ರಣ

ಹೊಸ ಸಾಫ್ಟ್‌ರ್ ಅಳವಡಿಸಿದ ನಂತರ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಪೋಸ್ಟ್ ಆಫೀಸ್ ನವರು ಹೇಳುತ್ತಾರೆ.
ತುರ್ತು ಸ್ಪೀಡ್ ಪೋಸ್ಟ್ ಸೌಲಭ್ಯ ಸಿಗದೇ ಗ್ರಾಹಕರಿಗೆ
ತೊಂದರೆಯಾಗಿದೆ. ಕೂಡಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎನ್ನುವುದು ಗ್ರಾಹಕರ ಒತ್ತಾಸೆ ಆಗಿದೆ.

ಅಂಚೆ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಇನ್ಫೋಸಿಸ್ ಸಾಫ್ಟ್
ವೇರ್ ಬಳಕೆ ಮಾಡಲಾಗುತ್ತಿದ್ದು, ಇದೀಗ ಅಂಚೆ ಇಲಾಖೆ ಸ್ವತಃ
ತನ್ನದೇ 2.0 ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದು, ಜೂನ್ ಕೊನೆಯ
ವಾರದಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ ಪ್ರಾಯೋಗಿಕವಾಗಿ
ಜಾರಿಗೊಳಿಸಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ತಾಂತ್ರಿಕ
ಸಮಸ್ಯೆ ಉಂಟಾಗಿದೆ.

ಏಕಾಏಕಿ ಸಾಫ್ಟ್‌ರ್ ಕೈಕೊಟ್ಟಿದ್ದು, ತಾಂತ್ರಿಕ ತೊಂದರೆಯ ಕಾರಣ
ರಾಜ್ಯಾದ್ಯಂತ ಒಂದು ವಾರದಿಂದ ಸ್ಪೀಡ್ ಪೋಸ್ಟ್ ಸೇವೆ
ಸಾಧ್ಯವಾಗಿಲ್ಲ. ಇದರಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ. ಇನ್ನು
ಸಾಫ್ಟ್ ವೇರ್ ತಾಂತ್ರಿಕ ಸಮಸ್ಯೆಯ ಕಾರಣ ಅಂಚೆ ಇಲಾಖೆಯಲ್ಲಿ
ಅನೇಕ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಸಮಸ್ಯೆ ಬಗೆಹರಿಸಲು ಅಂಚೆ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಮುಂದೇನಾಗುವುದು ಕಾದು ನೋಡಬೇಕಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.