ಭದ್ರಾವತಿಯ ಅಂತರಗಂಗೆ ದೊಡ್ಡ ಚಾನಲ್ ಬಿದ್ದ ಕಾರು: ಅಪಾಯದಿಂದ ಪಾರಾದ ಡ್ರೈವರ್

ಭದ್ರಾವತಿ:ಅ-೨.ನಗರಕ್ಕೆ ಸಮೀಪದ ಅಂತರಗಂಗೆ ದೊಡ್ಡ ಚಾನಲ್ ಬಳಿ ಕಾರ್‌ವೊಂದು ಚಾನಲ್‌ಗೆ ಬಿದ್ದಿದ್ದು, ಅದೃಷವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಎರಡು ದಿನಗಳ ನಂತರ ಕಾರ್‌ನ್ನು ಮೇಲೆತ್ತಿದ ಘಟನೆ ನಡೆದಿದೆ.

 ಕಳೆದ ಮೂರು ದಿನಗಳ ಹಿಂದೆ ಇಲ್ಲಿಯ ಸಿದ್ದಾರೂಢ ನಗರದ ನಿವಾಸಿ ಶಶಾಂಕ್ ಜಾಧವ್ ಎಂಬುವವರು ಕಾರ್ ಚಾಲನೆ ಮಾಡುತ್ತಿದ್ದು ಅಂತರಗಂಗೆಯ ಸಂಭಂಧಿಗಳ ಮನೆಗೆ ಹೊಗಿ ರಾತ್ರಿ ವೇಳೆಯಲ್ಲಿ ಬರುವಾಗ ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಬಂದ ಪರಿಣಾಮ ಕಾರ್ ನಿಯಂತ್ರಣ ತಪ್ಪಿ ಚಾನಲ್‌ಗೆ ಬಿತ್ತು. ಆದರೆ ಆತ ಕಷ್ಟ ಪಟ್ಟು ಮೇಲೆ ಬಂದು ಅಪಾಯದಿಂದ ಪಾರಾದ.

 ನೀರಿನಲ್ಲಿ ಮುಳುಗಿದ ಕಾರ್‌ನ್ನು ಮೇಲೆತ್ತಲು ಮಲ್ಪೆಯಿಂದ ಮುಳುಗು ತಜ್ಞ ಮಲ್ಪೆ ಈಶ್ವರ್ ಮತ್ತು ತಂಡದವರು ಆಗಮಿಸಿ ಜೀವ ರಕ್ಷಕ ಸಾಧನೆಗಳೊಂದಿಗೆ ಕಾರ್ಯಾಚರಣೆ ನಡೆಸಿ ಕಾರ್‌ನ್ನು ಮೇಲೆತ್ತಿದ್ದರು. ಇದೇ ಸಮಯದಲ್ಲಿ ಉಕ್ಕುಂದ ರತ್ನಾಪುರ ಗ್ರಾಮದ ವರದೇಗೌಡ ಎಂಬುವವರು ಅವರ ಜೋತೆಗೆ ಯಾವುದೆ ಜೀವ ರಕ್ಷಕ ಸಾಧನ ಸಲಕರಣೆ ಇಲ್ಲದೆ ಅವರ ಸರಿ ಸಮನಾಗಿ ನೀರಿನಲ್ಲಿ ಮುಳಗಿ ಕಾರ್ ಮೇಲೆತ್ತಲು ಸಹಕಾರ ನೀಡುವ ಮೂಲಕ ಸುತ್ತಮುತ್ತಲಿನವರ ಪ್ರಶಂಶೆಗೆ ಪಾತ್ರರಾದರು.

 ಈಗ ಈ ಹಿಂದೆಯೂ ಸಹ ಹಲವಾರು ಭಾರಿ ನೀರಿನಲ್ಲಿ ಮುಳುಗಿದ್ದ ಶವಗಳನ್ನು , ವಾಹನಗಳನ್ನು ಹೋರ ತೆಗೆಯಲು ಸಹಕಾರ ನೀಡುತ್ತಿದ್ದಾರೆ ಎಂದು ಸ್ಥಳಿಯರು ತಿಳಿಸಿದರು. ಜಿಪಂ ಮಾಜಿ ಸದಸ್ಯ ಹಾಗು ಬಗರ್ ಹುಕುಂ ಸಮಿತಿ ಅಧ್ಯಕ್ಷ ಮಣಿ ಶೇಖರ್ ಗ್ರಾಮಾಂತರ ಠಾಣೆಯ ಜಗದೀಶ್ ಹಂಚಿನಾಳ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯಲ್ಲಿ ಪಾಲ್ಗೋಂಡಿದ್ದರು.

 ನೀರಿನಿಂದ ಕಾರ್ ಮೇಲೆತ್ತಲು ಗ್ರಾಮದ ಸ್ಥಳಿಯರು ಹಾಗು ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿದ್ದು ಪೈಪೋಟಿ ಮೆಲೆ ಸಹಾಯ ಮಾಡಿ ಮಾನವಿಯತೆ ಮೆರೆದರು. ಒಂದು ಹಂತದಲ್ಲಿ ಅವರ ಉತ್ಸಾಹ ಕ್ರೇನ್ ಸಹಾಯ ಇಲ್ಲದೆ ಹಾಗು ಹಗ್ಗದ ಸಹಾಯದಿಂದ ಕಾರ್ ಎಳೆಯಲು ಪ್ರಯತ್ನಿಸಿದರು. ಆದರೆ ಕಾರ್ ಹಾಳಾಗುತ್ತದೆ ಎಂದು ಕ್ರೇನ್ ಸಹಾಯದಿಂದ ನಿಧನವಾಗಿಮೇಲೆತ್ತಲಾಯಿತು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.