ನಿವೃತ್ತ ಪೊಲೀಸ್ ವರಿಷ್ಡಾಧಿಕಾರಿ ಎಂ.ಕೆ.ನಾಗರಾಜ್ ರವರ 75 ನೇ ಹುಟ್ಟು ಹಬ್ಬದ ಹೆಸರಿನಲ್ಲಿ ನಿವೃತ್ತ ಪೊಲೀಸರಿಂದ ಅನ್ನದಾಸೋಹ ಕಾರ್ಯಕ್ರಮ

ಶಿವಮೊಗ್ಗ:   ಶಿವಮೊಗ್ಗದಲ್ಲಿ ಜಿಲ್ಲಾರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ರಾಜ್ಯದ ಅತ್ಯುನ್ನತ ಹುದ್ದೆ ಪೋಲಿಸ್ ಮಹಾ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿ* ಪ್ರಸ್ತುತ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ *ಶ್ರೀ ಡಾ||ಎಂ.ಕೆ.ನಾಗರಾಜ್ ರವರ
ನೆನಪಿಗಾಗಿ 75ನೇ ಹುಟ್ಟು ಹಬ್ಬವನ್ನು ಇಂದು ಅನ್ನದಾಸೋಹ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು.
ಇಂದು ಮದ್ಯಾಹ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ  ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ನೇಮಕಾತಿಗೊಂಡ ಸಿಬ್ಬಂದಿಗಳು ತಮಗೆ ಸೇವೆಗೆ ಅವಕಾಶ ಮಾಡಿಕೊಟ್ಟ ನೆನಪಿಗಾಗಿ ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಎಂ.ಕೆ.ನಾಗರಾಜ್ ಅವರ 75ನೇ ಹುಟ್ಟು ಹಬ್ಬವನ್ನು ಇಂದು ಅನ್ನದಾನ ಕಾರ್ಯಕ್ರಮದ ಮೂಲಕ ಆಚರಿಸಿದ ಅಪರೂಪದ ವಿನೂತನ ಕಾರ್ಯಕ್ರಮ ಇದಾಗಿದೆ .
ಅಧಿಕಾರ ಮತ್ತು ಅವಕಾಶ_ಎರಡೂ ಇದ್ದಾಗ ಮಾಡಿದ ಉತ್ತಮ ಕೆಲಸಗಳು ಎಂದಿಗೂ ನೆನಪಿನಲ್ಲಿ ಉಳಿಯುತ್ತವೆ. ಈ ಮಾತಿಗೆ ಸಾಕ್ಷಿ ಆಗಸ್ಟ್ 05 ರ ಅನ್ನದಾನ ಕಾರ್ಯಕ್ರಮ.ಹೌದು 1993ರ ಸಮಯದಲ್ಲಿ ಶಿವಮೊಗ್ಗದ ನಿವೃತ್ತ ಪೊಲೀಸರು ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ  ಪೊಲೀಸ್ ಪೇದೆಯಾಗಿ ನೇಮಕಗೊಂಡಿದ್ದರು.
ಈ ಸತ್ಕಾರ್ಯಕ್ಕೆ ಕಾರಣರಾದ 1993ರ ಎಲ್ಲ ನೇಮಕಾತಿ ಸಿಬ್ಬಂದಿ, ಡಾ||ಎಂ.ಕೆ.ನಾಗರಾಜ್ ರವರು ಹಾಗೂ ಎಲ್ಲ ಕುಟುಂಬ ವರ್ಗದವರಿಗೆ ಆಯುರಾರೋಗ್ಯ  ನೀಡಲಿ ಎಂದು 1993ರ ಎಲ್ಲ ನೇಮಕಾತಿ ಸಿಬ್ಬಂದಿಗಳು ದೇವರಲ್ಲಿ ಪ್ರಾರ್ಥನೆ ಮಾಡಿದರು.

 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.