ಧರ್ಮಸ್ಥಳ ಪ್ರಕರಣ ತನಿಖೆ ಆರಂಭ:SIT ತನಿಖಾ ಅಧಿಕಾರಿಗಳೇ ಮೊದಲು ನೊಂದವರ ಹೆಲ್ಪ್ ಲೈನ್ ಮಾಡಿ..ನೊಂದವರು ಇದ್ದರೇ ದೂರು ನೀಡಲು ಹೇಳಿ
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುತ್ತಾ ಮುತ್ತಾ ಎಲ್ಲೆಂದರಲ್ಲಿ ಮೃತ ಶವ ಹೂತಿದ್ದ ಅಂತ್ಯಕ್ರಿಯೆ ಪ್ರಕರಣವನ್ನು SIT ಅಧಿಕಾರಿಗಳು ಚುರುಕು ಗೊಳಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಸೋಮವಾರ ಭಾರಿ ಭದ್ರತೆಯ ನಡುವೆ ಸಾಕ್ಷಿ-ದೂರುದಾರರ ಸಮ್ಮುಖದಲ್ಲಿ ಮೃತದೇಹಗಳನ್ನು ಹೂತಿದ್ದ ಸ್ಥಳವನ್ನು ಪರಿಶೀಲನೆ ನಡೆಸಿತು.
ಸೋಮವಾರ ಬಿಗಿ ಪೊಲೀಸ್ ಭದ್ರತೆಯ ನಡುವೆ ನೇತ್ರಾವತಿ ಸ್ನಾನಘಟ್ಟದ ಬಳಿಯ ಸಮಾಧಿ ಸ್ಥಳಕ್ಕೆ ಸಾಕ್ಷಿ-ದೂರುದಾರನನ್ನು ಕರೆದೊಯ್ಯಲಾಗಿದೆ.
ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ಮೃತ ಶವಗಳ ಹೂತಿದ್ದ ಪ್ರಕರಣ: SIT ತನಿಖಾ ಅಧಿಕಾರಿಗಳೇ ಮೊದಲು ನೊಂದವರ ಹೆಲ್ಪ್ ಲೈನ್ ಮಾಡಿ..ನೊಂದವರು ಇದ್ದರೇ ದೂರು ನೀಡಲು ಹೇಳಿ:
ಆದರೇ SIT ಅಧಿಕಾರಿಗಳು ಇದುವರೆಗೂ ನೊಂದವರು ದೂರು ನೀಡಲು ಹೆಲ್ಪ್ ಲೈನ್ ತೆರೆದಿಲ್ಲ. SIT ತನಿಖಾ ಅಧಿಕಾರಿಗಳೇ ಮೊದಲು ನೊಂದವರ ಹೆಲ್ಪ್ ಲೈನ್ ಮಾಡಿ ಪ್ರಕಟಣೆಯನ್ನು ಮಾಧ್ಯಮದ ಮೂಲಕ ನೀಡಿ,ಮೃತ ದೇಹದ ಕಡೆಯವರು, ನೊಂದವರು ಯಾರಾದರೂ ಇದ್ದರೇ ದೂರು ನೀಡಲು ಹೇಳಿ.ನಿಮ್ಮ ಪಾಡಿಗೆ ಒಬ್ಬ ದೂರು ವ್ಯಕ್ತಿಯ ಹೇಳಿಕೆಯನ್ನು ಪಡೆದು ಅದನ್ನು ಮಾತ್ರ ನಾವು ತನಿಖೆಗೆ ಒಳಪಡಿಸುತ್ತೆವೆ ಎನ್ನುವುದು ಅನುಮಾನಕ್ಕೆ ಕಾರಣವಾಗುತ್ತದೆ. ಮತ್ತೆ ಶವ ಹೂತಿದ್ದ ಸ್ಥಳ ಪರಿಶೀಲನೆ ಮಾಡಿದ ಜಾಗವನ್ನು ಸುರಕ್ಷಿತವಾಗಿ ಇಡುವುದು ಸಹ ಮುಖ್ಯವಾಗಿದೆ.. ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆಯುವ ಮೊದಲು ಸಾಕ್ಷ್ಯಗಳನ್ನು ಹಾಳು ಮಾಡುವುದನ್ನು ತಪ್ಪಿಸಲು ಅಲ್ಲಿಗೆ ಪ್ರವೇಶವನ್ನು ನಿಷೇಧಿಸಬೇಕು. ಶವ ಹೂತಿದ್ದ ಜಾಗದ ಸುತ್ತ ತಂತಿ ಕಂಬ ಬೇಲಿ ಹಾಕಿ ಗುರುತು ಹಾಕುವುದು ಕೂಡ ಪ್ರಮುಖವಾಗಿದೆ.ಇತ್ತ ಕಡೆ SIT ಅಧಿಕಾರಿಗಳು ಗಮನಹರಿಸಬೇಕು ಎನ್ನುವುದು ಸಾರ್ವಜನಿಕರಲ ಒತ್ತಾಸೆಯಾಗಿದೆ.
ಪ್ರಕರಣದ ಸಾಕ್ಷಿ ಮತ್ತು ದೂರುದಾರರೂ ಆಗಿರುವ ವ್ಯಕ್ತಿಯು ಮುಖಕ್ಕೆ ಮುಸುಕು ಹಾಕಿಕೊಂಡು ತಮ್ಮ ಕಾನೂನು ಸಲಹೆಗಾರರೊಂದಿಗೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಆಗಮಿಸಿದರು. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಒಂದು ಗಂಟೆ ವಿಚಾರಣೆ ನಡೆಸಿದ ನಂತರ, ಅವರನ್ನು ನೇತ್ರಾವತಿ ಸ್ನಾನಗೃಹದ ಬಳಿ ಕರೆದೊಯ್ಯಲಾಯಿತು. ಅಲ್ಲಿ ಅವರು ಎಫ್‌ಎಸ್‌ಎಲ್ ತಂಡ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು ಮತ್ತು ಭೂ ದಾಖಲೆ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸ್ಥಳಗಳನ್ನು ಪರಿಶೀಲನೆಗಾಗಿ ತೋರಿಸಿದರು.
ಎಸ್‌ಐಟಿ ತಂಡದ ಅಧಿಕಾರಿಗಳಾದ ಡಿಐಜಿ ಎಂಎನ್ ಅನುಚೇತ್ ಮತ್ತು ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಮುಂದೆ ದೂರುದಾರರು ಶನಿವಾರ ಮತ್ತು ಭಾನುವಾರ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಕೂಡ ಭಾನುವಾರ ವಿಚಾರಣೆಯಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ವ್ಯಕ್ತಿಗಳ ಶವಗಳನ್ನು ಹೂಳಲು ಒತ್ತಾಯಿಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಮಾಜಿ ಪೌರ ಕಾರ್ಮಿಕ ಎಂದು ಹೇಳಲಾದ ದೂರುದಾರರು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರುದಾರರು ಅದಾದ ಒಂದು ವಾರದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ತಾವೇ ಹೊರತೆಗೆದಿದ್ದು ಎಂದು ಹೇಳಿಕೊಂಡ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದಾರೆ. ವಕೀಲರು ಮತ್ತು ಪಂಚ ಸಾಕ್ಷಿಗಳ ಮುಂದೆ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು. ಜುಲೈ 19 ರಂದು ಎಸ್‌ಐಟಿ ರಚನೆಯಾಯಿತು ಮತ್ತು ಜುಲೈ 25 ರಂದು ಸ್ಥಳೀಯ ಪೊಲೀಸರಿಂದ ಪ್ರಕರಣದ ದಾಖಲೆಗಳನ್ನು ಅಧಿಕೃತವಾಗಿ ಪಡೆದಿದ್ದಾರೆ.
ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರೆಯಿತು.. ಮುಂದೇನಾಗುವುದು ಕಾದು ನೋಡುವ...

Leave a Comment