"ಶಿವಮೊಗ್ಗದ. ಬಿಜೆಪಿಯ ಪ್ರಮುಖರಿಂದ ತುಂಗಾ ನದಿಗೆ ಬಾಗಿನ ಅರ್ಪಣೆ

 ಶಿವಮೊಗ್ಗ:  ಶಿವಮೊಗ್ಗದ ಜೀವನಾಡಿಯಾದ ತಾಯಿ ತುಂಗಾ ಮಾತೆಯು ಮೈದುಂಬಿ ಹರಿಯುತ್ತಿರುವ ಈ ಪವಿತ್ರ ಸಂದರ್ಭದಲ್ಲಿ, ನದಿಯ ಪರಿಪೂರ್ಣತೆಯ ಗೌರವಾರ್ಥವಾಗಿ ಹಾಗೂ ಪ್ರಕೃತಿ ಪ್ರತಿಯೊಂದು ಕಣಕ್ಕೂ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ, ಬಿಜೆಪಿ ಶಿವಮೊಗ್ಗ ನಗರ ಸಮಿತಿಯಿಂದ ಕೋರ್ಪಲಯ್ಯ ಛತ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ತುಂಗಾ ನದಿಗೆ ಬಾಗಿನ ಅರ್ಪಣೆ’ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿ, ಬಾಗಿನ ಅರ್ಪಣೆ ಮಾಡಿದರು. 

ತುಂಗಾ ನದಿ ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಪ್ರಮುಖ ಮೂಲವಾಗಿದ್ದು, ತುಂಗೆಗೆ ಬಾಗಿನ ಅರ್ಪಿಸುವ ಸಂಸ್ಕೃತಿ ನಮ್ಮ ನಾಡಿನ ನದೀಪೂಜಾ ಪರಂಪರೆಯ ಪ್ರತಿಬಿಂಬವಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಹಾಗೂ ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಜಿಲ್ಲೆ ಹಾಗೂ ನಗರದ ಸಮಿತಿಯ ಪ್ರಮುಖರು, ವಿವಿಧ ಮೋರ್ಚಾಗಳ ಸದಸ್ಯರು, ಧಾರ್ಮಿಕ ಮುಖಂಡರು, ನಮ್ಮ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.