ಆಧುನಿಕ ತಂತ್ರಜ್ಞಾನದ ದುರ್ಬಳಕೆ ಸರಿಯಲ್ಲ-ಡಿ.ಎಚ್.ಓ

ಶಿವಮೊಗ್ಗ: ಐ.ಅರ್.ಐ.ಎ (IRIA) ರಾಷ್ಟ್ರಮಟ್ಟದ "ಶಕ್ತಿ" ಯೋಜನೆಅಡಿಯಲ್ಲಿ ಭಾರತಿಯ ರೇಡಿಯೊಲಾಜಿಕಲ್ ಮತ್ತು ಇಮೆಜಿಂಗ್ ಅಸೋಸಿಯೇಷನ್ ಶಿವಮೊಗ್ಗ ಉಪಾವಿಭಾಗವು ಶಿವಮೊಗ್ಗದಲ್ಲಿ ಇತ್ತಿಚೆಗೆ ನಿರಂತರ ವೈದ್ಯಕೀಯಾ ಶಿಕ್ಷಣ ಕಾರ್ಯಕ್ರಮವನ್ನು (CME) ಆಯೋಜಿಸಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮತಾನಾಡಿದ ನಮ್ಮ ಶಿವಮೊಗ್ಗ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಿ.ಎಚ್.ಓ ಡಾ. ನಟರಾಜ್ರವರು ಶಿವಮೊಗ್ಗದ ರೇಡಿಯೊಲಾಜಿಸ್ಟ್-ಸ್ಕಾನಿಂಗ್ ತಜ್ಞರ ಹಾಗೂ ಅವರ ಕಾರ್ಯ ಕ್ಷಮತೆಗಳ ಬಗ್ಗೆ ಮೆಚ್ಚುಗೆಯಾ ಮಾತುಗಳನ್ನಾಡಿದರು. 

 ಪಿ.ಸಿ.ಪಿ.ಎನ್.ಡಿ.ಟಿ ACT ಗರ್ಭದಾರಣೆ ಪೂರ್ವ ಮತ್ತು ಪ್ರಸವ ಪೂರ್ವ ವಗರ್ಿಕರಣ, ಹೆಣ್ಣು ಭ್ರೂಣ ಪತ್ತೆ ಮತ್ತು ಪ್ರಸವ ಪೂರ್ಣ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಮಾತನಾಡುತ್ತ ಒಂದು ಸ್ವಸ್ತ ಸಮಾಜವು ಯಾವುದೇ ರಾಷ್ಟ್ರ, ರಾಜ್ಯ ಮಟ್ಟದಲ್ಲಿ  ಆರೋಗ್ಯವಾಗಿರಲು ಕಾರಣ ಜನಸಂಖ್ಯೆಯಾ ಸಮಾನಾದ ಲಿಂಗಾನುಪಾತ. ಹೆಣ್ಣು ಮತ್ತು ಗಂಡು ಸಮಾನ ಸ್ಥಾನ-ಮಾನವನ್ನು ಅನುಭವಿಸುವ ಅಭಿವೃದ್ಧಿಹೊಂದಿದ ಸಮಾಜಗಳಲ್ಲಿ ಸಮನ್ಯವಾಗಿ ಪುರುಷರಿಗಿಂತ ಹೆಚ್ಚು ಹೆಣ್ಣು ಮಕ್ಕಳಸಂಖ್ಯೆಯು ಇರುತ್ತದೆ. ಪ್ರತಿಕೂಲ ಲಿಂಗನುಪಾತವು ಕ್ಷೀಣವಾದ ಸಾಮಜಿಕಾ ಆರೋಗ್ಯವನ್ನು ಬಿಂಬಿಸುವುದಷ್ಟೆ ಅಲ್ಲದೆ ಸ್ವಸ್ತ ಸಮಾಜವನ್ನು ಅಭಿವೃದ್ಧಿಹೊಂದುವಲ್ಲಿ ಅನುಚಿತವಾಗಿರುತ್ತದೆ. ತಂತ್ರಜ್ಞಾನಗಳ ದುರ್ಬಳಕೆಯಿಂದ ಹುಟ್ಟುವ ಮಗುವಿನ ಲಿಂಗ ಪತ್ತೆ ಮಾಡುವುದು ಮತ್ತು ಹಾಗು ಭ್ರೂಣ ಹತ್ಯೆಗೆ ಪ್ರಚೋದಿಸುವುದು ಶಿಕ್ಷಾರ್ಹ ಅಪರಾಧ. ಇದನ್ನು ವಿರೋಧಿಸಿ ತಡೆಯುವ ನಿಟ್ಟಿನಲ್ಲಿ ಎಲ್ಲರು ಕೈ ಜೋಡಿಸಬೇಕು ಎಂದು ಕರೆ ನೀಡಿದರು ಹಾಗೂ ಶಿವಮೊಗ್ಗದಲ್ಲಿ ಈ ನಿಟ್ಟಿನಲ್ಲಿ ಎಲ್ಲರು ಹೆಚ್ಚು ಜಾಗುರುಕಾರಗಿ ಕೆಲಸ ಮಾಡುತ್ತಿದ್ದರೆಂದು ಶ್ಲಾಘಿಸಿದರು.

ಇದೆ ಸಮಯದಲ್ಲಿ ಡಿ.ಎಚ್.ಓ ಡಾ.ನಟರಾಜ್ರವರನ್ನು ಬಹಳ ಅತ್ಮಿಯಾವಾಗಿ ಅಭಿನಂದಿಸಲಾಯಿತು. ಐ.ಅರ್.ಐ.ಎ ರಾಜ್ಯದ ಮಟ್ಟದ ಅಧ್ಯಕ್ಷರಾದ ಡಾ.ಪ್ರವಿಣ್ರವರು ಮತ್ತು ಶಿವಮೊಗ್ಗ ಐ.ಅರ್.ಐ.ಎ ಉಪಾವಿಭಾದ ಅಧ್ಯಕ್ಷರಾದ ಡಾ. ಉಮಾ ಪಾಂಡುರಂಗಿ, ಉಪಾಧ್ಯಕ್ಷರಾದ ಡಾ.ಅರುಣ್ ಎಂ.ಎಸ್, ಹಾಗೂ ಕಾರ್ಯಕಾರಿಣಿ ಸಮಿತಿಯ ಡಾ.ಪರಮೆಶ್ವರ್ ಶಿಗ್ಗವ್, ಡಾ.ಅಖಿಲಾ ಹಾಗೂ ಡಾ.ಶ್ರೀಕಾಂತ್ ಮತ್ತಿತ್ತರರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.