ಶಿವಮೊಗ್ಗ ನಗರದಲ್ಲಿ ಸಂಸ್ಕೃತ ಸಂಶೋಧನಾ ಕೇಂದ್ರ ಆರಂಭವಾಗಬೇಕು:ವಾಸುದೇವನ್
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಆಶ್ರಯದಲ್ಲಿ ಸಂಸ್ಕೃತ ಸಂಶೋಧನಾ ಕೇಂದ್ರ ಆರಂಭವಾಗಬೇಕು ಎಂದು ಚೆನೈ ನಗರದ ಹಿರಿಯ ನ್ಯಾಯವಾದಿ, ಲೆಖ್ಖ ಪರಿಶೋದಕ, ಸಂಸ್ಕೃತ ವಿದ್ವಾಂಸರು, ಲೇಖಕರು ಆದ ವಾಸುದೇವನ್ ರವರು ಆಶಯ ವ್ಯಕ್ತ ಪಡಿಸಿದರು.
ಅವರುಇಂದು ಸಂಸ್ಕೃತ ಭವನದಲ್ಲಿ ಆಯೋಜಿಸಿದ್ದ ಸಂಸ್ಕೃತ ಸಂಶೋದನೆಯ ಪ್ರಯೋಜನದ ಬಗ್ಗೆ ಮಾತನಾಡುತ್ತ, ಹಲವಾರು ಸಂಶೋದಕರು ಸಂಸ್ಕೃತದ ಬಗ್ಗೆ ಮಾಡಿದ ಸಾಧನೆ, ಸಂಶೋದಿಸಿದ ವಿಷಯಗಳ ಬಗ್ಗೆ ವ್ಯಾಪಕವಾಗಿ ಪುಸ್ತಕ ರೂಪದಲ್ಲಿ ಹೊರ ತರಬೇಕಾಗಿದೆ, ಈ ನಿಟ್ಟಿನಲ್ಲಿ ಶಿವಮೊಗ್ಗ ನಗರದಲ್ಲಿರುವ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಕಾರ್ಯೋನ್ಮುಖವಾಗಬೇಕೆಂದು ಸಲಹೆ ನೀಡಿದರು.
ವೇದ ಉಪನಿಷತ್ ಗಳಲ್ಲಿರುವ ಸಾರವನ್ನು ಜಗತ್ತಿಗೆ ಪರಿಚಯಿಸುವ, ಯುವ ಬರಹಗಾರರಿಗೆ ಈ ಸಂಸ್ಥೆ ವೇದಿಕೆಯಾಗಲಿ, ಎಷ್ಟೋ ತಾಡಪತ್ರಗಳು ಇನ್ನೂ ಸಂಶೋಧನೆಯಾಗಬೇಕಾಗಿದೆ, ಈ ನಿಟ್ಟಿನಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ಸಂಸ್ಕೃತ ಭಾಷೆಯು ವೈಜ್ಞಾನಿಕವಾಗಿದ್ದು ಅದರ ಮಹತ್ವವನ್ನು ಇಂದು ನಾವು ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಸಂಸ್ಕೃತ ಶೋಧ ಪ್ರಬಂಧದ ಪ್ರಯೋಜನಗಳ ಬಗ್ಗೆ ಮಾತನಾಡುತ್ತ, ಸಂಸ್ಕೃತ ಶೋಧ ಪ್ರಬಂಧದ ಮೂಲಕ ಶಾಸ್ತ್ರೀಯ ಭಾಷೆಯ ಘನತೆ, ವ್ಯಾಕರಣ ಶುದ್ಧತೆ ಮತ್ತು ಶೈಲಿಯ ವೈಶಿಷ್ಟ್ಯತೆಗಳನ್ನು ಅಧ್ಯಯನ ಮಾಡಬಹುದು.
ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಹಾಗೂ ಭಾರತೀಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ತಾತ್ವಿಕ ಪರಂಪರೆಯ ಅನನ್ಯತೆಯನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಇದು ಪಾಠವಾಗುತ್ತದೆ ಎಂದರು.
ವಿಶೇಷವಾಗಿ ವೈದಿಕ, ದಾರ್ಶನಿಕ, ಆಧ್ಯಾತ್ಮಿಕ, ಕಾವ್ಯಾತ್ಮಕ ಅಥವಾ ನಾಟಕಾತ್ಮಕ ಸಾಹಿತ್ಯದ ಆಳವಾದ ವಿಶ್ಲೇಷಣೆಯು ಸಾಧ್ಯವಾಗುತ್ತದೆ. ಪುರಾತನ ಜ್ಞಾನ ವ್ಯವಸ್ಥೆಯಾದ ಆಯುರ್ವೇದ, ಜ್ಯೋತಿಷ, ಶಾಸ್ತ್ರಗಳು, ಧರ್ಮಶಾಸ್ತ್ರ, ಮತ್ತು ನ್ಯಾಯ ಶಾಸ್ತ್ರಗಳ ಹಳೆಯ ತತ್ವಗಳನ್ನು ಹೊಸ ಪ್ರಪಂಚಕ್ಕೆ ಪರಿಚಯಿಸುವ ಸಾಧ್ಯತೆ ಉಂಟಾಗುತ್ತದೆ ಎಂದು ತಿಳಿಸಿದರು.
ವಿಷಯವಸ್ತುವಿನ ಆಳವಾದ ಅಧ್ಯಯನ, ಉಲ್ಲೇಖ ಸಂಗ್ರಹ, ವಿಮರ್ಶಾತ್ಮಕ ಚಿಂತನ ಮತ್ತು ಸಮಾಲೋಚನೆಗಳ ಮೂಲಕ ಶೋಧನಾಭ್ಯಾಸ ಬಲವಾಗುತ್ತದೆ. ಇದು ಅಧ್ಯಾಪನ ಹಾಗೂ ಅಧ್ಯಯನ ಕ್ಷೇತ್ರದಲ್ಲಿ ಅವಕಾಶ ಹೆಚ್ಚಿಸುತ್ತದೆ ಎಂದರು.
ಶೋಧ ಪ್ರಬಂಧ ಪೂರೈಸಿದವರು ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ, ಸಂಶೋಧಕರಾಗಿ ಅಥವಾ ಶೋಧ ಮಾರ್ಗದರ್ಶಕರಾಗಿ ಕೆಲಸ ಮಾಡಲು ಅರ್ಹರಾಗುತ್ತಾರೆ. ಮುಂದೆ ಇವರಿಂದ ಸಂಸ್ಕೃತವನ್ನು ನವೀನ ತಂತ್ರಜ್ಞಾನ, ಸಾಹಿತ್ಯ ರೂಪಗಳು, ಅನುವಾದ ಮತ್ತು ಪಠ್ಯಪುಸ್ತಕಗಳ ಮೂಲಕ ಜನಸಾಮಾನ್ಯರ ಬಳಿಗೆ ತಲುಪಿಸಲು ಸಾಧ್ಯವಾಗುತ್ತದೆ ಜೊತೆಗೆ ಇತರ ವಿಜ್ಞಾನ ಶಾಖೆಗಳೊಂದಿಗೆ ಸಂಸ್ಕೃತದ ಮಿಲನದ ಮೂಲಕ ಅಂತರ ರಾಷ್ತ್ರೀಯ ಸಂವಾದಕ್ಕೆ ಅವಕಾಶ ದೊರೆಯುತ್ತದೆ.
ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ ವಾಸುದೇವನ್ ರವರಿಗೆ ಸಂಸ್ಥೆಯ ಪರವಾಗಿ ಗೌರವ ಸಮರ್ಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ನಿರ್ದೇಶಕರಾದ ಎಸ್.ಎಸ್.ವಾಗೀಶ್, ವಿಶೇಷ ಅಹ್ವಾನಿತ ನಿರ್ದೇಶಕರಾದ ಎನ್. ಗೋಪಿನಾಥ್, ಹೆಚ್.ಎಸ್. ನಾಗರಾಜ, ದಿಲೀಪ್ ನಾಡಿಗ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment