ಶಿವಮೊಗ್ಗ ಜಿಲ್ಲೆಗೆ ಆಡಳಿತಾತ್ಮಕ ಅನುಮೋದನೆಗೊಂಡ ಕಾಮಗಾರಿಗಳು:ಉಸ್ತುವಾರಿ ಸಚಿವ ಮಧುಬಂಗಾರಪ್ಪ ಪ್ರೆಸ್ ಮೀಟ್ ನಲ್ಲಿ ಏನಂದ್ರು....ನೋಡಿ...

ಮಧುಬಂಗಾರಪ್ಪ ಶಿವಮೊಗ್ಗ ಉಸ್ತುವಾರಿ ಸಚಿವರ ಪ್ರೆಸ್ ಮೀಟ್ ನಲ್ಲಿ ಏನಂದ್ರು....ನೋಡಿ...
ಶಿವಮೊಗ್ಗ ಜಿಲ್ಲೆಗೆ 02-07-2025ರ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆಗೊಂಡ ಕಾಮಗಾರಿಗಳ ವಿವರವನ್ನು ಮಾಧ್ಯಮಗಳಿಗೆ ಮಾಹಿತಿಯನ್ನು  ಶಿವಮೊಗ್ಗ ಉಸ್ತುವಾರಿ ಸಚಿವ ಮಧುಬಂಗಾರಪ್ಪ  ನೀಡಿದರು.

ಇಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.

ಸೊರಬ ತಾಲ್ಲೂಕು: ಒಟ್ಟು ಮೊತ್ತ:168.80ಕೋಟಿಗಳು
ಈ ಕೆಳಕಂಡ ಯೋಜನೆಗಳು ದಂಡಾವತಿ ಡ್ಯಾಂ ನ ಮಾರ್ಪಡಿತ ಯೋಜನೆ ಕಾಮಗಾರಿಗಳಾಗಿದ್ದು, ಯಾವುದೇ ರೈತರ ಜಮೀನು ಹಾಗೂ ಮನೆಗಳನ್ನು ಮುಳುಗಡೆಗೊಳಿಸದೆ ವಿನ್ಯಾಸಗೊಳಿಸಲಾಗಿದ್ದು, ಈಗ ಅನುಮೊದನೆಗೊಂಡಿರುತ್ತದೆ ಎಂದರು.

1) ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಯಡಗೊಪ್ಪ ಗ್ರಾಮದ ಹತ್ತಿರ ದಂಡಾವತಿ ನದಿಗೆ ಬ್ಯಾರೇಜ್ ನಿರ್ಮಿಸಿ, 15 ಕೆರೆಗಳನ್ನು ತುಂಬಿಸುವ ಯೋಜನೆ-ರೂ.38.50 ಕೋಟಿಗಳ ಅಂದಾಜು ಮೊತ್ತ.

2) ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ ಬ್ಯಾರೇಜ್/ಬ್ರೀಡ್ಜ್ ಕಂ ಬ್ಯಾರೇಜ್ಗಳನ್ನು ನಿರ್ಮಿಸುವ ಯೋಜನೆ-ರೂ.54.70 ಕೋಟಿಗಳ ಅಂದಾಜು ಮೊತ್ತ.

3) ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಗುಡವಿ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ 0.1017 ಟಿ.ಎಂ.ಸಿ ನೀರನ್ನೇತ್ತಿ 32 ಕೆರೆಗಳನ್ನು ತುಂಬಿಸುವ ಯೋಜನೆ-ರೂ.75.60ಕೋಟಿಗಳ ಅಂದಾಜು ಮೊತ್ತ.

ಭದ್ರಾವತಿ ತಾಲ್ಲೂಕು: ಒಟ್ಟು ಮೊತ್ತ:139.00 ಕೋಟಿ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಗ್ರಾಮದ ಹತ್ತಿರ ಭದ್ರಾನದಿಯಿಂದ 0.19 ಟಿ.ಎಂ.ಸಿ ನೀರನ್ನು ಕಂಬದಾಳ್ ಹೊಸೂರು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಂಕರಘಟ್ಟ, ಹುಣಸೆಕಟ್ಟೆ, ಗೋಣಿಬೀಡು, ತಮ್ಮಡಿಹಳ್ಳಿ, ರಾಮಿನಕೊಪ್ಪ, ಮತ್ತು ಸುತ್ತಮುತ್ತಲಿನ ಗ್ರಾಮಗಳ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ-ರೂ.54.00 ಕೋಟಿ ಅಂದಾಜು ಮೊತ್ತ. 

o ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಭದ್ರಾನದಿಯ ಎಡ ಮತ್ತು ಬಲದಂಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ರಕ್ಷಿಸಲು ತಡೆಗೋಡೆ ನಿರ್ಮಾಣ ಕಾಮಗಾರಿ-ರೂ.50.00 ಕೋಟಿಗಳ ಅಂದಾಜು ಮೊತ್ತ.

o ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಭದ್ರಾ ನದಿಗೆ ಅಡ್ಡಲಾಗಿ ರಸ್ತೆ ಸೇತುವೆ ನಿರ್ಮಾಣ ಮತ್ತು ಡೊಣಬಘಟ್ಟ, ಕಾಗೆಕೊಡುಮಗ್ಗೆ, ಹೊಳೆಹೊನ್ನೂರು ಗ್ರಾಮದ ಭದ್ರಾವತಿ ಮುಖ್ಯ ರಸ್ತೆ ನಡುವೆ ಸಂಪರ್ಕ ರಸ್ತೆ ಸುಧಾರಣೆ ಕಾಮಗಾರಿ-ರೂ.35.00 ಕೋಟಿಗಳ ಅಂದಾಜು ಮೊತ್ತ.

ಈ ಕೆಳಕಂಡ ಕಾಮಗಾರಿಗಳ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಯೋಜನೆಯನ್ನು ಅನುಮೋದನೆ ಪಡೆದುಕೊಳ್ಳಲಾಗುವುದು ಎಂದರು:

4) ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ದಂಡಾವತಿ ನದಿಗೆ ಅಡ್ಡಲಾಗಿ ಆಯ್ದ ಸ್ಥಳಗಳಲ್ಲಿ ಬ್ರೀಡ್ಜ್ ಕಂ ಬ್ಯಾರೇಜ್ಗಳನ್ನು ನಿರ್ಮಿಸಿ 34ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಯೋಜನೆಯನ್ನು ಅನುಮೋದನೆ ಪಡೆದುಕೊಳ್ಳಲಾಗುವುದು-ರೂ.165.20 ಕೋಟಿಗಳ ಅಂದಾಜು ಮೊತ್ತ.

5) ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕೆರೆಹಳ್ಳಿ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ಬ್ರೀಡ್ಜ್ ಕಂ ಬ್ಯಾರೇಜ್ಗಳನ್ನು ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಯೋಜನೆಯನ್ನು ಅನುಮೋದನೆ ಪಡೆದುಕೊಳ್ಳಲಾಗುವುದು-ರೂ.208.70 ಕೋಟಿಗಳ ಅಂದಾಜು ಮೊತ್ತ.

6) ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮಾವಿನಹೊಳೆ ಮತ್ತು ದಂಡಾವತಿ ನದಿಗೆ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ಬ್ರೀಡ್ಜ್ ಕಂ ಬ್ಯಾರೇಜ್ಗಳನ್ನು ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಪ್ರವಾಹ ನಿಯಂತ್ರಣ ಕಾಮಗಾರಿ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಯೋಜನೆಯನ್ನು ಅನುಮೋದನೆ ಪಡೆದುಕೊಳ್ಳಲಾಗುವುದು-ರೂ.187.30 ಕೋಟಿಗಳ ಅಂದಾಜು ಮೊತ್ತ.

ಚಂದ್ರಗುತ್ತಿ ಪ್ರಾಧಿಕಾರ:
1. ಸೊರಬ ತಾಲ್ಲುಕು ಚಂದ್ರಗುತ್ತಿ ದೇವಸ್ತಾನ ಅಭಿವೃದ್ದಿಗಾಗಿ 10ಎಕರೆ ಜಮೀನಿಗೆ ಪರಿಹಾರಾರ್ಥವಾಗಿ ಹೊಳೆಮರೂರು ಗ್ರಾಮದ ಸ.ನಂ:187ರಲ್ಲಿ 20ಎಕರೆ  ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸರ್ಕಾರದಿಂದ ಅನುಮೋದಿಸಲಾಗಿದೆ ಹಾಗೂ ಜಮೀನು ಹಸ್ತಾಂತರಗೊಂಡಿರುತ್ತದೆ.
2. ಚಂದ್ರಗುತ್ತಿ ಪ್ರಾಧಿಕಾರದ ರಚನೆಗೆ ಸಂಬಂದಿಸಿದ ಕಡತ ಕಾನೂನು ಅಭಿಪ್ರಾಯ ಪಡೆಯಲು ಸಲ್ಲಿಸಲಾಗಿದೆ.
3. ಚಂದ್ರಗುತ್ತಿ ಪಾಧಿಕಾರದಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಭಾರತೀಯ ಸರ್ವೇ ಆಪ್ ಇಂಡಿಯಾಗೆ ನೀಡುವ 284ಲಕ್ಷಗಳನ್ನು ಪಾವತಿಸಲು ಅನುಮೋದನೆ ಹಂತದಲ್ಲಿದೆ.

ಪ್ರವಾಸೋಧ್ಯಮ:
1. ಜಿಲ್ಲಾಧಿಕಾರಿಗಳು ಶಿವಮೊಗ್ಗರವರೊಂದಿಗೆ ವಿವಿಧ ಪ್ರತಿನಿಧಿಗಳೊಂದಿಗೆ  ದಿನಾಂಕ:27.06.2025ರಂದು ಸಭೆ ನಡೆಸಲಾಯಿತು.
2. ಶಿವಮೊಗ್ಗ ಜಿಲ್ಲೆಯಾದ್ಯಂತ ಇರುವ ವಿವಿಧ ಪ್ರವಾಸಿ ತಾಣಗಳ ಅಭಿವೃದ್ದಿಗೆ ಹಾಗೂ ಪ್ರಚಾರ ನೀಡುವ ಸಂಬಂಧ ಸಲಹೆಗಳನ್ನು ಪಡೆಯಲಾಯಿತು.
3. ವಿವಿಧ ಪ್ರವಾಸಿ ತಾಣಗಳಿಗೆ ಚಾರಣ (ಟ್ರೆಕ್ಕಿಂಗ್) ಕೈಗೊಳ್ಳಲು ಉತ್ತೇಜನ ನೀಡಲು ಚರ್ಚಿಸಲಾಯಿತು.
4. ಶಿವಮೊಗ್ಗ ಜಿಲ್ಲೆಯಾದ್ಯಂತ ಎಲೆಕ್ಟ್ರಿಕ್ ವೆಹಿಕಲ್ಗಳಿಗೆ ಅಗತ್ಯಕ್ಕನುಗುಣವಾಗಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಚರ್ಚಿಸಲಾಯಿತು.
5. ಪ್ರವಾಸೋದ್ಯಮ ಅಭಿವೃದ್ದಿಗೆ ಡಿಜಿಟಲ್ ಮಾರ್ಕೇಟಿಂಗ್ ಮತ್ತು ವೆಬ್ ಸೈಟ್ ಅಭಿವೃದ್ದಿ ಪಡಿಸುವುದು
6. ಪ್ರವಾಸಿಗರಿಗೆ ತಂಗಲು ಕಡಿಮೆ ವೆಚ್ಚದಲ್ಲಿ ಲಾಡ್ಜಿಂಗ್ ವ್ಯವಸ್ಥೆ ದೊರೆಯುವಂತೆ ಮಾಡುವುದು
7. ಶಿವಮೊಗ್ಗ ಜಿಲ್ಲಾ ಮಲೆನಾಡು ಹಬ್ಬ ಆಚರಿಸಲು ಸಲಹೆ ಪಡೆಯಲಾಯಿತು.

ಕ್ರೀಡಾ ಇಲಾಖೆ:
1. ಶಿವಮೊಗ್ಗ ಜಿಲ್ಲೆಯ ಕ್ರೀಡಾ ಅಭಿವೃದ್ದಿಗೆ ವಿವಿಧ ಕಾಮಗಾರಿಗಳಾದ 
ನೆಹರು ಕ್ರೀಡಾಂಗಣ ಅಥ್ಲೇಟಿಕ್ ಟ್ರಾಕ್ ನವೀಕರಣ,
ಪುಟ್ಬಾಲ್ ಅಂಕಣಕ್ಕೆ ಹಸಿರು ಹುಲ್ಲಿನ ಹಾಸು, ಪೆನ್ಸಿಂಗ್, ನೀರಿನ ವ್ಯವಸ್ಥೆ, 
ಪುಟ್ಬಾಲ್ ಅಬ್ಯಾಸಕ್ಕಾಗಿ ಟರ್ಫ ಅಂಕಣ, 
ವಾಲಿಬಾಲ್ ಅಂಕಣಕ್ಕೆ ಮೇಲ್ಚಾವಣಿ
ಬ್ಯಾಸ್ಕೆಟ್ ಬಾಲ್ ಅಂಕಣಗಳ ಮರುವಿನ್ಯಾಸ ಮತ್ತು ರೂಫಿಂಗ್
ನೆಹರು ಕ್ರೀಡಾಂಗಣದಲ್ಲಿ ಖೋ-ಖೋ, ಕಬ್ಬಡಿ ಅಂಕಣ ಅಭಿವೃದ್ದಿ
ಕ್ರೀಡಾಂಗಣಕ್ಕೆ ಪ್ಲಡ್ ಲೈಟ್  ಅಳವಡಿಸುವುದು
ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ಜಿಮ್ ನಿರ್ಮಾಣ
ವಾಕಿಂಗ್ ಪಾಥ್ ನಿರ್ಮಾಣ 
ಬಾಕ್ಸಿಂಗ್ ರಿಂಗ್ ಅಳವಡಿಸುವುದು
ಒಳಾಂಗಣ ಕ್ರೀಡಾಂಗಣ ಮೇಲ್ಚಾವಣಿ ವುಡನ್ ಕೋರ್ಟ್ ದುರಸ್ತಿ
ನೆಹರು ಕ್ರೀಡಾಂಗಣದ ಸಮಗ್ರ ಅಭಿವೃದ್ದಿಗೆ-16.25ಕೋಟಿಗಳು
** ಇದರೊಂದಿಗೆ ಹೊಸನಗರ, ಸೊರಬ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಕುಂಸಿ ಕ್ರೀಡಾಂಗಣಗಳ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು 16.00ಕೋಟಿಗಳು
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸಮಗ್ರ ಕ್ರೀಡಾಭಿವೃದ್ದಿಗೆ 32.25ಕೋಟಿಗಳ ಪ್ರಸ್ತಾವನೆಯನ್ನು ಪಡೆಯಲಾಗಿದೆ ಎಂದರು.ನಂತರ ಸಾರ್ವಜನಿಕರಿಂದ ಅಹವಾಲನ್ನ
 ಸ್ವೀಕಾರ ಮಾಡಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕಾರ: 

ಮಾಧ್ಯಮಗೋಷ್ಟಿಯ ನಂತರ ಸಾರ್ವಜನಿಕರಿಂದ ಸುಮಾರು 50  ಕ್ಕೂ ಹೆಚ್ಚು ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.

ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಮಾಜಿ ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್ ಇತರರು ಮಾಧ್ಯಮಗೋಷ್ಟಿಯಲ್ಲಿ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.