ದುರ್ಗಿಗುಡಿಯಲ್ಲಿ ಮನೆ ಮತ್ತು ವೈರ್ ಮೇಲೆ ಬಿದ್ದ ಬಾರಿ ಉದ್ದದ ತೆಂಗಿನ ಮರ ನೋಡಿ

ಶಿವಮೊಗ್ಗ: ಶಿವಮೊಗ್ಗ ನಗರದ ದುರ್ಗಿಗುಡಿ 2 ನೇ ರಸ್ತೆಯಲ್ಲಿ ಖಾಲಿ ಜಾಗದ ಸೈಟ್ ನಲ್ಲಿ ಇದ್ದ ನೂರಾರು ಅಡಿ ಬಾರಿ ಉದ್ದದ ತೆಂಗಿನ ಮರವೊಂದು ದಿಡೀರ್ ಮುರಿದು ವೈರ್ ಮತ್ತು ಮನೆ ಮೇಲೆ ಬಿದ್ದ ಘಟನೆ  ನಡೆದಿದೆ.

ಇಂದು ಸಂಜೆ 3-30 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.ಸದ್ಯಕ್ಕೆ ವೈರ್ ಮೇಲೆ ಮತ್ತು ಮನೆ ಮೇಲೆ ಬಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ.ಸದರಿ  ರಸ್ತೆಯಲ್ಲಿ ಸಾಕಷ್ಟು ಕಾರುಗಳು ನಿಲುಗಡೆ ಆಗುತ್ತಿತ್ತು. ಮತ್ತು ರಸ್ತೆಯಲ್ಲಿ ಸಾರ್ವಜನಿಕರು ಸಹ ಓಡಾಡುತ್ತಿದ್ದರು.ಇದೀಗ ಮನೆ ಮೇಲೆ ಬಿದ್ದ ತೆಂಗಿನ ಮರ  ಹಾಗೆಯೇ ವೈರ್ ಮತ್ತು ಮನೆಯ ಮೇಲೆಯೇ ನಿಲುಗಡೆ ಆದ್ದರಿಂದ ಬಾರಿ ಅನಾಹುತವೊಂದು ತಪ್ಪಿದಂತಾಗಿದೇ ಅಂತಲೇ ಹೇಳಬಹುದು.

ಮತ್ತೆ ಅದೇ ರಸ್ತೆಯಲ್ಲಿ ಮನೆಯ ಮುಂಬಾಗ ಮತ್ತು ಖಾಲಿ ಸೈಟ್ ನಲ್ಲಿ ನೂರಾರು ಅಡಿ ಉದ್ದದ ಹಲವು ತೆಂಗಿನ ಮರಗಳು ಮುರಿದು ಬಿಳುವ ಸಂಭವ ಇದ್ದು ಅವುಗಳನ್ನು ಕೂಡಲೇ ಕಟಾವು ಮಾಡಿ ತೆರವುಗೊಳಿಸಬೇಕು.ಇಲ್ಲದಿದ್ದರೆ ಮುಂದೊಂದು ದಿನ ಬಾರಿ ಅನಾಹುತ ದುರಂತ ಆಗುವ ಸಂಭವ ಇದೆ.

ಇದೀಗ ಶಿವಮೊಗ್ಗ ಮೆಸ್ಕಾಂ ಸಿಬ್ಬಂದಿಗಳು ಮತ್ತು ಮನೆಯ ಮಾಲೀಕರು ಸ್ಥಳ ದಲ್ಲಿಯೇ ಇದ್ದು, ಮುಂದಿನ ಕ್ರಮವಾಗಿ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.