ಪ್ರಜಾಪ್ರಭುತ್ವದ ಪರಿಚಯಕ್ಕಾಗಿ ವಿದ್ಯಾರ್ಥಿ ಒಕ್ಕೂಟ ರಚನೆ: ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ
ಶಿವಮೊಗ್ಗ, ಆ 24 : ಶಿವಮೊಗ್ಗ ಶಾಲಾ ದಿನಗಳಲ್ಲಿಯೇ ಪ್ರಜಾಪ್ರಭುತ್ವವನ್ನು ಪರಿಚಯಿಸುವ ದೃಷ್ಟಿಯಿಂದ ಮತ್ತು ಉತ್ತಮ ಆಡಳಿತ ವ್ಯವಸ್ಥೆಯನ್ನ ಅಧಿಕಾರಕ್ಕೆ ತರಬೇಕು ಎಂಬ ಕಲ್ಪನೆಯನ್ನು ಮೂಡಿಸುವ ಸಲುವಾಗಿ ವಿದ್ಯಾರ್ಥಿ ಒಕ್ಕೂಟವನ್ನ ಶಾಲೆಯಲ್ಲಿ ನಿರ್ಮಿಸಲಾಗಿದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು.
ಅವರು ಇಂದು ನಗರದ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಒಕ್ಕೂಟವನ್ನ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಂವಿಧಾನ ಚುನಾವಣೆ ಎಂಬ ಮಹತ್ವದ ಅಸ್ತ್ರವನ್ನ ಪ್ರಜೆಗಳಾದ ನಮಗೆ ಕಲ್ಪಿಸಿ ಕೊಟ್ಟಿದೆ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ಪರಿಚಯಿಸುವ ಸಲುವಾಗಿ ನಿಮ್ಮಗಳಿಗೆ ವಿದ್ಯಾರ್ಥಿ ಒಕ್ಕೂಟದ ಮುಖಾಂತರ ಚುನಾವಣೆ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣವನ್ನು ಬೆಳೆಸುವ ಸಲುವಾಗಿ ಮತ್ತು ಶಾಲೆಯ ವಾರ್ಷಿಕ ಚಟುವಟಿಕೆಗಳ ಜವಾಬ್ದಾರಿಯನ್ನ ನೀಡುವ ಮೂಲಕ ನಿಮ್ಮಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ, ಈ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ವ್ಯವಸ್ಥೆಯ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿ ಅವರುಗಳಿಗೆ ವಿವಿಧ ತರಹದ ಜವಾಬ್ದಾರಿಗಳನ್ನ ನೀಡಿದೆ ಎಂದು ಹೇಳಿದರು.
ಚುನಾವಣೆ ಎಂದರೆ ರಾಜಕಾರಣಿಗಳು ಹಾಗೂ ಅಭ್ಯರ್ಥಿಗಳು ವಿವಿಧ ಆಮಿಷಗಳನ್ನ ಒಡ್ಡುತ್ತಾರೆ, ಈ ಆಮಿಷಕ್ಕೆ ಬಲಿಯಾದರೆ ಐದು ವರ್ಷಗಳ ಕಾಲ ನಾವುಗಳು ಯಾತನೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಆಮಿಷಗಳಿಗೆ ಬಲಿಯಾಗದೆ ನಮ್ಮ ಹಕ್ಕನ್ನ ಉತ್ತಮ ಅಭ್ಯರ್ಥಿಗಳ ಆಯ್ಕೆಗೆ ಬಳಸಬೇಕು ಎಂಬುದನ್ನ ಪರಿಚಯಿಸುವುದು ಕೂಡ ಈ ಚುನಾವಣೆಯ ಮುಖ್ಯ ಉದ್ದೇಶ ಎಂದ ಅವರು,ವಿದ್ಯಾರ್ಥಿಗಳಾದ ನೀವುಗಳು ಯಾವುದೇ ಆಮಿಷಕ್ಕೆ ಬಲಿಯಾಗದೆ ನಿಮ್ಮ ನಾಯಕನನ್ನ ಉತ್ತಮ ರೀತಿಯಲ್ಲಿ ಆಯ್ಕೆ ಮಾಡಿಕೊಂಡಿದ್ದೀರಿ ಅದಕ್ಕಾಗಿ ನಿಮಗೆಲ್ಲರಿಗೂ ಅಭಿನಂದನೆಗಳು. ಅವರುಗಳು ಈ ವರ್ಷವಿಡಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನೀವೇ ನೋಡಿ ಎಂದು ಹೇಳಿದರು.
ಆಮಿಷಕ್ಕೆ ಬಲಿಯಾಗಿ ಮತವನ್ನ ಚಲಾಯಿಸಿದರೆ ಮತದಾರರನ್ನ ಅಸಡ್ಡೆ ಮಾಡುತ್ತಾನೆ,ನಂತರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಾನೆ. ಸ್ವತಹ ತಾನು ಸಹ ಭ್ರಷ್ಟಾಚಾರ ಮಾಡುತ್ತಾನೆ,ಇದರಿಂದಾಗಿ ಜನಸಾಮಾನ್ಯರ ಕೆಲಸಗಳು ಲಂಚವಿಲ್ಲದೆ ಆಗದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಇದೆಲ್ಲವನ್ನ ಹೋಗಲಾಡಿಸಬೇಕಾದರೆ ನೀವುಗಳು ಆಮಿಷಕ್ಕೆ ಬಲಿಯಾಗದೆ ಮುಂದಿನ ದಿನಗಳಲ್ಲಿ ಉತ್ತಮ ನಾಯಕನ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಪ್ರಾಚಾರ್ಯ ಎಸ್.ಹೆಚ್. ಸುರೇಶ್ ಹಾಗೂ ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಶಾಲೆಗಳಲ್ಲಿ ಆಯಾ ವರ್ಷದ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ:ಸುರೇಶ್ ಎಸ್. ಹೆಚ್., ಪ್ರಾಂಶುಪಾಲರು, ಬಿ ಜಿ ಎಸ್ ಗುರುಕುಲ ಶಾಲಾ ಕಾಲೇಜು ಗುರುಪುರ, ಶಿವಮೊಗ್ಗ.

ಆಯಾ ವರ್ಷದ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು, ಜಾಗೃತಿ ಮೂಡಿಸುವ ಮೂಲಕ ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಲಿದೆ.
ಶಾಲಾ ಸಂಸತ್ ಚುನಾವಣೆ, ಚುನಾವಣಾ ಆಯೋಗದ ನೀತಿ ನಿಯಮಗಳನ್ವಯ ನಡೆಯುತ್ತಿದ್ದು ಬಹಳ ವಿಶೇಷವೆನಿಸುತ್ತದೆ. ಚುನಾವಣಾ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆಗೆ ಗಡವು, ಹಿಂಪಡೆಯುವಿಕೆಗೆ ಅವಕಾಶ, ಚುನಾವಣಾ ಚಿಹ್ನೆ ನೀಡುವುದು, ಮತ ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ನಿಯಮ ಬದ್ಧವಾಗಿ ಚುನಾವಣೆ ನಡೆಸಲಾಗುತ್ತದೆ. ಬಳಿಕ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆ, ಜವಾಬ್ದಾರಿ ಹಂಚಿಕೆ ನಡೆಸಲಾಯಿತು ಎಂದರು.
--

Leave a Comment