ಹೊಸನಗರ:ವಿಧ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಖಾಸಗಿ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆ*! ಹೀಗೂ ಉಂಟೆ!!
ಹೊಸನಗರ 02 :- ಈಗಿನ ವಿದ್ಯಾರ್ಥಿಗಳೇ ದೇಶದ ಮುಂದಿನ ಸತ್ಪ್ರಜೆಗಳು ಎಂದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಒಂದರಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ಮೊಟ್ಟೆ ಸಮವಸ್ತ್ರ ಪಾದಗಳಿಗೆ ಶೂ ಮಧ್ಯಾಹ್ನದ ಬಿಸಿಊಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುವುದಲ್ಲದೆ ವಿದ್ಯಾರ್ಥಿಗಳನ್ನು ಹಲವಾರು ರೀತಿಯಲ್ಲಿ ಆಹ್ವಾನಿಸಲಾಗುತ್ತಿದೆ. ಇದರಂತೆ ಖಾಸಗಿ ಶಾಲೆಗಳು ಸಹ ವಿದ್ಯಾರ್ಥಿಗಳನ್ನು ಆಕರ್ಷಿಸಲು ಬೀದಿ ಬೀದಿಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಾಹನಗಳ ಸೌಲಭ್ಯ ನೀಡಲಾಗುತ್ತಿದೆ.
ಖಾಸಗಿ ಶಾಲೆಗಳಲ್ಲಿ ಎಲ್ ಕೆ ಜಿ, ಯು ಕೆ ಜಿ ಯಿಂದ ಹಿಡಿದು 10ನೇ ತರಗತಿವರೆಗೂ ತರಗತಿಗಳನ್ನು ನಡೆಸಲಾಗುತ್ತಿದೆ ಇದರಲ್ಲಿ ಸ್ಟೇಟ್ ಸಿಲಬಸ್ ಹಾಗೂ ಸಿಬಿಎಸ್‌ಸಿ ಸಿಲಬಸ್ ಎಂದು ಎರಡು ರೀತಿಯಲ್ಲಿ ವಿಭಾಗವನ್ನು ಮಾಡಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ರೀತಿ ಎರಡು ವಿಭಾಗಕ್ಕೆ ಸರ್ಕಾರದಿಂದ ಅನುಮತಿ ಪಡೆದು ಸ್ಟೇಟ್ ವಿದ್ಯಾರ್ಥಿಗಳಿಗೆ ಮತ್ತು ಸಿಬಿಎಸ್ಸಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಿಭಾಗದಲ್ಲಿ ಮತ್ತು ಬೇರೆ ಬೇರೆ ಕಟ್ಟಡದಲ್ಲಿ ವಿದ್ಯಾಭ್ಯಾಸ ನೀಡಬೇಕೆಂಬುವ ನಿಯಮಾವಳಿಗಳಿದೆ. ಆದರೆ ಈ ಎರಡು ವಿಭಾಗವು ಒಂದೇ ಕಟ್ಟಡದಲ್ಲಿ ಬೇರೆ ಬೇರೆ ತರಗತಿಯಲ್ಲಿ ಪಾಠವನ್ನ ನಡೆಸುವುದಲ್ಲದೇ ಸರ್ಕಾರದ ಬೊಕ್ಸಕ್ಕೆ ಹಾಗೂ ಪೋಷಕರ ಜೇಬಿಗೆ ಕತ್ತರಿ ಹಾಕುವಂತಹ ಕೆಲಸ ನಡೆಯುತ್ತಿದೆ.
ಹೌದು ಹೊಸನಗರ ತಾಲ್ಲೂಕಿನಲ್ಲಿ ಶ್ರೀ ರಾಮಕೃಷ್ಣ ವಿದ್ಯಾಲಯ ಎಂಬ ಖಾಸಗಿ ಶಾಲೆಯು ಕಳೆದ 15 - 20 ವರ್ಷಗಳಿಂದ ಉತ್ತಮ ಶಿಕ್ಷಣ ನೀಡುತ್ತಿದ್ದು ಈ ಶಾಲೆಯಲ್ಲಿ ಎಲ್ ಕೆ ಜಿ, ಯುಕೆಜಿ ಮತ್ತು ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಸ್ಟೇಟ್ ಮತ್ತು ಸಿಬಿಎಸ್‌ಸಿ ಎಂದು ಎರಡು ವಿಭಾಗಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಸಮಯದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ಈ ರಾಮಕೃಷ್ಣ ವಿದ್ಯಾಲಯವು ಇತ್ತೀಚಿಗೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಸಿಬಿಎಸ್‌ಸಿ ಹಾಗೂ ಸ್ಟೇಟ್ ತರಗತಿಗಳಿಗೆ ಪ್ರತ್ಯೇಕ ಕಟ್ಟಡ ಇರಬೇಕು ಎಂಬ ನಿಯಮಾವಳಿಗಳಿದ್ದು, ಈ ಕಟ್ಟಡವು ಸಿಬಿಎಸ್ಸಿ ಹಾಗೂ ಸ್ಟೇಟ್ ತರಗತಿಗಳು ಒಂದೇ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಈ ಶಾಲೆಯು ಸಿ ಬಿ ಎಸ್ ಸಿ ಶಾಲೆ ನಡೆಸಲು ಮಾತ್ರ ಅನುಮತಿ ಹೊಂದಿದ್ದು ಸ್ಟೇಟ್ ಸಿಲಬಸ್ ಶಾಲೆ ನಡೆಸಲು ಸರ್ಕಾರದಿಂದ ಅನುಮತಿ ಇರುವುದಿಲ್ಲ.
ಯಾವುದೇ ಖಾಸಗಿ ವಿದ್ಯಾ ಸಂಸ್ಥೆಯು ತರಗತಿಗಳನ್ನು ನಡೆಸಲು ತನ್ನದೇ ಆದ ನಿವೇಶನ ಹಾಗೂ ಕಟ್ಟಡವನ್ನು ಹೊಂದಿರಬೇಕು ಆದರೆ ಈ ವಿದ್ಯಾಲಯವು ಕೇವಲ 20 ಗುಂಟೆ ನಿವೇಶನ ಹೊಂದಿದ್ದು, ಸುಮಾರು ಇಪ್ಪತ್ತು ಗುಂಟೆಗೂ ಅಧಿಕ ಅಂದಾಜು ಒಂದು ಎಕರೆ ಎಷ್ಟು ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ಈ ಜಾಗವು ಸರ್ಕಾರಕ್ಕೆ ಸೇರಿದ ಗೋಮಾಳ ಜಾಗವಾಗಿದೆ. ಯಾವುದೇ ಖಾಸಗಿ ಶಾಲೆಯು ಬಹುಮಹಡಿ ಹೊಂದಿರಬಾರದು ಎಂಬ ಸರ್ಕಾರದ ನಿಯಮಾವಳಿ ಇದೆ. ಆದರೆ ಈ ಕಟ್ಟಡವು ನೆಲ ಅಂತಸ್ತು ಮೊದಲನೇ ಅಂತಸ್ತು ಎರಡನೇ ಅಂತಸ್ತು ಎಂದು ಮೂರು ಅಂತಸ್ತಿನಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ಈ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಶೌಚಾಲಯ, ಅಡುಗೆ ಕೊಠಡಿ ಹಾಗೂ ಒಂದು ಮೀಟಿಂಗ್ ಹಾಲ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕೊಠಡಿಯನ್ನು ಹೊಂದಿದೆಯಲ್ಲದೇ ಈ ಕಟ್ಟಡವು ಕಳಪೆ ಗುಣಮಟ್ಟದ ಕಟ್ಟಡವಾಗಿದ್ದು ವಿದ್ಯಾರ್ಥಿಗಳಿಗೆ ಸುರಕ್ಷಕಿಂತ, ಅಸುರಕ್ಷಿತವಾಗಿದೆ ಎಂದು ಕೆಲ ಉನ್ನತ ಅಧಿಕಾರಿಗಳಿಂದ ಶಿಕ್ಷಣ ಇಲಾಖೆಗೆ ವರದಿ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಆಟೋಟಗಳಿಗೆ ಅಗತ್ಯವಿರುವ ಮೈದಾನ ವಿರುವುದಿಲ್ಲ ಶಾಲೆಯ ಎದುರು ಇರುವ ಸರ್ಕಾರದ ಗೋಮಾಳದ ಜಾಗದಲ್ಲಿ ಒಂದು ಮೈದಾನವನ್ನು ಮಾಡಿಕೊಂಡು ವಿದ್ಯಾರ್ಥಿಗಳ ಆಟೋಟಕ್ಕೆ ಅನುಕೂಲವಾಗುವಂತೆ ನಿರ್ಮಾಣವಾಗಿದೆ.
ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಕರು ಸಹ TCH, BE, B ed ಗಳಂತಹ ಉನ್ನತ ಶಿಕ್ಷಣವನ್ನು ಹೊಂದದೆ ಕೇವಲ PUC ತತ್ಸಮಾನ ವಿದ್ಯಾಭ್ಯಾಸ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಬಿಎಸ್‌ಸಿ ಶಾಲೆಗೆ ಮಾತ್ರ ಅನುಮತಿ ಪಡೆದಿರುವ ಈ ರಾಮಕೃಷ್ಣ ವಿದ್ಯಾಲಯವು ಸ್ಟೇಟ್ ತರಗತಿಗಳನ್ನು ನಡೆಸಲು ಸರ್ಕಾರದಿಂದ ಅನುಮತಿ ಹೊಂದದೆ ಇರುವ ಈ ಶಾಲೆಯು ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಕತ್ತಿಯ ಮೇಲೆ ನಡೆದಂತೆ ಆಗುತ್ತಿದೆ. ಇದನ್ನು ಪ್ರಶ್ನಿಸುವ ಪೋಷಕರಿಗೆ ಸರ್ಕಾರದಿಂದ ಅನುಮತಿ ನೀಡದೇ ಇರುವುದರ ಬಗ್ಗೆ ನಾವು ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ತೀರ್ಪು ನಮ್ಮಂತಾಗಲಿದೆ ಎಂದು ಹಾರಿಕೆ ಉತ್ತರಗಳನ್ನು ನೀಡಿ ಕಳುಹಿಸಲಾಗುತ್ತಿದೆ. ಒಬ್ಬ ಸ್ಟೇಟ್ ಸಿಲಬಸ್ ವಿದ್ಯಾರ್ಥಿಯ ಶಾಲೆಯಲ್ಲಿ ಸೇರ್ಪಡೆಗೆ ಕನಿಷ್ಠ 18ರಿಂದ 20 ಸಾವಿರ ರೂಪಾಯಿಗಳು ವಸುಲಾತಿ ಮಾಡಲಾಗುತ್ತಿದೆ ಇದರಂತೆ ಒಟ್ಟು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಟೇಟ್ ಸಿಲಬಸ್ ವಿದ್ಯಾರ್ಥಿಗಳಿದ್ದು, ಪ್ರಸಕ್ತ ಸಾರಿನಲ್ಲಿ ಅಂದಾಜು 14 ಲಕ್ಷಕ್ಕೂ ಅಧಿಕ ಹಣವನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಲಾಗುತ್ತಿದೆ ಅಂತೆಯೇ 1ನೇ ತರಗತಿಯಿಂದ 9ನೇ ತರಗತಿವರಿಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಬಳಿ ಎಷ್ಟು ಹಣ ವಸುಲಾತಿ ಆಗಬಹುದು ಎಂಬ ಸಂಶಯ ಸಾರ್ವಜನಿಕರಲ್ಲಿ ಹುಟ್ಟು ಹಾಕಿದೆ. ಇದೆಲ್ಲದರ ಹೊರತಾಗಿ ಸ್ಟೇಟ್ ಸಿಲಬಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿರುವ ಸಂಸ್ಥೆಯ ಮುಖ್ಯಸ್ಥರ ಪರವಾಗಿ ತೀರ್ಪು ಬಂದರೆ ತೊಂದರೆ ಇಲ್ಲ. ಆದರೆ, ಸಂಸ್ಥೆಯ ವಿರುದ್ದವಾಗಿ ಬಂದರೆ, ವಿದ್ಯಾಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಪಾಡೇನು!? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಸ್ಟೇಟ್ ಸಿಲಬಸ್ಸಿಗೆ ಸರ್ಕಾರದಿಂದ ಅನುಮತಿ ಇಲ್ಲದೆ ಇದ್ದರೂ
ವಿದ್ಯಾರ್ಥಿಗಳ ಸೇರ್ಪಡೆ:
ಸರ್ಕಾರದಿಂದ ಮಾನ್ಯತೆ ಪಡೆದಿರುವ ಖಾಸಗಿ ಶಾಲೆ ಎಂದರೆ ಸರ್ಕಾರದ ಹಾಗೂ ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕು ಮತ್ತು ಸರ್ಕಾರಿ ಶಾಲೆಗಳಿಗಿಂತ ವಿಭಿನ್ನವಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹಾ ಶಿಕ್ಷಣ ಸಂಸ್ಥೆಯಾಗಿರಬೇಕು ಸರ್ಕಾರಕ್ಕೆ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ವಂಚನೆ ಮಾಡುವಂತಹ ಸಂಸ್ಥೆಯಾಗಬಾರದು. ಆದರೆ ತಾಲ್ಲೂಕಿನ ಶ್ರೀ ರಾಮಕೃಷ್ಣ ವಿದ್ಯಾಲಯವು ಸಿಬಿಎಸ್‌ಸಿ ತರಗತಿಗಳನ್ನು ನಡೆಸಲು ಅನುಮತಿ ಪಡೆದಿದ್ದು ಇದರ ಜೊತೆಗೆ ಸ್ಟೇಟ್ ಸಿಲಬಸ್ ತರಗತಿಗಳನ್ನು ನಡೆಸುತ್ತಿದೆ. ಈಬಗ್ಗೆ ವಿದ್ಯಾರ್ಥಿಗಳಿಗೆ ಅಥವಾ ಅವರ ಪೋಷಕರಿಗೆ ಸಮಂಜಸವಾದ ಮಾಹಿತಿ ನೀಡದೆ ಸ್ಟೇಟ್ ಸಿಲಬಸ್ಸಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಈ ವಿದ್ಯಾಲಯವು ವಿದ್ಯಾರ್ಥಿಗಳ ಭವಿಷ್ಯದ ಪ್ರತಿಷ್ಠಕ್ಕಿಂತ ಸ್ವಪ್ರತಿಷ್ಠೆಯೇ ಹೆಚ್ಚಾಗಿದೆ. ಸ್ಟೇಟ್ ಸಿಲಬಸ್ಸಿಗೆ ಸರ್ಕಾರದಿಂದ ಅನುಮತಿ ಇಲ್ಲದೆ ಇದ್ದರೂ ಸಹ ಸ್ಟೇಟ್ ಸಿಲಬಸ್ ಅನುಮತಿ ಪಡೆಯಲು ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಪೋಷಕರಿಗೆ ಸುಳ್ಳು ಮಾಹಿತಿ ನೀಡಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಒಂದೊಮ್ಮೆ ನ್ಯಾಯಾಲಯದಲ್ಲಿ ತೀರ್ಪು ವಿದ್ಯಾ ಸಂಸ್ಥೆಯ ವಿರುದ್ಧವಾಗಿ ಬಂದಲ್ಲಿ ಒಂದರಿಂದ 10ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಭವಿಷ್ಯವೇನು!?ಈಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಡಿಡಿಪಿಐರವರಿಗೆ ಮಾಹಿತಿ ನೀಡಿದರೆ ಅವರು ಹಾರಿಕೆ ತೋರಿಕೆ ಮಾತನಾಡುತ್ತಿದ್ದಾರೆ ಇಂತಹ ಅಧಿಕಾರಿಗಳ ದುರ್ನಡತೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದರಲ್ಲಿ ನ್ಯಾಯ ಎಲ್ಲಿದೆ? ಆದ್ದರಿಂದ ನಾನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾ ಸಂಸ್ಥೆಯ ನಡಾವಳಿ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದ್ದೇನೆ
*ಅಶ್ವಿನ್ ಕುಮಾರ್ ಪುರಸಭಾ ಸದಸ್ಯರು ಹಾಗೂ ತಾಲ್ಲೂಕು ಶಾಸಕರ ಮಾದರಿ ಶಾಲೆಯ ಎಸ್ಡಿಎಂಸಿ ಅದ್ಯಕ್ಷ*
ಶಿಕ್ಷಣ ಇಲಾಖೆಯಿಂದ ಸಿಬಿಎಸ್‌ಸಿ ತರಗತಿಗಳನ್ನು ನಡೆಸಲು ಮಾತ್ರ ಅನುಮತಿ ಪಡೆದಿದ್ದು ಇದರೊಂದಿಗೆ ಸ್ಟೇಟ್ ಸಿಲಬಸ್ ತರಗತಿ ನಡೆಯುತ್ತಿದೆ:
ಶ್ರೀ ರಾಮಕೃಷ್ಣ ವಿದ್ಯಾಲಯವು ಶಿಕ್ಷಣ ಇಲಾಖೆಯಿಂದ ಸಿಬಿಎಸ್‌ಸಿ ತರಗತಿಗಳನ್ನು ನಡೆಸಲು ಮಾತ್ರ ಅನುಮತಿ ಪಡೆದಿದ್ದು ಇದರೊಂದಿಗೆ ಸ್ಟೇಟ್ ಸಿಲಬಸ್ ತರಗತಿಯನ್ನು ಸಹ ನಡೆಸುತ್ತಿದೆ ಇದು ಕೇವಲ ಹೊಸನಗರ ತಾಲ್ಲೂಕಿನಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿ 50ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಸಹ ಈ ರೀತಿ ನಡೆಸುತ್ತಿವೆ ಎಂಬ ಮಾಹಿತಿ ಲಭ್ಯವಿದ್ದು ಈ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಸ್ಟೇಟ್ಸ್ಟೇಟ್ ಸಿಲಬಸ್ ನಡೆಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.
*ಕೃಷ್ಣಮೂರ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊಸನಗರ*
*ವರದಿ, ಪುಷ್ಪಾ ಜಾಧವ್ ಹೊಸನಗರ*
Leave a Comment