ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಕಲಿ ಅಧ್ಯಕ್ಷನನ್ನು ಬಂಧಿಸುವಂತೇ ಒತ್ತಾಯ:ಜಯನಗರ ಪೊಲೀಸ್ ಠಾಣೆಗೆ,ಡಿಸಿಗೆ,ಎಸ್ಪಿಗೆ KWJV ಶಿವಮೊಗ್ಗ ಘಟಕದಿಂದ ದೂರು
ಶಿವಮೊಗ್ಗ :ನಗರದ ಆರ್.ಟಿ.ಓ. ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷನೆಂದು ಹೇಳಿಕೊಂಡು ಅಕ್ರಮ ಪ್ರವೇಶ ಮಾಡಿ ಪತ್ರಿಕಾ ಭವನದಲ್ಲಿ ಹಣ ವಸೂಲಿ ಮಾಡಿ ದುರುಪಯೋಗ ಮಾಡಿಕೊಂಡು ಸರ್ಕಾರಕ್ಕೆ ಮೋಸ ವಂಚನೆ ಮಾಡುತ್ತಿರುವ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಎಫ್.ಐ.ಆರ್. ದಾಖಲಿಸಿ ಕೂಡಲೇ ಬಂಧಿಸುವಂತೇ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪಕ್ಟರ್,
ಜಯನಗರ ಪೊಲೀಸ್ ಠಾಣೆ,, ಶಿವಮೊಗ್ಗ ಮತ್ತು ಅಪರ ಜಿಲ್ಲಾಧಿಕಾರಿಗಳು ಶಿವಮೊಗ್ಗ ಹಾಗೂ ಜಿಲ್ಲಾರಕ್ಷಣಾಧಿಕಾರಿಗಳು ಶಿವಮೊಗ್ಗ ಇವರಿಗೆ ಇಂದು ಬೆಳಿಗ್ಗೆ ದೂರು ಸಲ್ಲಿಸಲಾಯಿತು.
ಆರ್.ಟಿ.ಓ. ರಸ್ತೆಯಲ್ಲಿರುವ ಸರ್ಕಾರಿ ಪತ್ರಿಕಾ ಭವನ ಸರ್ಕಾರದ ಅನುದಾನ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅನುದಾನ, ಜನಪ್ರತಿನಿಧಿಗಳ ಅನುದಾನದಿಂದ ಒಂದು ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಕಟ್ಟಿರುವಂತಹ ಭವ್ಯ ಪತ್ರಿಕಾ ಭವನವಾಗಿದೆ. ಸರ್ಕಾರದಿಂದ 25 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಪತ್ರಿಕಾಭವನಗಳ ನಿರ್ಮಾಣ ಹಾಗೂ ನಿರ್ಮಾಣಗೊಂಡಿರುವ ಭವನಗಳ ದುರಸ್ತಿ, ಅಭಿವೃದ್ಧಿ, ನಿರ್ವಹಣೆ, ಮೇಲ್ವಿಚಾರಣೆ ಇವುಗಳ ಉದ್ದೇಶಕ್ಕಾಗಿ ಜಿಲ್ಲಾ ಮಟ್ಟದ ಸಮಿತಿಗಳನ್ನು ಸರ್ಕಾರದ ಸಚಿವಾಲಯ ದಿನಾಂಕ: 15-06-2017ರಂದು ಅಧಿಸೂಚನೆ ಹೊರಡಿಸಿದೆ. ಅದರಂತೆ ಶಿವಮೊಗ್ಗದ ಆರ್.ಟಿ.ಓ. ರಸ್ತೆಯಲ್ಲಿರುವ ಪತ್ರಿಕಾ ಭವನಕ್ಕೆ ಜಿಲ್ಲಾ ಮಟ್ಟದ 5 ಸದಸ್ಯರ ಸಮಿತಿಗಳನ್ನು ರಚಿಸಿದೆ. ಈ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ತಾಲ್ಲೂಕು ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಮತ್ತು ಸಹಕಾರ್ಯದರ್ಶಿಯಾಗಿ ಜಿಲ್ಲಾ ವಾರ್ತಾಧಿಕಾರಿ ನೇಮಕವಾಗಿರುತ್ತಾರೆ. ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ, ಬೆಂಗಳೂರು ಇವರು ಹೊರಡಿಸಿರುವ ಅಧಿಸೂಚನೆ ಪ್ರತಿಯನ್ನು ಮತ್ತು ಸರ್ಕಾರದಿಂದ ಪತ್ರಿಕಾ ಭವನಕ್ಕೆ 25 ಲಕ್ಷ ಹಣ ಬಿಡುಗಡೆಯಾದ ಬಗ್ಗೆ ಸರ್ಕಾರದ ಆದೇಶದ ಪ್ರತಿಯನ್ನು ತಮ್ಮ ಅವಗಾಹನೆಗಾಗಿ ಲಗತ್ತಿಸಿದೆ.
ಆದರೆ, ಸರ್ಕಾರದ ಯಾವುದೇ ಆದೇಶವಿಲ್ಲದೇ ಇದ್ದರೂ ಶಿವಮೊಗ್ಗ ನಗರದ ಆರ್.ಟಿ.ಓ. ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷನೆಂದು ಹೇಳಿಕೊಂಡು ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ ಅಕ್ರಮ ಪ್ರವೇಶ ಮಾಡಿ ಪತ್ರಿಕಾ ಭವನದಲ್ಲಿ ಸಾರ್ವಜನಿಕರಿಂದ ಪತ್ರಿಕಾಗೋಷ್ಠಿ ಹೆಸರಿನಲ್ಲಿ ರೂ. 2 ಸಾವಿರ, ಪ್ರೆಸ್‍ನೋಟ್‍ಗಳಿಗೆ ರೂ. 150/- ಹಾಗೂ ಕಾರ್ಯಕ್ರಮಗಳಿಗೆ ಜಾಗ ನೀಡುವುದಕ್ಕೆ ದಿನವೊಂದಕ್ಕೆ ರೂ. 5 ರಿಂದ 10 ಸಾವಿರ ಹಣ ವಸೂಲಿ ಮಾಡುತ್ತಿದ್ದಾನೆ. ಈ ಹಣವನ್ನು ಜಿಲ್ಲಾಡಳಿತಕ್ಕಾಗಲೀ ಮತ್ತು ಸರ್ಕಾರಕ್ಕಾಗಲೀ ಕಟ್ಟದೇ ಹಣವನ್ನು ದುರುಪಯೋಗ ಮಾಡಿಕೊಂಡು ಸರ್ಕಾರಕ್ಕೆ ಮೋಸ ವಂಚನೆ ಮಾಡುತ್ತಿದ್ದಾನೆ.
ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ ಅಧ್ಯಕ್ಷನೆಂದು ಹೇಳಿಕೊಂಡು ಸುಮಾರು 10 ವರ್ಷಗಳಿಂದ ಸಾರ್ವಜನಿಕರಿಂದ ಈ ರೀತಿ ಹಣ ವಸೂಲಿ ಮಾಡಿ ದುರ್ಬಳಕೆ ಮಾಡಿಕೊಂಡಿರುತ್ತಾನೆ. ಪತ್ರಿಕಾಭವನದಲ್ಲಿನ ಹಣಕಾಸಿನ ಲೆಕ್ಕಾಚಾರದ ಬಗ್ಗೆ ಇದುವರೆಗೂ ಜಿಲ್ಲಾಡಳಿತಕ್ಕಾಗಲೀ ಸರ್ಕಾರಕ್ಕಾಗಲೀ ಲೆಕ್ಕಪತ್ರಗಳನ್ನು ನೀಡಿರುವುದಿಲ್ಲ.
ಸರ್ಕಾರದ ಅಧಿಸೂಚನೆ ಪ್ರತಿ ಪತ್ರಿಕಾಭವನಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರು
ಆದ್ದರಿಂದ ಸರ್ಕಾರಿ ಪತ್ರಿಕಾಭವನದಲ್ಲಿ ಅಕ್ರಮವಾಗಿ ಕುಳಿತುಕೊಂಡು ಪ್ರೆಸ್‍ಟ್ರಸ್ಟ್‍ನ ಅಧ್ಯಕ್ಷ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ 10 ವರ್ಷಗಳಿಂದ ಸಾರ್ವಜನಿಕರಿಂದ ವಸೂಲಿ ಮಾಡುತ್ತಿದ್ದಾನೆ. ವಸೂಲಿ ಮಾಡಿರುವ ಹಣವನ್ನು ಆತನಿಂದ ವಾಪಾಸ್ ಪಡೆದು, ಸರ್ಕಾರದ ಬೊಕ್ಕಸಕ್ಕೆ ಕಟ್ಟಿಸಬೇಕು. ಆತನ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ಎಫ್.ಐ.ಆರ್. ದಾಖಲಿಸಿ ಆತನನ್ನು ಬಂಧಿಸಬೇಕು ಎಂದು ದೂರು ನೀಡಲಾಗಿದೆ.
ಸಹಿ/-
ಡಿ.ಜಿ.ನಾಗರಾಜ (ರಾಜು)
ಸಂಪಾದಕರು
ಹಲೋಶಿವಮೊಗ್ಗ ದಿನಪತ್ರಿಕೆ
ಜಿಲ್ಲಾದ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ
ಸಂಘಟನಾ ಕಾರ್ಯದರ್ಶಿ
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ.
ಮೊ.9449063043
Leave a Comment