ಶಿವಮೊಗ್ಗ :ಶ್ರೀ ಅಂಬಿಕಾ ಸ್ಟೋರ್ ಮಾಲೀಕ ವೆಂಕಟೇಶ್ ಅಪಹರಣ -ಕೊಲೆ ಪ್ರಕರಣ:ಮರು ತನಿಖೆಗೆ CBI/CIDಗೆ ವಹಿಸಲು ಒತ್ತಾಯ
ಶಿವಮೊಗ್ಗ; ಶಿವಮೊಗ್ಗ ನಗರದಲ್ಲಿನ ಗಾಂಧೀಬಜಾರ್ ನಲ್ಲಿರುವ ಶ್ರೀ ಅಂಬಿಕಾ ಸ್ಟೋರ್ ಬುಕ್ ಸ್ಟಾಲ್ ಮಾಲಿಕ ವ್ಯಾಪಾರೋದ್ಯಮಿ ವೆಂಕಟೇಶ್ ಸಿ.ಎನ್ ಇವರ ಅಪಹರಣ ಮತ್ತು ಕೊಲೆ ಮಾಡಿದ ಬೀಕರ ಹತ್ಯೆಯ ಗಂಭೀರವಾದ ಘೋರವಾದ ಪ್ರಕರಣ ಕೋಟೆ ಪೊಲೀಸ್ ಠಾಣೆ ಕ್ರೈಂ ನಂಬರ್ 120/2003 ಕಲಂ 341,363,302 IPC ಪ್ರಕರಣದ ತನಿಖೆ ಮಾಡಿದ್ದನ್ನು ನೋಡಲಾಗಿ ದಾಖಲೆಯನ್ನು ಪರಿಶೀಲಿಸಿ ನೋಡಿದಾಗ ತನಿಖೆಯಲ್ಲಿ ಹಲವು ಲೋಪ ದೋಷಗಳನ್ನು ಕಂಡು ಬಂದಿದೆ..ಈ ಪ್ರಕರಣದ ಆರೋಪಿ ಯಾರು ಎಂದು ಪತ್ತೆ ಹಚ್ಚಲು ತನಿಖಾಧಿಕಾರಿ ವಿಫಲವಾಗಿದ್ದಾರೆ ಎಂದು ತಿಳಿದು ಬಂದಿದೆ.
ಆದ್ದರಿಂದ ಪ್ರಕರಣವನ್ನು ಸಂಪಾದಕನಾದ ನಾನು ನಮ್ಮ ಹಲೋ ಶಿವಮೊಗ್ಗ ಪತ್ರಿಕೆ ವತಿಯಿಂದ ಈ ಗಂಭೀರವಾದ ಅಪಹರಣ/ ಕೊಲೆ ಪ್ರಕರಣದ ಆರೋಪಿ ಪತ್ತೆಗಾಗಿ ಈ ಪ್ರಕರಣವನ್ನು CBI ಗೆ ಅಥವಾ CID ಗೆ ನೀಡುವಂತೆ ಕರ್ನಾಟಕದ ಸಿ.ಎಂ ಗೆ, ರಾಜ್ಯಪಾಲರಿಗೆ,DG and IG ಬೆಂಗಳೂರು ರವರಿಗೆ,IGP Davanagere ರವರಿಗೆ ಮತ್ತು ಜಿಲ್ಲಾಧಿಕಾರಿಗಳು, ಶಿವಮೊಗ್ಗ ಮತ್ತು ಜಿಲ್ಲಾರಕ್ಷಣಾಧಿಕಾರಿಗಳು ಶಿವಮೊಗ್ಗ ರವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು.
ಈಗಾಗಲೇ ಗಂಭೀರವಾದ ಘೋರವಾದ ಪ್ರಕರಣದ ತನಿಖೆ ಮುಕ್ತಾಯ ಮಾಡಿ ಈ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗಿಲ್ಲ ಎಂದು ಸಿ ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.ಇದೀಗ ಈ ಪ್ರಕರಣದಲ್ಲಿ FIR ಆದ ನಂತರ ತನಿಖೆ ಮಾಡಿದ ಅಧಿಕಾರಿ ಜಗದೀಶ್ ಪೊಲೀಸ್ ಇನ್ಸ್ಪೆಕ್ಟರ್ ರವರು ಸರಿಯಾಗಿ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಮತ್ತು ಸುಳಿವಿನ ಬಗ್ಗೆ ಸರಿಯಾದ ತನಿಖೆ ಮಾಡಿದ್ದಾರೆ.
ಅದರಲ್ಲಿ ಒಬ್ಬ ಕ್ರಾಂತಿದೀಪ ದಿನಪತ್ರಿಕೆ ಸಂಪಾದಕ ಎನ್.ಮಂಜುನಾಥ್ ನಡೆ ಆತನ ಪೋನ್ ಸಂಪರ್ಕ ಮಾತುಕತೆ ನಡೆದ ಬಗ್ಗೆ ಆತನ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆತನ ನಡೆ ಬಗ್ಗೆ ವಿಚಾರಣೆ ನಂತರ ಹಲವು ವಿಷಯಗಳನ್ನು ತನಿಖೆಯ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದಾರೆ.ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ತನಿಖಾಧಿಕಾರಿ ವರ್ಗಾವಣೆ ಆಗುತ್ತಾರೆ. ನಂತರ ತನಿಖಾಧಿಕಾರಿಗಳು ಸರಿಯಾದ ತನಿಖೆ ನಡೆದಿಲ್ಲ ಈ ಗಂಭೀರವಾದ ಪ್ರಕರಣದ ಆರೋಪಿಗಳ ಪತ್ತೆಗೆ ಕಾರ್ಯ ನಿರ್ವಹಿಸಿಲ್ಲ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಕೂಗು ಸಾರ್ವಜನಿಕವಲಯದಲ್ಲಿ ಕೇಳಿ ಬರುತ್ತಿದೆ.
ನಮ್ಮ ಹಲೋ ಶಿವಮೊಗ್ಗ ದಿನ ಪತ್ರಿಕೆ ಕೂಡ ಈ ಪ್ರಕರಣದ ಬೆನ್ನು ಹತ್ತಿ ಪ್ರಕರಣದ ಸಂಪೂರ್ಣ ಕಡತವನ್ನು ನಿಯಮಾನುಸಾರ ಪಡೆದು ಸಮಗ್ರವಾದ ಅಧ್ಯಯನ ಮಾಡಿದೆ.
ಏನಿದು ಕೊಲೆ ಪ್ರಕರಣ:
ಶಿವಮೊಗ್ಗ ಕೋಟೆ ಠಾಣೆಯಲ್ಲಿ ದಾಖಲಾದ ಪ್ರಕರಣ ಇದು. ಶಿವಮೊಗ್ಗ ನಗರದಲ್ಲಿನ ಗಾಂಧೀಬಜಾರ್ ನಲ್ಲಿರುವ ಶ್ರೀ ಅಂಬಿಕಾ ಸ್ಟೋರ್ ಬುಕ್ ಸ್ಟಾಲ್ ಮಾಲಿಕ ವೆಂಕಟೇಶ್ ಸಿ.ಎನ್ ಇವರು ದಿನಾಂಕ 12-11-2003 ರಂದು ಅಂಗಡಿಯ ವ್ಯವಹಾರ ಮುಗಿಸಿಕೊಂಡು ತಮ್ಮ ನೀಲಿ ಬಣ್ಣದ ಮಾರುತಿ ಕೆ.ಎ.14 ಎಂ. 550 ವ್ಯಾನ್ ನಲ್ಲಿ ಮನೆಗೆ ಹಿಂದಿರುಗುವ ಸಮಯದಲ್ಲಿ ಜನ ನಿಬಿಡ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಮುಂಭಾಗದಲ್ಲಿ ಸುಮಾರು ರಾತ್ರಿ 10 ಗಂಟೆ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಕಾರನ್ನು ಅಡ್ಡ ಹಾಕಿ ಕಾರಿನ ಸಮೇತ ವೆಂಕಟೇಶ್ ಎಂಬ ವ್ಯಕ್ತಿಯನ್ನು ಅಪಹರಿಸಿಕೊಂಡು ಹೋಗಿ ಶಿವಮೊಗ್ಗ ತಾಲ್ಲೂಕು ಹೊಸಹಳ್ಳಿ ಹೊಸಕೊಪ್ಪ ಗ್ರಾಮಕ್ಕೆ ಹೋಗುವ ಟಾರ್ ರಸ್ತೆಯಲ್ಲಿ ಹಿರಿಯಣ್ಣಗೌಡರ ಅಡಿಕೆ ತೋಟದ ಪಕ್ಕದಲ್ಲಿರುವ ಚಾನಲ್ ಏರಿಯ ರಸ್ತೆಯಲ್ಲಿ ಅದೇ ವ್ಯಾನಿನಲ್ಲಿ ಮೃತ ವೆಂಕಟೇಶ್ ಕುತ್ತಿಗೆಗೆ ಹಗ್ಗ ಬಿಗಿದು ಹಗ್ಗದಿಂದ ಕೈ ಕಾಲು ಕಟ್ಟಿ ಕೊಲೆ ಮಾಡಿದ ಪ್ರಕರಣವಾಗಿದೆ.ಈ ಅಪಹರಣ ಕೊಲೆ ಪ್ರಕರಣ ಶಿವಮೊಗ್ಗದಲ್ಲಿನ ನಾಗರೀಕ ರಲ್ಲಿ ಗಾಬರಿ ಮತ್ತು ಭಯ ಹುಟ್ಟಿಸಿತ್ತು.
ಈ ಪ್ರಕರಣದಲ್ಲಿ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿದ ಆರೋಪಿಗಳನ್ನು ಹುಡುಕಾಟ ಮಾಡಿ ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಪಟ್ಟರು ಸಹ ಪತ್ತೆ ಅಗಿಲ್ಲ ಎಂದು 4 ವರ್ಷದ ನಂತರ ತನಿಖಾಧಿಕಾರಿಯವರು ಸಿ ರಿಪೋರ್ಟ್ ನ್ಯಾಯಾಲಯಕ್ಕೆ ದಿನಾಂಕ 8-10-2007 ರಂದು ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್.ಮಂಜುನಾಥ್ ಹೆಸರು ಪ್ರಸ್ತಾಪ!!
ಈ ಪ್ರಕರಣದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್.ಮಂಜುನಾಥ್ ಹೆಸರು, ಮತ್ತು ದಿನಪತ್ರಿಕೆ ಹೆಸರನ್ನು ಈ ಪ್ರಕರಣದ ತನಿಖಾಧಿಕಾರಿ ಪ್ರಸ್ತಾಪ ಮಾಡಿದ್ದಾರೆ. ಈತ ವೆಂಕಟೇಶ್ ಅಪಹರಣವಾದ ದಿನ ಅಪಹರಣಕ್ಕಿಂತ ಮುಂಚೆ ಮೃತ ವೆಂಕಟೇಶ ನ ಮೊಬೈಲ್ ಗೆ ಪೋನ್ ನಂ 08182 31951 ನಿಂದ ಸಂಜೆ 5-17 ಗಂಟೆಗೆ ದೂರವಾಣಿ ಮಾಡಿ 51 ನಿಮಿಷಗಳ ಕಾಲ ಮಾತನಾಡಿದ್ದಾನೆ.
ನಂತರ ಮತ್ತೆ ಮೃತ ಅಪರಣವಾದ ನಂತರದಲ್ಲಿ ರಾತ್ರಿ 11-10 ಗಂಟೆ ಸಮಯದಲ್ಲಿ ಮೃತ ವೆಂಕಟೇಶ್ ಮೊಬೈಲ್ ಗೆ ದೂರವಾಣಿ ಮಾಡಿ ಸುಮಾರು 18. ನಿಮಿಷಗಳ ಕಾಲ ಕ್ರಾಂತಿದೀಪ ದಿನಪತ್ರಿಕೆ ಸಂಪಾದಕ ಎನ್.ಮಂಜುನಾಥ್ ಮಾತನಾಡಿದ್ದಾನೆ ಎಂದು ಪ್ರಕರಣದಲ್ಲಿ ನಮೂದಿಸಲಾಗಿದೆ.ಮಾತುಕತೆಯ ಧ್ವನಿಯ ಬಗ್ಗೆ ಇಬ್ಬರ ಆಡಿಯೋ ಸಂಗ್ರಹ ಮಾಡಬೇಕಾಗಿತ್ತು.ಅದನ್ನು ಮಾಡಿಲ್ಲ.
ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ತನಿಖಾಧಿಕಾರಿ ಪ್ರಯತ್ನ ಪಟ್ಟಿಲ್ಲ ಎಂಬುದು ತನಿಖೆಯ ದಾರಿಯನ್ನು ನೋಡಿದರೇ ಗೊತ್ತಾಗುತ್ತದೆ.
ಈ ಪ್ರಕರಣದ ಆರೋಪಿ ಯಾರು ಎಂದು ಪತ್ತೆ ಹಚ್ಚಲು ತನಿಖಾಧಿಕಾರಿ ವಿಫಲವಾದ ಹಿನ್ನೆಲೆಯಲ್ಲಿ ಸಂಪಾದಕನಾದ ನಾನು ನಮ್ಮ ಹಲೋ ಶಿವಮೊಗ್ಗ ಪತ್ರಿಕೆ ವತಿಯಿಂದ ಈ ಗಂಭೀರವಾದ ಅಪಹರಣ/ ಕೊಲೆ ಪ್ರಕರಣದ ಆರೋಪಿ ಪತ್ತೆಗಾಗಿ ಈ ಪ್ರಕರಣವನ್ನು ಮರು ತನಿಖೆಗೆ CBI ಗೆ ಅಥವಾ CID ಗೆ ನೀಡುವಂತೆ ಒತ್ತಾಯಿಸಿ ದೇಶದ ಮಾನ್ಯ ಪ್ರಧಾನ ಮಂತ್ರಿಯವರಿಗೆ, ಕರ್ನಾಟಕದ ಸಿ.ಎಂ ಗೆ,ಗೌರವಾನ್ವಿತ ಮಾನ್ಯ ರಾಜ್ಯಪಾಲರಿಗೆ, ಪೊಲೀಸ್ ಇಲಾಖೆಯ DG and IG ಬೆಂಗಳೂರು ರವರಿಗೆ,IGP Davanagere ರವರಿಗೆ ಮತ್ತು ಜಿಲ್ಲಾಧಿಕಾರಿಗಳು, ಶಿವಮೊಗ್ಗ ರವರಿಗೆ ಮತ್ತು ಜಿಲ್ಲಾರಕ್ಷಣಾಧಿಕಾರಿಗಳು ಶಿವಮೊಗ್ಗ ರವರಿಗೆ ಸೂಕ್ತವಾದ ದಾಖಲೆಗಳೊಂಧಿಗೆ ವಿವರವಾದ ಪತ್ರವನ್ನು ಸದ್ಯದಲ್ಲಿಯೇ ಬರೆದು ಒತ್ತಾಯಿಸಲಾಗುವುದು.
ಈ ಪ್ರಕರಣದ ಸಂಪೂರ್ಣ ಕಡತದ ದಾಖಲೆಗಳು ನನ್ನ ಹತ್ತಿರ ಇದ್ದು, ಅದನ್ನ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಹಲವು ಅಂಶಗಳು ಪತ್ತೆಯಾಗಿವೆ. ಆರೋಪಿಗೆ ಪೋನ್ ಮಾಡಿದ ಮೊಬೈಲ್ ಕಳೆದು ಹೋಗುತ್ತದೆ. ಆತ ಮೊಬೈಲ್ ಕಳೆದು ಹೋದ ಬಗ್ಗೆ ಜಯನಗರ ಠಾಣೆಗೆ ದೂರು ನೀಡಿದ್ದು ಯಾವಾಗ, ಈತ ಮೃತನ ಜೊತೆಗೆ ಮಾತನಾಡಿದ್ದು ಯಾವಾಗ ಇವೆಲ್ಲ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ಅಪಹರಣ ಕೊಲೆ ಏತಕ್ಕಾಗಿ ನಡೆಯಿತು ಆರೋಪಿಗಳ ಉದ್ದೇಶ ಏನು ಎಂಬುದು ತನಿಖೆಯಲ್ಲಿ ಗೊತ್ತಾಗಲಿಲ್ಲ. ಕಾರು ತಡೆದು ಕಾರಿನ ಹತ್ತಿರ ಗಲಾಟೆ ಮಾಡುವ ಸಂದರ್ಭದಲ್ಲಿ ಮೂರು ಜನರೋಂಧಿಗೆ ಜಗಳ ನಡೆಯುತ್ತಿತ್ತು ಕೂಗಾಟ ಚೀರಾಟ ಕೇಳಿದ ನೋಡಿದ ಪ್ರತ್ಯಕ್ಷ ಸಾಕ್ಷಿಗಳು ಇದ್ದರೂ ಕೂಡ ಆರೋಪಿಗಳ ಸುಳಿವು ದೊರೆತಿಲ್ಲ ಎಂದು ತನಿಖಾಧಿಕಾರಿ ಕೈ ತೊಳೆದು ಕೊಂಡಿದ್ದಾರೆ.
ನಮ್ಮ ಪತ್ರಿಕೆ ವತಿಯಿಂದ ತನಿಖೆ ಚುರುಕುಗೊಂಡಿದೆ. ಮಹಜರ್ ನಲ್ಲಿ ಏನಿದೆ...ವಶಪಡಿಸಿಕೊಂಡ ವಸ್ತುಗಳು ಯಾವುವು....ಎಂಬುದನ್ನು ಮುಂದಿನ ತನಿಖಾ ವರದಿಯಲ್ಲಿ ನೋಡಿ....
Leave a Comment