ಶಿವಮೊಗ್ಗ ಮೆಸ್ಕಾಂ ಉಪವಿಭಾಗ ಮತ್ತು ಶಾಖಾ ಕಛೇರಿ ಮಟ್ಟದಲ್ಲಿ ವಿವಿಧ ವರ್ಗದ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರುಗಳ ನಾಮನಿರ್ದೇಶನ ಯಾರ್ಯಾರು ಅಂತೀರಾ ನೋಡಿ....
ಶಿವರಾಜ್ ಬಿ.ಸಿ. ಬಿನ್ ಚಂದ್ರಪ್ಪ, ವಿನೋವನಗರ ಕಲ್ಲಳ್ಳಿ ಶಿವಮೊಗ್ಗ ಇವರನ್ನು ಶಿವಮೊಗ್ಗ ನಗರ ಉಪವಿಭಾಗದ-2 , ವಾಣಿಜ್ಯ ಮತ್ತು ಕೈಗಾರಿಕಾ ಪ್ರತಿನಿಧಿ ಯಾಗಿ ನೇಮಕ ಮಾಡಲಾಗಿದೆ.
ಶಿವಮೊಗ್ಗ:ಮಾನ್ಯ ಇಂಧನ ಸಚಿವರು, ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸಿ ಪರಿಹಾರ
ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಪವಿಭಾಗ ಹಾಗೂ ಶಾಖಾ ಕಛೇರಿ ಮಟ್ಟದಲ್ಲಿ
ಗ್ರಾಹಕರ ಸಲಹಾ ಸಮಿತಿಗಳ ರಚನೆಯು ಅವಶ್ಯವಾಗಿದ್ದು, ಈ ಸಂಬಂಧ ಕ್ರಮ ವಹಿಸುವಂತೆ ಸೂಚಿಸಿರುತ್ತಾರೆ.
ಬಿ.ಎ.ಸುರೇಶ್ ಶೆಟ್ಟಿ ಬಿನ್ ಆನಂದಶೆಟ್ಟಿ ಕುವೆಂಪುರಸ್ತೆ,ಶಿವಮೊಗ್ಗ ಇವರನ್ನು ನಗರ ಉಪವಿಭಾಗ-1 ರ ಹಿಂದುಳಿದ ವರ್ಗಗಳ ಪ್ರತಿನಿಧಿ ಯಾಗಿ ನೇಮಕ ಮಾಡಲಾಗಿದೆ.
ಈ ಹಿನ್ನಲೆಯಲ್ಲಿ ಉಲ್ಲೇಖ (1) & (5) ರ ಸರ್ಕಾರಿ ಆದೇಶದಲ್ಲಿ ರಾಜ್ಯದ ಎಲ್ಲಾ ವಿತರಣಾ ಕಂಪೆನಿಗಳಲ್ಲಿ ವಿದ್ಯುತ್
ಸಂಬಂಧಿತ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ವಿಧಾನ ಸಭಾ
ಕ್ಷೇತ್ರಗಳ ವ್ಯಾಪ್ತಿಯ ಉಪವಿಭಾಗ ಹಾಗೂ ಶಾಖಾ ಕಛೇರಿಗಳ ಮಟ್ಟದಲ್ಲಿ ಈ ಕೆಳಕಂಡ ಗ್ರಾಹಕ ವರ್ಗಗಳ
ಪ್ರತಿನಿಧಿಗಳನ್ನೊಳಗೊಂಡಂತೆ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರುಗಳ ನಾಮನಿರ್ದೇಶನವನ್ನು ಸಂಬಂಧಿತ ಮಾನ್ಯ
ಜಿಲ್ಲಾ ಉಸ್ತುವಾರಿ ಸಚಿವರಿಂದ ಪಡೆದು ವಿದ್ಯುತ್ ಸರಬರಾಜು ಕಂಪೆನಿಗಳ ನಿಗಮ ಕಛೇರಿ ಮಟ್ಟದಲ್ಲಿ ಗ್ರಾಹಕ ಸಲಹಾ
ಸಮಿತಿಯನ್ನು ರಚಿಸಲು ಆದೇಶಿಸಿದೆ.
ಅದರಂತೆ, ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವ್ಯಾಪ್ತಿಗೆ ಒಳಪಟ್ಟಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರ
ವ್ಯಾಪ್ತಿಯ ಉಪವಿಭಾಗ ಮತ್ತು ಶಾಖಾ ಕಛೇರಿ ಮಟ್ಟದಲ್ಲಿ ವಿವಿಧ ವರ್ಗದ ಸದಸ್ಯರುಗಳ ನಾಮನಿರ್ದೇಶನವನ್ನು ಮಾನ್ಯ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದು, ಸದರಿ
ಪ್ರಸ್ತಾವನೆಯು ಉಲ್ಲೇಖ (6) ರ ಪತ್ರದಲ್ಲಿ ಈ ಕಛೇರಿಗೆ ಸಲ್ಲಿಕೆಯಾಗಿರುತ್ತದೆ.
ಅದರಂತೆ ಈ ಕೆಳಕಂಡ ಆದೇಶ :
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವ್ಯಾಪ್ತಿಗೆ ಬರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ
ಉಪವಿಭಾಗ ಮತ್ತು ಶಾಖಾ ಕಛೇರಿ ಮಟ್ಟದಲ್ಲಿ ಈ ಕೆಳಕಂಡ ಸದಸ್ಯರುಗಳನ್ನೊಳಗೊಂಡ ಗ್ರಾಹಕರ ಸಲಹಾ ಸಮಿತಿಯನ್ನು
ಷರತ್ತು ಹಾಗೂ ಸಮಿತಿಯ ಕಾರ್ಯನಿರ್ವಹಣೆಯ ಮಾರ್ಗಸೂಚಿಗಳಿಗೆ ಒಳಪಟ್ಟು ಕೂಡಲೇ ಜಾರಿಗೆ ಬರುವಂತೆ ಹಾಗೂಮುಂದಿನ ಆದೇಶದವರೆಗೆ ರಚಿಸಲಾಗಿದೆ.

Leave a Comment