ತೀರ್ಥಹಳ್ಳಿ ದಬ್ಬಣಗದ್ದೆ ಬ್ಲಾಕ್-2 ಮರಳು ಕ್ವಾರೆಯಲ್ಲಿ ಮರಳು ಗಣಿಗಾರಿಕೆ ಸಾಗಾಣಿಕೆ ನಡೆಯದಂತೆ ಕ್ರಮ ಕೈಗೊಳ್ಳಿ:ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಹಿರಿಯ ಭೂ ವಿಜ್ಞಾನಿಗಳು!!
ತೀರ್ಥಹಳ್ಳಿ/ಶಿವಮೊಗ್ಗ: ತೀರ್ಥಹಳ್ಳಿ ದಬ್ಬಣಗದ್ದೆ ಬ್ಲಾಕ್ -02 ಸ.ನಂ- 17 ರಲ್ಲಿ ಮರಳು ಕ್ವಾರೆಯನ್ನು ವೇಣುಗೋಪಾಲ್ ಭದ್ರಾವತಿ ಇವರಿಗೆ ದಿನಾಂಕ 14-3-2024 ರಿಂದ 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು,ಮರಳು ಗುತ್ತಿಗೆ ಸಂಖ್ಯೆ 38 ಮಂಜೂರು ಆಗಿರುತ್ತದೆ ಇದೀಗ ಮರಳು ಸಾಗಾಣಿಕೆ ಮತ್ತು ಮರಳು ಎತ್ತುವಳಿಗೆ ಸ್ಥಗಿತ ಕ್ಕೆ ಗುತ್ತಿಗೆದಾರ ವೇಣುಗೋಪಾಲ್ ಗೆ ನೋಟಿಸ್ ನೀಡಲಾಗಿದೆ.ಮರಳು ಸಾಗಾಣಿಕೆ ಮತ್ತು ಮರಳು ಎತ್ತುವಳಿಗೆ ಸ್ಥಗಿತ ಕ್ಕೆ ಗುತ್ತಿಗೆದಾರ ವೇಣುಗೋಪಾಲ್ ಗೆ ನೋಟಿಸ್ ನೀಡಲಾಗಿದೆ.
ಗುತ್ತಿಗೆದಾರರು ಖನಿಜ ಸಾಗಾಣಿಕೆ ಪರವಾನಿಗೆ ಪಡೆಯದೇ ಗುತ್ತಿಗೆ ಪ್ರದೇಶ ದಿಂದ ಮರಳನ್ನು ಎತ್ತುವಳಿ ಮಾಡಿ ಸ್ಟಾಕ್ ಯಾರ್ಡ್ ಗೆ ಹಾಗೂ ನೇರವಾಗಿ ಸಾಗಾಣಿಕೆ ಮಾಡಲಾಗಿದೆ.ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದಲೇ ಗುತ್ತಿಗೆಯಲ್ಲಿ ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ .ಕೂಡಲೇ ಗುತ್ತಿಗೆಯಲ್ಲಿ ಮರಳು ಸಾಗಾಣಿಕೆ ವಾಹನಗಳನ್ನು ನದಿ ಪಾತ್ರದಿಂದ ಸಂಪೂರ್ಣವಾಗಿ ತೆರವುಗೋಳಿಸಿ ಮರಳು ಎತ್ತುವಳಿ ಮತ್ತು ಸಾಗಾಣಿಕೆ ಯನ್ನು ಸಂಪೂರ್ಣವಾಗಿ ಸ್ಥಗಿತಗೋಳಿಸಲು ಹಾಗೂ ಸ್ಟಾಕ್ ಯಾರ್ಡ್ನಲ್ಲಿ ದಾಸ್ತಾನು ಮಾಡಿರುವ ಮರಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಸೂಚಿಸಿದೆ.ಭೂ ವಿಜ್ಞಾನಿಗಳು ಪ್ರಿಯಾ ಆರ್. ದೊಡ್ಡಗೌಡರ ಇವರಿಗೆ ನೋಟಿಸ್ ಪ್ರತಿಯನ್ನು ನೀಡಿ ಸದರಿ ಮರಳು ಗಣಿಗಾರಿಕೆ ಗುತ್ತಿಗೆಯಲ್ಲಿ ಮರಳು ಗಣಿಗಾರಿಕೆ ಸಾಗಾಣಿಕೆ ನಡೆಯದಂತೆ ಸಂಪೂರ್ಣವಾಗಿ ಸ್ಥಗಿತ ಗೊಳಿಸಲು ಸೂಚಿಸಲಾಗಿದೆ.
ತಪ್ಪಿದಲ್ಲಿ ಗುತ್ತಿಗೆಯನ್ನು ರದ್ದುಪಡಿಸಲು ಜಿಲ್ಲಾ ಮರಳು ಸಮಿತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಶಿವಮೊಗ್ಗ ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭದ್ರಾವತಿ ಗುತ್ತಿಗೆದಾರ ವೇಣುಗೋಪಾಲ್ ನೋಟಿಸ್ ನೀಡಿ 7 ದಿನದೊಳಗೆ ಉತ್ತರಿಸಲು ಸೂಚಿಸಿದ್ದಾರೆ.
ಸದರಿ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ಪರವಾನಿಗೆಯನ್ನು ಪಡೆಯದೇ ಟಿಪ್ಪರ್ ವಾಹನ ಗಳಿಗೆ ಮರಳು ತುಂಬಿಸಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಟಾಕ್ ಯಾರ್ಡ್ ಮತ್ತು ಮರಳು ಗುತ್ತಿಗೆ ಪ್ರದೇಶಕ್ಕೆ ಬೇಟಿ ನೀಡಿ ಗಣಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಗುತ್ತಿಗೆಯಲ್ಲಿನ ನಿಯಮ ನಿಬಂಧನೆ ಉಲ್ಲಂಘನೆ ಆಗಿರುವುದು ಕಂಡು ಬಂದಿರುತ್ತದೆ.
ತಹಶಿಲ್ದಾರರು ತೀರ್ಥಹಳ್ಳಿ ತಾಲ್ಲೂಕು ಇವರಿಗೆ ನೋಟಿಸ್ ಪ್ರತಿಯನ್ನು ರವಾನಿಸಿ,ಸದರಿ ದಬ್ಬಣಗದ್ದೆ ಬ್ಲಾಕ್-2 ಪ್ರದೇಶದಲ್ಲಿ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ನಡೆಯದಂತೆ ಕ್ರಮ ವಹಿಸಲು ತನ್ಮ ಅಧೀನ ಅಧಿಕಾರಿಗಳಿಗೆ ನಿರ್ದೆಶನ ನೀಡುವಂತೆ ತಿಳಿಸಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಉಪ ನೀರಿಕ್ಷಕರು ಇವರಿಗೆ ದಬ್ಬಣಗದ್ದೆ ಮರಳು ಬ್ಲಾಕ್ ನಲ್ಲಿ ಅಥವಾ ಸ್ಟಾಕ್ ಯಾರ್ಡ್ ನಲ್ಲಿ ಯಾವುದೇವವಾಹನ ಯಂತ್ರೋಪಕರಣಗಳು ಮರಳು ಗಣಿಗಾರಿಕೆ ಸಾಗಾಣಿಕೆ ಚಟುವಟಿಕೆ ತೊಡಗಿರುವುದು ಕಂಡು ಬಂದಲ್ಲಿ ಅಂತಹ ವಾಹನಗಳನ್ನು ಜಪ್ತಿ ಮಾಡಿ ಸೂಕ್ತವಾದ ಕಾನೂನು ಕ್ರಮ ಜರುಗಿಸಲು ತಿಳಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ
ಶಿವಮೊಗ್ಗ ಹಿರಿಯ ಭೂ ವಿಜ್ಞಾನಿಗಳ ತೆಗೆದುಕೊಂಡ ಕ್ರಮ ಸ್ವಾಗತರ್ಹವಾಗಿದ್ದು, ಇದೇ ರೀತಿಯಲ್ಲಿ ಮತ್ತೆ ನಿಯಮ ಬಾಹಿರ ವಾಗಿ ಮರಳು ಸಾಗಾಣಿಕೆ ಮಾಡಿದಲ್ಲಿ ಗುತ್ತಿಗೆದಾರ ವೇಣುಗೋಪಾಲ್ ವಿರುದ್ದ ಸೂಕ್ತವಾದ ಕಾನೂನು ಕ್ರಮಕ್ಕೆ ಮುಂದಾಗಬೇಕು ಎನ್ನುವುದು ದೂರುದಾರರ ಮನವಿ ಆಗಿರುತ್ತದೆ.
ಜಿಲ್ಲಾ ಮರಳು ಸಮಿತಿಯ ಸಭೆಯಲ್ಲಿ ಈ ಪ್ರಕರಣವನ್ನು ಮಂಡಿಸಿ ನಿಯಾಮನುಸಾರ ಕ್ರಮ ಜರುಗಿಸಿ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಹಿರಿಯ ಭೂವಿಜ್ಞಾನಿಗಳು ತಿಳಿಸಿದ್ದಾರೆ. ಮುಂದೇನಾಗುವುದು ಕಾದು ನೋಡಬೇಕು....

Leave a Comment