*ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ದೇವರ ಪ್ರಸಾದವಿದ್ದಂತೆ*: ಸಚಿವ ಮಧು ಬಂಗಾರಪ್ಪ
ಕುಮಟಾ ತಾಲ್ಲೂಕಿನ ಕಾಗಾಲ ಗ್ರಾಮದ ಐತಿಹಾಸಿಕ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸ್ವರ್ಣ ಸಂಭ್ರಮಾಚರಣೆಯಲ್ಲಿ ಶಿಕ್ಷಣ ಸಚಿವ ಎಸ್, ಮಧು ಬಂಗಾರಪ್ಪ ಭಾಗವಹಿಸಿ ಮಾತನಾಡುತ್ತಾ.ಸುಮಾರು 154 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಶಾಲೆ, ಸ್ವಾತಂತ್ರ್ಯ ಪೂರ್ವದಿಂದ ಇಂದಿನ ಪೀಳಿಗೆಯವರೆಗೆ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿರುವುದು ಒಂದು ಮಹೋತ್ತರ ಸಾಧನೆಯಾಗಿದೆ. ಈ ಶಾಲೆಗೆ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ ಪ್ರತಿಯೊಬ್ಬರಿಗೂ ನಾನು ಮನಃಪೂರ್ವಕ ನಮನ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಲೆಗೆ ಹೊಸ ಕೊಠಡಿಗಳ ಅಗತ್ಯವಿರುವ ವಿಷಯವನ್ನು ಗಮನಿಸಿ, ಅವುಗಳನ್ನು ಶೀಘ್ರದಲ್ಲಿ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿ. ಇದೇ ವೇಳೆ, ಮುಂಬರುವ ದಿನಗಳಲ್ಲಿ ಈ ಶಾಲೆಯನ್ನು ದ್ವಿಭಾಷಾ ಶಾಲೆಯಾಗಿ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದೆಂದರು
ಶಾಲೆಯಲ್ಲಿ ಹೆಚ್ಚಿನ ದಾಖಲಾತಿಯನ್ನು ಉತ್ತೇಜಿಸುವಂತೆ ಮತ್ತು ಮಕ್ಕಳು ಪ್ರತಿದಿನ ಹಾಜರಾಗುವಂತೆ ವಿಶೇಷ ಕಾಳಜಿ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ.
ಇದೇ ಸಂದರ್ಭದಲ್ಲಿ ಪೂಜ್ಯ ತಂದೆಯವರಾದ, ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಬಂಗಾರಪ್ಪ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು. ಹಾಗೆಯೇ, ಮಾನ್ಯ, ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಶಿಕ್ಷಣ ಇಲಾಖೆಗೆ ಹಲವಾರು ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಮಕ್ಕಳಿಗೆ ತಲುಪಿಸುವಲ್ಲಿ ನಡೆಸುತ್ತಿರುವ ಸಕಲ ಪ್ರಯತ್ನಗಳನ್ನು ಸ್ಮರಿಸಿ, ಈ ಮೂಲಕ ಮಕ್ಕಳಿಗೆ ದೊರಕುತ್ತಿರುವ ಸೌಲಭ್ಯಗಳು ನನಗೆ ದೇವರ ಪ್ರಸಾದದಂತೆ ಎಂದರು
ಈ ಸಂದರ್ಭದಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ್ ಕೆ ಶೆಟ್ಟಿ, ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ಟಿ ನಾಯ್ಕ, ಕಾಗಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ವೆಂಕಟೇಶ್ ಪಟಗಾರ, ಕಾಗಾಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಪ್ರಶಾಂತ ಶೆಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ಕುಮಟಾ ವಕೀಲ ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ನಾಯ್ಕ, ಶ್ರೀ ಜಿ ಕೆ ಪಟಗಾರ, ಶ್ರೀಮತಿ ಅಕ್ಷತಾ, ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಾಹ್ನವಿ ಹೆಗ್ಡೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment