ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಂಸಿಯ ಪ್ರಿಯದರ್ಶಿನಿ. ಎಸ್ ಅವರಿಗೆ ಮರುಮಾಪನ ಮೌಲ್ಯದಲ್ಲಿ 609 ಅಂಕ: ಅಭಿನಂದನೆ
ಶಿವಮೊಗ್ಗ: ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶ್ರೀರಾಧಾ ಶಶಿಧರ ಇವರ ಮಗಳು ಪ್ರಿಯದರ್ಶಿನಿ. ಎಸ್ ಇವರು ಕುಂಸಿಯ ಮಂಜುನಾಥ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಒಟ್ಟು 602 ಅಂಕ ಪಡೆದಿದ್ದರು. ಇದೀಗ ಮರು ಮಾಪನ ಮೌಲ್ಯದಲ್ಲಿ 7 ಅಂಕ ಹೆಚ್ಚಿಗೆ ಪಡೆದು, ಒಟ್ಟು 609 ಅಂಕ 97.28% ಪಡೆದು, ಶಾಲೆಗೆ ಮತ್ತು ಇಡೀ ಕುಂಸಿಗೆ ಹೋಬಳಿಗೆ ಕೀರ್ತಿ ತಂದಿರುತ್ತಾಳೆ.
ಕುಂಸಿಯ ಮಂಜುನಾಥ ಪ್ರೌಢಶಾಲೆಯ ಪ್ರಾಂಶುಪಾಲರು,ಆಡಳಿತ ವರ್ಗ ಮತ್ತು ಉಪನ್ಯಾಸಕರ ತಂಡ ಪ್ರಿಯದರ್ಶಿನಿ. ಎಸ್ ಇವರ ಸಾಧನೆ ಕಂಡು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Leave a Comment