ಶಿವಮೊಗ್ಗ ಪತ್ರಕರ್ತರಿಗೆ KWJV ಸದಸ್ಯರಿಗೆ ಬಂಪರ್ ಕೊಡುಗೆ ಏನಂತಿರಾ? ನೋಡಿ...

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಸಂಪಾದಕರಾಗಿ, ವರಧಿಗಾರರಾಗಿ, ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ KWJV ಶಿವಮೊಗ್ಗ ಘಟಕದ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ ರವರು ಬಂಪರ್  ಕೊಡುಗೆ ನೀಡಿದ್ದಾರೆ.ಇಂದು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಅರ್ಜಿಯನ್ನು ಸಲ್ಲಿಸಲು ಆಹ್ವಾನವನ್ನು ನೀಡಿದ್ದಾರೆ.
ಈ ಬಂಪರ್ ಕೊಡುಗೆ ಯೋಜನೆ ಏನಂತೀರಾ ನೋಡಿ.,.Star Health Personal Accident individual insurance policy, Sum insured 5 lakhs ....ಅಪಘಾತದಲ್ಲಿ ಸದಸ್ಯರು ಮೃತಪಟ್ಟಲ್ಲಿ ಫ್ಯಾಮಿಲಿ ಗೆ 5 ಲಕ್ಷ ಸಹಾಯ ಸಿಗುತ್ತದೆ. ಪಾಲಿಸಿ ಹಣ ತಕ್ಷಣ ಸಿಗುತ್ತದೆ. ಪತ್ರಕರ್ತರ ಯಾವುದೇ ಸಂಘಟನೆ ಮಾಡದಿರುವ ಕೆಲಸವನ್ನು kwjv ಜಿಲ್ಲಾದ್ಯಕ್ಷರು ಮಾಡುತ್ತಿದ್ದಾರೆ. ಮಾಹಿತಿಯನ್ನು ಒಂದು ಪೋಟೋ ದಾಖಲೆ ಸಮೇತ ಸಲ್ಲಿಸುವಂತೆ ಈಗಾಗಲೇ ತಿಳಿಸಿದ್ದಾರೆ. 

ಈ ಯೋಜನೆ KWJV ಶಿವಮೊಗ್ಗ ಘಟಕದಿಂದ ಐ.ಡಿ ಕಾರ್ಡ್ ಪಡೆದ ಪಧಾದಿಕಾರಿಗಳು ಮತ್ತು ಸದಸ್ಯರಿಗೆ ಮಾತ್ರ ಅನ್ವಯಿಸುತ್ತದೆ. ಹಂತ ಹಂತವಾಗಿ ಎಲ್ಲಾ ಸದಸ್ಯರಿಗೂ ಈ ಯೋಜನೆ ಲಭ್ಯವಾಗಲಿದೆ. ಯೋಜನೆ ಉಚಿತವಾಗಿರುತ್ತದೆ. ಸದಸ್ಯರು ಹಣ ಪಾವತಿಸುವಂತಿಲ್ಲ. Documents charges ರೂ.100/- ಪಡೆದು KWJV ಶಿವಮೊಗ್ಗ ದಿಂದ ನೀಡಲಾಗುತ್ತದೆ.

ಈ  ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ನಮ್ಮ KWJV ರಾಜ್ಯಾದ್ಯಕ್ಷರಾದ  ಮಲ್ಲಿಕಾರ್ಜುನ ಬಂಗ್ಲೆಯವರು ಬರಲಿದ್ದಾರೆ. ಅವರಿಂದ insurance ಪಾಲಿಸಿಯನ್ನು ನಮ್ಮ ಸದಸ್ಯರಿಗೆ ಕೊಡಿಸಲು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ.ಇನ್ನು ಕಾರ್ಯಕ್ರಮದ ದಿನಾಂಕ ನಿಗಧಿ ಆಗಿಲ್ಲ. ಅವರು ಯಾವಾಗ ದಿನಾಂಕ ನೀಡುತ್ತಾರೆ. ಅಂದು ಉಚಿತ ಪಾಲಿಸಿಯನ್ನು ವಿತರಣೆ ಮಾಡಲು ನಿರ್ದರಿಸಲಾಗಿದೆ.

ಇನ್ನು ಹಲವಾರು ಯೋಜನೆಯನ್ನು ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ಸಿಗಲಿದೆ. ದೀಪಾವಳಿ ಹಬ್ಬಕ್ಕೆ ಎಲ್ಲಾ ಸದಸ್ಯರಿಗೆ ಸ್ವೀಟ್ ಬಾಕ್ಸ್ ಜೊತೆಯಲ್ಲಿ ಪಟಾಕಿ  ಗಿಪ್ಟ್ ಬಾಕ್ಸ್ ನೀಡಲು ಸಂಘದ ವತಿಯಿಂದ ನಿರ್ಧರಿಸಲಾಗಿದೆ. ಈ ಎರಡೂ ಯೋಜನೆಗಳನ್ನು ಇಂದಿನಿಂದಲೇ ಜಾರಿಗೆ ಬರಲಿದೆ‌. ಈ ಎರಡೂ ಯೋಜನೆಯ ಲಾಭ ಪಡೆಯಲು ಪತ್ರಕರ್ತರು ಕೇವಲ 100/- ರೂ Documents charge ನೀಡಿ KWJV ಶಿವಮೊಗ್ಗ ಘಟಕದ ಕಚೇರಿಯಲ್ಲಿ ನೊಂದಾಯಿಸಿ ಕೊಳ್ಳಲು KWJV ಶಿವಮೊಗ್ಗ ಘಟಕದ ಸದಸ್ಯರಿಗೆ ಮಾಹಿತಿಯನ್ನು ನೀಡಲಾಗಿದೆ.

  ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ಈ ಯೋಜನೆಯನ್ನು ಘೋಷಣೆ ಮಾಡಿರುವುದಕ್ಕೆ ಪತ್ರಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.ಜನಪ್ರತಿನಿಧಿಗಳು, ಸಾರ್ವಜನಿಕ ವಲಯದಲ್ಲಿ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. 

ಮೇಲ್ಕಂಡ ಯೋಜನೆಗಳ ಬಗ್ಗೆ ಪತ್ರಕರ್ತರ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಮುಂದೆ ಸಹ ಇನ್ನು ಹಲವಾರು ಯೋಜನೆಯನ್ನು ಪತ್ರಕರ್ತರಿಗೆ ಸಿಗಲಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.