ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಅವರು ಬರೆದ ಪತ್ರಕ್ಕೆ ಆಕ್ಷೇಪ-ವಿರೋಧ: ಪ್ರತಿಭಟನೆಗೆ ನಿರ್ಧಾರ

ಶಿವಮೊಗ್ಗ:  ಏಪ್ರಿಲ್ 24 ರಂದು ಕುವೆಂಪು ರಂಗಮಂದಿರದಲ್ಲಿ ಡಾ|| ರಾಜ್‌ಕುಮಾರ್ ಜನ್ಮ ದಿನಾಚರಣಿ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವಂತೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಿಗೆ  ಶಿವಮೊಗ್ಗ ವಾರ್ತಾಧಿಕಾರಿ ಪತ್ರ ಬರೆದು ವಿನಂತಿ ಮಾಡಿರುವುದು ಖಂಡನೀಯ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ವ್ಯಾಪಕ ವಿರೋಧ ವ್ಯಕ್ತಪಡಿಸಲಾಗಿದೆ.ಅಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಅದ್ಯಕ್ಷರಿಗೆ ಘೇರಾವ್ ಮಾಡಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ,ಶಿವಮೊಗ್ಗ ಘಟಕದ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ ತಿಳಿಸಿದ್ದಾರೆ.

 ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅದ್ಯಕ್ಷರ ಮೇಲೆ ಈಗಾಗಲೇ ಅನೇಕ ಆರೋಪಗಳನ್ನು ಮಾಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ನಮ್ಮ ದೂರನ್ನು ಸ್ವೀಕರಿಸಿದ ನಂತರ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರ ವಿರುದ್ದ ತನಿಖೆಗೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶ ರಿಂದ ತನಿಖೆ ಪ್ರಾರಂಭವಾಗಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಮಾರುತಿ ಅವರು ಪತ್ರ ಬರೆದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರನ್ನು ಮುಖ್ಯ ಅತಿಥಿಗಳಾಗಿ ಆಗಮಿಸುವಂತೇ ಸರ್ಕಾರದ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೆ KWJV ಶಿವಮೊಗ್ಗ ಘಟಕದ ವಿರೋಧ ಇದೆ. 

ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಪ್ರೆಸ್ ಟ್ರಸ್ಟ್ ಅಧ್ಯಕ್ಷರನ್ನು ಕಾರ್ಯಕ್ರಮದಿಂದ ಕೈ ಬಿಡಬೇಕು ಎನ್ನುವುದು ನಮ್ಮ ವಿನಂತಿಯಾಗಿದೆ.

ಜಿಲ್ಲಾಧಿಕಾರಿಗಳು ಉಪಸ್ಥಿತಿ ಇರುವ ಕಾರ್ಯಕ್ರಮ ದಲ್ಲಿ ಹಲವು ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅದ್ಯಕ್ಷ  ಸ್ಟೇಜ್ ಮೇಲೆ ಮುಖ್ಯ ಅತಿಥಿಯಾಗಿ ಇರುವುದು ನಗೆಪಾಟಿಲಿಗೆ ಕಾರಣವಾಗಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಸಿಕೊಡಬೇಕಾಗಿ ವಾರ್ತಾಧಿಕಾರಿ ಮಾರುತಿ ಪತ್ರ ಬರೆದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ವಾರ್ತಾಧಿಕಾರಿ ಮಾರುತಿ ಇವರನ್ನು ಕೂಡಲೇ ವರ್ಗಾವಣೆಯನ್ನು ಮಾಡಬೇಕು.

ಹಿರಿಯ ಸಹಾಯಕ ನಿರ್ದೇಶಕರು (ಹೆ.ಪ್ರ)
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಶಿವಮೊಗ್ಗ  ವಾರ್ತಾಧಿಕಾರಿ ಮಾರುತಿ 15 ವರ್ಷದಿಂದ ಶಿವಮೊಗ್ಗ ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇದುವರೆಗೂ ವರ್ಗಾವಣೆ ಗೊಂಡಿಲ್ಲ. ವಾರ್ತಾಧಿಕಾರಿ ಮಾರುತಿ ಮೇಲೆ ಸಹ ಅನೇಕ ಆರೋಪಗಳನ್ನು ಮಾಡಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

 ವಾರ್ತಾಧಿಕಾರಿ ಮಾರುತಿ ಇವರು ಪ್ರೆಸ್‌ ಟ್ರಸ್ಟ್ ಅಧ್ಯಕ್ಷರಿಗೆ ಬರೆದಿರುವ ಪತ್ರಕ್ಕೆ ನಮ್ಮ ವ್ಯಾಪಕ ವಿರೋಧ ಇದೆ. ಕೂಡಲೇ ಪ್ರೆಸ್ ಟ್ರಸ್ಟ್ ಅದ್ಯಕ್ಷರನ್ನು ಕುವೆಂಪು ರಂಗಮಂದಿರ ಕಾರ್ಯಕ್ರಮ ದಿಂದ ದೂರವಿಡಬೇಕು ಎಂದು ವಿನಂತಿಸಲಾಗಿದೆ. ಕಾರ್ಯಕ್ರಮ ದಿಂದ ಕೈ ಬಿಡದಿದ್ದಲ್ಲಿ ಅಂದು ಪ್ರೆಸ್ ಟ್ರಸ್ಟ್ ಅದ್ಯಕ್ಷರಿಗರ ಘೇರಾವ್ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ
ಸಂಪರ್ಕ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ, ಸಿಹಿಮೊಗೆ ಚಿತ್ರ ಸಮಾಜ, ರಾಜ್ಯ ಸರ್ಕಾರಿ
ನೌಕರರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ
ದಿ:24/04/2025 ರಂದು ಸಂಜೆ 6.00ಕ್ಕೆ ಡಾ|| ರಾಜ್ ಕುಮಾರ್‌ರವರ ಜನ್ಮ ದಿನಾಚರಣೆಯನ್ನು ನಗರದ
ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದು, ಡಾ|| ರಾಜ್‌ಕುಮಾರ್‌ರವರ ಭಾವಚಿತ್ರಕ್ಕೆ ಮಾಲಾರ್ಪಣೆ
ಹಾಗೂ ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತಸ ತಂದಿದೆ.

ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಸಂಘಟನೆ ಶುಭ ಹಾರೈಸಿದೆ.



1 ಕಾಮೆಂಟ್‌:

Blogger ನಿಂದ ಸಾಮರ್ಥ್ಯಹೊಂದಿದೆ.