ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲೂ ಸಹ ಸಮಸ್ತ ಹಿಂದೂ ಬಾಂಧವರಿಂದ ಹನುಮನಾಮ ಮತ್ತು ಸ್ತೋತ್ರ ಪಠಣ !
ಶ್ರೀ ಹನುಮಾನ್ ಜಯಂತಿಯ ನಿಮಿತ್ತ ದೇಶಾದ್ಯಂತ 500 ಕಡೆಗಳಲ್ಲಿ ಸಾಮೂಹಿಕ ಗದಾಪೂಜೆ ಸಂಪನ್ನ !
ಯೋಧ್ಯೆಯಲ್ಲಿ ಸ್ಥಾಪನೆಯಾಗಿರುವ ಶ್ರೀರಾಮ ಮಂದಿರವು ಒಂದು ರೀತಿಯಲ್ಲಿ ರಾಮರಾಜ್ಯದ ಪ್ರಾರಂಭವಾಗಿದ್ದು, ಈಗ ರಾಮರಾಜ್ಯವು ಎಲ್ಲೆಡೆ ಸ್ಥಾಪನೆಯಾಗಬೇಕು ಮತ್ತು ಹಿಂದೂ ಸಮಾಜದ ಶೌರ್ಯವು ಜಾಗೃತಗೊಳ್ಳಬೇಕೆಂದು ಏಪ್ರಿಲ್ 12 ಶ್ರೀ ಹನುಮಾನ್ ಜಯಂತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಾನ ವಿಚಾರಧಾರೆಯ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ ಭಕ್ತರ ಸಹಭಾಗಿತ್ವದಲ್ಲಿ ದೇಶಾದ್ಯಂತ 500 ಸ್ಥಳಗಳಲ್ಲಿ ಸಾಮೂಹಿಕ ‘ಗದಾಪೂಜೆ’ ನಡೆಸಲಾಯಿತು.
ಶಿವಮೊಗ್ಗ ಜಿಲ್ಲೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ರಥ ಬೀದಿ ತೀರ್ಥಹಳ್ಳಿ, ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನ, ಶ್ರೀ ಮಾಲಾಂಜನೇಯ ಸ್ವಾಮಿ ದೇವಸ್ಥಾನ,ಮೇಗರವಳ್ಳಿ, ಶ್ರೀ ಹನುಮಂತ ದೇವಸ್ಥಾನ, ಭದ್ರಾವತಿ, ಸಾಗತಾಲ್ಲೂಕಿ ನ ಆನಂದಪುರದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಆಲವಳ್ಳಿ, ದಾವಣಗೆರೆ ಜಿಲ್ಲೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಚಿಕ್ಕನಹಳ್ಳಿ ಹೊಸ ಬಡಾವಣೆ, ನಿಟ್ಟುವಳ್ಳಿ, ಶ್ರೀ ಬಲಾಮುರಿ ಮಹಾಗಣಪತಿ, ಶ್ರೀ ಧ್ಯಾನಾಂಜನೇಯ ಸ್ವಾಮಿ ದೇವಸ್ಥಾನ ಕೆಟಿಜೆ ನಗರ 18ನೇ ಕ್ರಾಸ್ ದಾವಣಗೆರೆ, ವಿನೋಬನಗರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ಆಂಜನೇಯ ಬಡಾವಣೆ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಗದಾಪೂಜೆ ಕಾರ್ಯಕ್ರಮ ನಡೆಸಲಾಯಿತು. ಇದರಲ್ಲಿ ವಿಶೇಷವಾಗಿ ಯುವಕರು ಸ್ವಯಂಪ್ರೇರಿತರಾಗಿ ಭಾಗವಹಿಸಿದರು.
ಈ ಕಾರ್ಯಕ್ರಮಗಳ ಪ್ರಾರಂಭವು ಶಂಖನಾದದಿಂದ ಆಯಿತು. ತದನಂತರ ಸಾಮೂಹಿಕ ಪ್ರಾರ್ಥನೆ, ‘ಗದಾಪೂಜೆ’ ವಿಧಿ, ಶ್ರೀ ಹನುಮಂತನ ಆರತಿ, ಮಾರುತಿ ಸ್ತೋತ್ರ ಪಠಣದ ನಂತರ ‘ಶ್ರೀ ಹನುಮತೇ ನಮಃ’ ಎಂಬ ಸಾಮೂಹಿಕ ನಾಮಜಪವನ್ನು ಮಾಡಲಾಯಿತು. ಜೊತೆಗೆ ‘ರಾಮರಾಜ್ಯದ ಸ್ಥಾಪನೆಗಾಗಿ ಮಾರುತಿರಾಯರ ಗುಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು’ ಎಂಬುದರ ಕುರಿತು ಮಾರ್ಗದರ್ಶನವನ್ನು ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ’ಯನ್ನು ತೆಗೆದುಕೊಳ್ಳಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ಕಳೆದ 3 ವರ್ಷಗಳಿಂದ ಸಾಮೂಹಿಕ ‘ಗದಾಪೂಜಾ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಮತ್ತು ಈ ವರ್ಷವೂ ಹಿಂದುತ್ವನಿಷ್ಠರು ಮತ್ತು ಭಕ್ತರ ಉತ್ತಮ ಸಹಭಾಗಿತ್ವವು ಇದರಲ್ಲಿ ಕಂಡುಬಂತು.
ಈ ‘ಗದಾಪೂಜೆ’ಯ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಮಾತನಾಡಿ, ಮಾರುತಿರಾಯರ ‘ಗದೆ’ ಕೇವಲ ಯುದ್ಧದ ಆಯುಧವಲ್ಲ, ಬದಲಾಗಿ ಅದು ಧರ್ಮರಕ್ಷಣೆಯ ಸಂಕಲ್ಪ, ಅನ್ಯಾಯದ ವಿರುದ್ಧ ನಿಲ್ಲುವುದು ಮತ್ತು ಭಗವಂತನ ಕಾರ್ಯಕ್ಕಾಗಿ ಹಗಲಿರುಳು ಶ್ರಮಿಸುವುದರ ಸಂಕೇತವಾಗಿದೆ. ಇಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ವಿರಾಜಮಾನರಾಗಿದ್ದಾರೆ, ಇದು ಒಂದು ಐತಿಹಾಸಿಕ ಕ್ಷಣ, ಆದರೆ ಶ್ರೀರಾಮನ ಕಾರ್ಯವು ಇನ್ನೂ ಅಪೂರ್ಣವಾಗಿದೆ. ಮಂದಿರವನ್ನು ನಿರ್ಮಿಸಲಾಗಿದೆ, ಈಗ ರಾಮರಾಜ್ಯವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕಾರ್ಯವು ಹನುಮಂತನಂತಹ ಶೌರ್ಯ, ನಿಷ್ಠೆ, ತ್ಯಾಗ ಮತ್ತು ಸಾಮರ್ಥ್ಯವಿಲ್ಲದೆ ಸಾಧ್ಯವಿಲ್ಲ. ಅದಕ್ಕಾಗಿಯೇ ಈ ವರ್ಷವೂ ದೇಶಾದ್ಯಂತ ಗದಾಪೂಜೆಯ ಮೂಲಕ ಹಿಂದೂಗಳಲ್ಲಿನ ಶೌರ್ಯವನ್ನು ಜಾಗೃತಗೊಳಿಸುವ ಮತ್ತು ರಾಮರಾಜ್ಯದ ಕಡೆಗೆ ಸಾಮೂಹಿಕವಾಗಿ ಹೆಜ್ಜೆ ಹಾಕುವ ನಿರ್ಧಾರವನ್ನು ಮಾಡಬೇಕಾಗಿದೆ' ಎಂದರು.
Leave a Comment