ನಮ್ಮ ಪೊಲೀಸ್ ನಮ್ಮ ಹೆಮ್ಮೆ,” “ಎಲ್ಲರಿಗಾಗಿ ಫಿಟ್ ನೆಸ್” ಮತ್ತು “ಮಾದಕ ದ್ರವ್ಯ ಮುಕ್ತ ಕರ್ನಾಟಕ” ಧ್ಯೇಯ ವಾಖ್ಯದೊಂದಿಗೆ ಓಟ..
*ಕರ್ನಾಟಕ ರಾಜ್ಯ ಪೊಲೀಸ್ ಓಟ – 2024 ರ ಯಶಸ್ಸಿನ* ಹಿನ್ನೆಲೆಯಲ್ಲಿ, *2ನೇ ಆವೃತ್ತಿಯ* ಕರ್ನಾಟಕ ರಾಜ್ಯ ಪೊಲೀಸ್ ಓಟವನ್ನು *“ನಮ್ಮ ಪೊಲೀಸ್ ನಮ್ಮ ಹೆಮ್ಮೆ,” “ಎಲ್ಲರಿಗಾಗಿ ಫಿಟ್ ನೆಸ್” ಮತ್ತು “ಮಾದಕ ದ್ರವ್ಯ ಮುಕ್ತ ಕರ್ನಾಟಕ” ಧ್ಯೇಯ ವಾಖ್ಯದೊಂದಿಗೆ* ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ *ದಿನಾಂಕಃ 09-03-2025 ರಂದು ಬೆಳಗ್ಗೆ 06:00 ಗಂಟೆಗೆ* ಶಿವಮೊಗ್ಗ ನಗರದಲ್ಲಿ *ಮಹಿಳೆಯರು ಮತ್ತು ಪುರುಷರಿಗಾಗಿ 5K ಮತ್ತು ಪುರುಷರಿಗಾಗಿ 10 K ಮ್ಯಾರಥಾನ್* ಓಟವನ್ನು ಹಮ್ಮಿಕೊಂಡಿದ್ದು,
*5K ಮ್ಯಾರಥಾನ್ ಓಟವನ್ನು ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭಿಸಿ,* ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮುಖಾಂತರ *ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಾಯ* ಮಾಡಲಾಗುವುದು.
10 K ಮ್ಯಾರಥಾನ್ ಓಟವನ್ನು *ಇದೇ ಮಾರ್ಗದಲ್ಲಿ 2 ಸುತ್ತುಗಳು ಓಡಿ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಮುಕ್ತಾಯ* ಮಾಡಲಾಗುವುದು.
ಸದರಿ ಮ್ಯಾರಥಾನ್ ಓಟದಲ್ಲಿ *ಶಿವಮೊಗ್ಗ ಜಿಲ್ಲಾ ಪೊಲೀಸ್* ನ ಅಧಿಕಾರಿ ಮತ್ತು ಸಿಬ್ಬಂಧಿಗಳು, *ಕೆ.ಎಸ್.ಆರ್.ಪಿ 8ನೇ ಪಡೆಯ* ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು, *ಕೆ.ಎಸ್.ಐ.ಎಸ್.ಎಫ್* ಶಿವಮೊಗ್ಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು, *ರೈಲ್ವೇ ಪೊಲೀಸ್* ಹಾಗೂ *ಯುವಜನ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್ / ಎನ್.ಸಿ.ಸಿ, ಶಿವಮೊಗ್ಗ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳು ವಿಧ್ಯಾರ್ಥಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಇಲಾಖೆಗಳ ಸರ್ಕಾರಿ ನೌಕರರು* ಭಾಗವಹಿಸಲಿದ್ದು, ಇವರೊಂದಿಗೆ ಮ್ಯಾರಥಾನ್ ಓಟದಲ್ಲಿ ಭಾವಗಹಿಸಲು *ಇಚ್ಚೆಯುಳ್ಳ ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರು* ಸಹಾ ಭಾಗವಹಿಸಬಹುದಾಗಿರುತ್ತದೆ. ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ *ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಪುರುಷ ಮತ್ತು ಮಹಿಳಾ ಓಟಗಾರರಿಗೆ, ನಗದು ಬಹುಮಾನ, ಪ್ರಶಂಸನಾ ಪತ್ರ ಮತ್ತು ಪದಕಗಳನ್ನು* ನೀಡಲಾಗುವುದು. ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಇಚ್ಚೆಯುಳ್ಳವರು ಈ ಕೆಳಕಂಡ *ಕ್ಯೂ.ಆರ್ ಕೋಡ್ ಅನ್ನು ಸ್ಕ್ಯಾನ್* ಮಾಡಿ, *ದಿನಾಂಕಃ 08-03-2025 ರಂದು ಮಧ್ಯಾಹ್ನ 02:00 ಗಂಟೆಯ ಒಳಗಾಗಿ ನೋಂದಣಿ* ಮಾಡಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ *ಶ್ರೀ ಸಂತೋಷ್ ಕುಮಾರ್ , ಸಿಪಿಐ* ಶಿವಮೊಗ್ಗ ಸಂಚಾರ ವೃತ್ತ, ಮೊಬೈಲ್ ನಂಬರ್ 9480803309 ಮತ್ತು *ಶ್ರೀ ಸತ್ಯನಾರಾಯಣ್, ಪಿಐ* ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮೊಬೈಲ್ ನಂಬರ್ 9480803332 ಮತ್ತು *ಶಿವಮೊಗ್ಗ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ* ಮೊಬೈಲ್ ನಂಬರ್ 9480803300 ಗೆ ಸಂಪರ್ಕಿಸ ಬಹುದಾಗಿರುತ್ತದೆ.

Leave a Comment