ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದ ಶಿವಮೊಗ್ಗ ಡಿಎಅರ್ ಡಿವೈಎಸ್ಪಿ ಕೃಷ್ಣಮೂರ್ತಿ
ಮೂರ್ತಿ ಟಿ.ಪಿ ಡಿಎಸ್‌ಪಿ ಡಿಎಆರ್ ರವರು ತಾವು ವಾಸವಾಗಿರುವ ಶಿವಮೊಗ್ಗ ಡಿಎಆರ್ ಪೊಲೀಸ್ ವಸತಿ ಗೃಹ
ಕಾವೇರಿ ಬ್ಲಾಕ್ ನಂ-02 ರಲ್ಲಿ ಪಿರಾದಿಯಿಂದ 5000/- ಲಂಚದ ಹಣವನ್ನು ತೆಗೆದುಕೊಂಡಿದ್ದು, ಈ ಸಮಯದಲ್ಲಿ
ಟ್ರ್ಯಾಪ್ ಮಾಡಲಾಗಿರುತ್ತದೆ. ಶಿವಮೊಗ್ಗ ಲೋಕ ಯುಕ್ತ ಬಲೆಗೆ ಬಿದ್ದಿದ್ದಾರೆ.
ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತಸರ್ಕಾರಿ ಅಧಿಕಾರಿಯಾದ ಶ್ರೀ ಕೃಷ್ಣಮೂರ್ತಿ ಟಿ.ಪಿ ಡಿ.ಎಸ್.ಪಿ ಡಿಎಆರ್ ಮತ್ತು ಎ-2 ಶ್ರೀ ರವಿ, ಎ.ಆರ್.ಎಸ್.ಐ,
ಡಿಎಆರ್, ಶಿವಮೊಗ್ಗ ರವರನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ
ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ವೀರಬಸಪ್ಪ ಎಲ್ ಕುಸಲಾಪುರ ರವರು
ಕೈಗೊಂಡಿರುತ್ತಾರೆ.
ಪ್ರಕರಣದ ಹಿನ್ನೆಲೆ;
ಪಿರ್ಯಾದುದಾರರಾದ ಪ್ರಸನ್ನಕುಮಾರ್.ಟಿ.ಎಸ್ ತಂದೆ ಸತೀಶ್ ರಾವ್.ಟಿ.ಎಸ್.35 ವರ್ಷ, ಎ.ಹೆಚ್.ಸಿ 45,
ಡಿ.ಎ.ಆರ್. ಶಿವಮೊಗ್ಗ. ವಾಸ: ತಾಯಿ ಮಡಿಲು, ಮಾದವನಗರ, ತರಿಕೆರೆ ರಸ್ತೆ, ಭದ್ರಾವತಿ ಟೌನ್ ರವರು
ದಿನಾಂಕ:25.03.2025 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ಗಣಕೀಕೃತ ದೂರನ್ನು
ನೀಡಿದ್ದಾರೆ.
ಸದರಿ ದೂರಿನಲ್ಲಿ ದೂರುದಾರರು ಶಿವಮೊಗ್ಗ ಡಿಎಆರ್ ನಲ್ಲಿ ಎಹೆಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಗ್ಗೆ
ಒಂದೂವರೆ ವರ್ಷದಿಂದ ಭದ್ರಾವತಿ ಟೌನ್ ತಾಲ್ಲೂಕು ಕಛೇರಿಯಲ್ಲಿರುವ ಖಜಾನೆಯಲ್ಲಿ ಗಾರ್ಡ್ ಕರ್ತವ್ಯವನ್ನು
ನಿರ್ವಹಿಸುತ್ತಿರುತ್ತಾರೆ. ಸದರಿಯವರಿಗೆ ಟ್ರಸರಿ ಗಾರ್ಡ್ ಕರ್ತವ್ಯದಲ್ಲಿ ಮುಂದುವರೆಯುವ ಸಲುವಾಗಿ ಮತ್ತು ರಜೆ
ಸಂಬಂಧ ಶಿವಮೊಗ್ಗ ಡಿಎಆರ್ ನ ಡಿಎಸ್‌ಪಿ ಯಾಗಿರುವ ಶ್ರೀ ಕೃಷ್ಣಮೂರ್ತಿ ಟಿ.ಪಿ ರವರು 5,000/- ರೂ ಲಂಚದ
ಹಣಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಹಣವನ್ನು ಶ್ರೀ ರವಿ ಎಂ.ಕೆ ಎಆರ್‌ಎಸ್‌ಐ ಡಿಎಆರ್ ಶಿವಮೊಗ್ಗ ರವರಿಗೆ ಲಂಚದ
ಹಣವನ್ನು ನೀಡುವಂತೆ ತಿಳಿಸಿರುತ್ತಾರೆ.
ಈ ಬಗ್ಗೆ ದೂರುದಾರರು ತಮ್ಮ ಮೊಬೈಲ್‌ನಲ್ಲಿ ವಾಯ್ ರೆಕಾರ್ಡ್
ಮಾಡಿಕೊಂಡಿರುತ್ತಾರೆ. ಶ್ರೀ ಎಆರ್‌ಎಸ್‌ಐ ರವಿ ರವರು ಡಿಎಸ್‌ಪಿ ರವರು ಕೇಳಿರುವ ಲಂಚದ ಹಣದ ಬಗ್ಗೆ
ಪಿರಾದಿಯವರೊಂದಿಗೆ ಮಾತಾನಾಡಿದ್ದಾರೆ.
ಈ ಬಗ್ಗೆ ಪಿರಾದಿ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತಾರೆ.
ದೂರುದಾರರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದ ಕಾರಣ ದೂರುದಾರರು ನೀಡಿದ ದೂರಿನ ಮೇರೆಗೆ ಕಲಂ:7(೩)
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988, (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಶ್ರೀ ಮಂಜುನಾಥ ಚೌದರಿ. ಎಂ.ಹೆಚ್. ಪೊಲೀಸ್ ಅಧೀಕ್ಷಕರು,
ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಹಾಗೂ ಶ್ರೀ ಬಿ ಪಿ ಚಂದ್ರಶೇಖರ್. ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ
ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶ್ರೀ ವೀರಬಸಪ್ಪ ಎಲ್ ಕುಸಲಾಪುರ ಪೊಲೀಸ್
ಇನ್ಸ್‌ಪೆಕ್ಟರ್ ರವರು ಕಾರ್ಯಾಚರಣೆ ನಡೆಸಿದ್ದು, ಟ್ರ್ಯಾಪ್ ಕಾಲಕ್ಕೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ
ಪೊಲೀಸ್ ಸಿಬ್ಬಂದಿಯವರಾದ ಶ್ರೀ ಯೋಗೇಶ್ ಸಿ.ಹೆಚ್.ಸಿ, ಶ್ರೀ ಮಂಜುನಾಥ ಎಂ. ಸಿ.ಹೆಚ್.ಸಿ, ಶ್ರೀ ಟೀಕಪ್ಪ
ಸಿ.ಹೆಚ್.ಸಿ, ಶ್ರೀ ಸುರೇಂದ್ರ ಸಿ.ಹೆಚ್.ಸಿ, ಶ್ರೀ ಪ್ರಶಾಂತ್ ಕುಮಾರ್,ಹೆಚ್. ಸಿ.ಪಿ.ಸಿ, ಶ್ರೀ ಬಿ.ಟಿ ಚೆನ್ನೇಶ್, ಸಿ.ಪಿ.ಸಿ ಶ್ರೀ
ದೇವರಾಜ್, ಸಿ.ಪಿ.ಸಿ, ಶ್ರೀ ಅರುಣ್ ಕುಮಾರ್ ಯು.ಬಿ ಸಿ.ಪಿ.ಸಿ, ಶ್ರೀ ಪ್ರಕಾಶ್ ಬಾರಿಮರದ ಸಿಪಿಸಿ, ಶ್ರೀಮತಿ
ಅಂಜಲಿ, ಮ.ಪಿ.ಸಿ, ಶ್ರೀಮತಿ ಚಂದ್ರಿಬಾಯಿ ಮ.ಪಿ.ಸಿ ಶ್ರೀ ಗೋಪಿ ಎ.ಪಿ.ಸಿ, ಶ್ರೀ ಜಯಂತ್ ಎ.ಪಿ.ಸಿ ಮತ್ತು ಶ್ರೀ
ತರುಣ್ ಕುಮಾರ್ ಎಪಿಸಿ, ಶ್ರೀ ಗಂಗಾಧರ ಎ.ಪಿ.ಸಿ ರವರು ಹಾಜರಿರುತ್ತಾರೆ.
Leave a Comment