ತೀರ್ಥಹಳ್ಳಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಮಂದಿರ ಅಧಿವೇಶನ ದೀಪ ಪ್ರಜ್ವಲನೆ ಮೂಲಕ ಸಂಪನ್ನ !

 *ದೇವಸ್ಥಾನಗಳಲ್ಲಿ ಸನಾತನ ಹಿಂದೂ ಧರ್ಮದ ಶಿಕ್ಷಣ ನೀಡುವುದರಿಂದ ಇಡೀ ದೇಶವೇ ಹಿಂದೂ ರಾಷ್ಟ್ರ ವಾಗಲಿದೆ* - ಪೂಜ್ಯ ಮರುಳಸಿದ್ಧ ಶಿವಾಚಾರ್ಯ ಸ್ವಾಮಿ 
ಇವರು ಮಾತನಾಡುತ್ತ ಹಿಂದಿನ ಕಾಲದಲ್ಲಿ ಮಠ ಮಂದಿರಗಳಲ್ಲಿ ಗುರುಕುಲ ಪದ್ಧತಿ ಇತ್ತು ಇಂದು ಮಂದಿರಗಳ ಮೂಲಕ ಧರ್ಮ ರಕ್ಷಣೆ ಆಗಬೇಕಿದೆ, ದೇವಸ್ಥಾನಗಳಲ್ಲಿ ಶಾಸ್ತ್ರೀಯವಾಗಿ ಯಜ್ಞ ಯಾಗ ಮಾಡವುದು, ದೇವಸ್ಥಾನಗಳಲ್ಲಿ ಸನಾತನ ಹಿಂದೂ ಧರ್ಮದ ಶಿಕ್ಷಣ ನೀಡುವುದರಿಂದ ಇಡೀ ದೇಶವೇ ಹಿಂದೂ ರಾಷ್ಟ್ರ ವಾಗಲಿದೆ. ಕರ್ನಾಟಕ ಮಂದಿರ ಮಹಾ ಸಂಘದ ಕಾರ್ಯ ಸಫಲವಾಗಲಿ ಎಂದು ಆಶೀರ್ವಾಚನ ನೀಡಿದರು.

*ತೀರ್ಥಹಳ್ಳಿ :* ಗಾಯಿತ್ರಿ ಮಂದಿರ ಕೊಪ್ಪ ರಸ್ತೆ ತೀರ್ಥಹಳ್ಳಿ ಇಲ್ಲಿ ದಿನಾಂಕ 23.03.2025 ರವಿವಾರದಂದು ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಜಂಟಿ ಆಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮಂದಿರ ಅಧಿವೇಶನದ ಕಾರ್ಯಕ್ರಮವನ್ನು ಶಂಖನಾದ, ವೇದಮಂತ್ರ ಪಠಣೆ, ದೀಪ ಪ್ರಜ್ವಲನೆ ಮೂಲಕ ಪ್ರಾರಂಭ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಶ್ರೀ. ಮೋಹನ್ ಕೆರೋಡಿ, ಶ್ರೀ. ಮಂಜುನಾಥ ಶೆಟ್ಟಿ, ಪೂಜ್ಯ ಮರುಳಸಿದ್ಧಶಿವಾಚಾರ್ಯ ಸ್ವಾಮಿಗಳು, ನ್ಯಾಯವಾದಿಗಳಾದ ಶ್ರೀ. ರಮೇಶ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ್ ಗೌಡ ತಾಲ್ಲೂಕು ಮಟ್ಟದ ಮಂದಿರ ಅಧಿವೇಶನದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
 ದೇವಸ್ಥಾನಗಳು

 *ಅಭಿವೃದ್ಧಿಯಾಗಬೇಕಾದರೆ ಆಡಳಿತ ಮಂಡಳಿಯವರು ವಿಶ್ವಸ್ಥರು ಪುರೋಹಿತರು ಸಂಘಟಿತರಾಗಬೇಕು - ಶ್ರೀ.ಮೋಹನ್ ಕೆರೋಡಿ*

 ಶ್ರೀ ಮೋಹನ್ ಕೆರೋಡಿ ಇವರು ಮಾತನಾಡಿ ದೇವಸ್ಥಾನಗಳು ಅಭಿವೃದ್ಧಿಯಾಗಬೇಕಾದರೆ ಆಡಳಿತ ಮಂಡಳಿಯವರು ವಿಶ್ವಸ್ಥರು ಪುರೋಹಿತರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ,ದೇವಸ್ಥಾನಗಳ ಭೂಮಿ ಆಭರಣ, ಅವ್ಯವಸ್ಥೆ ಆಗದಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು, ದೇವಸ್ಥಾನದ ಬಳಿ ಮಧ್ಯ ಮಾಂಸದ ಅಂಗಡಿಗಳನ್ನು ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು ಸಂಘಟಿತರಾಗಿ ಇದಕ್ಕಾಗಿ ಎಲ್ಲ ದೇವಸ್ಥಾನಗಳು ತಮ್ಮಲ್ಲಿ ಬರುವ ಎಲ್ಲ ಭಕ್ತಾದಿಗಳಿಗೆ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾಗಿದೆ.

  ನ್ಯಾಯವಾದಿ ಶ್ರೀ ಎಂ ಎನ್ ರಮೇಶ್ ಇವರು ಮಾತನಾಡಿ ಸರಕಾರ ದೇವಸ್ಥಾನದ ಹಣ ಬಳಸಿಕೊಳ್ಳುತ್ತಿರುವುದು  ನಮ್ಮ ದುರ್ದೈವವೇ ಆಗಿದೆ, 1950 ರ ಕಾಯ್ದೆ ಹಿಂದೂಗಳಿಗೆ ಯಾವುದೇ ನಿಲುವು ಸಿಗುವುದಿಲ್ಲ ಸರಕಾರ ಹೊಸ ಕಾಯ್ದೆ ತರುವ ವರೆಗೆ ಸನಾತನ ಧರ್ಮ ಸಂಸ್ಕೃತಿ ಉಳಿಸಲು ದೇವಸ್ಥಾನ ಮಂದಿರ ಮಹಾ ಸಂಘದೊಂದಿಗೆ ಸನಾತನ ಹಿಂದೂ ಧರ್ಮ ರಕ್ಷಣೆ ಕಾರ್ಯದಲ್ಲಿ ನಾವೆಲ್ಲರೂ ಒಟ್ಟಾಗಿ ಒಂದಾಗಬೇಕು ಎಂದರು.

ಶ್ರೀ. ಶ್ರೀ ವತ್ಸ ಇವರು ಮಾತನಾಡಿ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿಯವರು ದೇವಸ್ಥಾನಗಳಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಯುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಾಗಿದೆ ಎಲ್ಲಾ ಸಮುದಾಯದವರು ದೇವಸ್ಥಾನಕ್ಕೆ ಬರುವ ಹಾಗೆ ನೋಡಿಕೊಳ್ಳಬೇಕು  ದೇವಸ್ಥಾನಗಳನ್ನು ರಕ್ಷಿಸಲು ಧರ್ಮರಕ್ಷಣೆ ಕಾರ್ಯದಲ್ಲಿ ನಾವು ಒಂದಾಗಬೇಕಿದೆ, ಎಂದು ಉಪಸ್ಥಿತರಿಗೆ ಕರೆ ನೀಡಿದರು.

*ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡಬೇಕಾಗಿದೆ - ಇದಕ್ಕಾಗಿ ಪ್ರತಿಯೊಬ್ಬ ಭಕ್ತನ ಯೋಗದಾನವು ಅತ್ಯವಶ್ಯಕವಾಗಿದೆ - ಶ್ರೀ, ಗುರುಪ್ರಸಾದ್ ಗೌಡ*

ಶ್ರೀ.ಗುರುಪ್ರಸಾದ ಗೌಡ ಇವರು ಕರ್ನಾಟಕ ಮಂದಿರ ಮಹಾಸಂಘದ ಉದ್ದೇಶ ಹಾಗೂ ಇಲ್ಲಿಯ ತನಕ ನಡೆದು ಬಂದ ದಾರಿಯನ್ನು ತಿಳಿಸಿ ಮಾತನಾಡಿದ ಇವರು ದೇವಸ್ಥಾನಗಳ ನಿಧಿಯನ್ನು ಅನ್ಯಧರ್ಮೀಯರಿಗೆ ನೀಡುವುದು, ಸರಕಾರೀಕರಣವಾದ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಸಹಾಯ ಮಾಡದೇ ಇತರ ಧರ್ಮೀಯರ ಪ್ರಾರ್ಥನಾ ಸ್ಥಳಕ್ಕೆ ನೀಡಲಾಗುತ್ತದೆ. ದೇವಸ್ಥಾನಗಳ ಜಮೀನನ್ನು ಕಬಳಿಸುವುದು, ಲೆಕ್ಕವನ್ನಿಡದಿರುವುದು, ಆಭರಣಗಳ ಕಳ್ಳತನ ಇವೆಲ್ಲವುಗಳ ವಿರುದ್ಧ ಮಹಾಸಂಘವು ಹೋರಾಡಿ ಕೊಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನದ ಅವ್ಯವಹಾರವನ್ನು ಬಯಲಿಗೆಳೆಯಿತು. ದೇವಸ್ಥಾನಗಳನ್ನು ಅನಧಿಕೃತವೆಂದು ನೆಲಸಮಗೊಳಿಸುವುದು, ಮಸೀದಿಗಳನ್ನು ಮತ್ತು ಇಗರ್ಜಿಗಳನ್ನು ಬಿಟ್ಟುಬಿಡುವುದು ಇವೆಲ್ಲವುಗಳ ವಿರುದ್ಧ ಮಹಾಸಂಘವು ವಕೀಲರ ಮೂಲಕ ದೇವಸ್ಥಾನಗಳ ರಕ್ಷಣೆಗೆ ಕಟಿಬದ್ಧವಾಗಿ ಹೋರಾಡುತ್ತಿದೆ.  ಎಲ್ಲ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸುಲು, ಪ್ರತಿಯೊಬ್ಬ ಭಕ್ತರ ಯೋಗದಾನ ಅವಶ್ಯವಾಗಿದೆ ಎಂದು ಉಪಸ್ಥಿತರಿಗೆ ಕರೆ ನೀಡಿದರು.

*ದೇವಸ್ಥಾನಗಳಲ್ಲಿ ನಿಯಮಿತವಾಗಿ ಧರ್ಮ  ಶಿಕ್ಷಣ ನೀಡಿ ಜಾಗೃತಿ ಗೊಳಿಸಬೇಕಿದೆ - ಶ್ರೀ. ವಿಜಯ ರೇವಣಕರ್*

ದೇವಸ್ಥಾನಗಳು ಕೇವಲ ದೇವರ ದರ್ಶನಕ್ಕೆ ಸೀಮಿತವಾಗದೆ, ಧರ್ಮ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ನೀಡುವ ಶ್ರದ್ಧ ಕೇಂದ್ರಗಳಾಗಿವೆ, ಆದ್ದರಿಂದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ  ಬೆಂಬಲಿಸೋಣ ಮತ್ತು ಪಾಲಿಸೋಣ, ಇದರ ಜೊತೆಗೆ ದೇವಸ್ಥಾನಗಳಲ್ಲಿ ನಿಯಮಿತವಾಗಿ ಧರ್ಮ  ಶಿಕ್ಷಣ ನೀಡುವ ಮೂಲಕ ದೇವಸ್ಥಾನಗಳನ್ನು ಧಾರ್ಮಿಕ ಕೇಂದ್ರಗಳನ್ನಾಗಿ ಮಾಡಲು ಪ್ರಯತ್ನ ಮಾಡಬೇಕಿದೆ.ಮುಂದೆ ಮಾತನಾಡುತ್ತ ಇಂದಿನ ಯುವ ಪೀಳಿಗೆ ಲಾರ್ಡ್ ಮೆಖಾಲೆ ಶಿಕ್ಷಣ ಪದ್ಧತಿಯಿಂದ ಹೊರ ಬರಬೇಕಾಗಿದೆ, ಗುರುಕುಲ ಮಾಧ್ಯಮ ಶಿಕ್ಷಣ ಪಡೆದು ಸಂಸ್ಕಾರವಂತರಾಗಬೇಕು.  ಎಂದು ಉಪಸ್ತಿತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ  200 ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು, ಪುರೋಹಿತರು ಈ ಅಧಿವೇಶನದಲ್ಲಿ ಉಪಸ್ಥಿತರಿದ್ದರು.
                           

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.