ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳೇ ಇದು ನ್ಯಾಯವೇ?: ಕೆ.ಸಿ.ದಿವಾಕರ್

ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳೇ ವಿತ್ತ ಸಚಿವರಾದ ತಾವು ಎಲ್ಲದರಲ್ಲೂ ಸೈ  ಅನಿಸಿಕೊಂಡಿದ್ದು ನಮ್ಮ ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿ ಇದ್ದು ಹಾಗೂ ಗಾರ್ಮೆಂಟ್ಸ್, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು ಇವರುಗಳು ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವುದು ತಮಗೆ ಗೊತ್ತಿರುವ ಸಂಗತಿ. ಆದರೂ ಈಗಿನ ಬೆಲೆ ಏರಿಕೆಯ ದಿನಗಳಲ್ಲಿ ಸಂಬಳ ಜಾಸ್ತಿ ಮಾಡಿ ಎಂದು ಮನವಿ ಮಾಡಿದರು ಸಹ ಅಲ್ಪ ಸಂಬಳವನ್ನು ಜಾಸ್ತಿ ಮಾಡುತ್ತೀರಿ.

 ಜನಪ್ರತಿನಿಧಿಗಳಾದ ತಾವುಗಳೆಲ್ಲರೂ ಲಕ್ಷ ಲಕ್ಷ ಕೋಟಿಗಟ್ಟಲೆ ಆಸ್ತಿ ಇದ್ದರೂ ಸಹ ತಮ್ಮ ಸಂಬಳವನ್ನು ಏಕಾಏಕಿ ದುಪ್ಪಟ್ಟು ಮಾಡಿರುತ್ತೀರಿ ಇದು ನ್ಯಾಯವೇ?

 ಇದು ಯಾರ ಹಣ ಹಿಂದಿನ ಕಾಲದಲ್ಲಿ ಜನಪ್ರತಿನಿಧಿಗಳು ಗೌರವಧನವನ್ನು ಪಡೆಯುತ್ತಿದ್ದರು, ಅದನ್ನು ಸಹ ಸರ್ಕಾರಕ್ಕೆ ಬಿಟ್ಟವರು ಇದ್ದಾರೆ. ಪ್ರತಿ ಪಕ್ಷದವರಾಗಲಿ ಆಡಳಿತ ಪಕ್ಷದವರಾಗಲಿ ಯಾರು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿರುವುದಿಲ್ಲ, ಇದು ನ್ಯಾಯವೇ?.....

ಕೆ ಸಿ ದಿವಾಕರ್ 
ನಿರ್ದೇಶಕರು 
ಜಿಲ್ಲಾ ಒಕ್ಕಲಿಗರ ಒಕ್ಕೂಟ ಶಿವಮೊಗ್ಗ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.