ಮತ್ತೆ ದಿಡೀರ್ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮೂಲ ಟ್ರಸ್ಟ್ ಡೀಡ್ ತಿದ್ದುಪಡಿ !!ಎರಡು ಬಾರಿ ತಿದ್ದುಪಡಿ!!ಏನೇನು ಅಂತೀರಾ...ಸಂಪೂರ್ಣ ಮಾಹಿತಿ ನೋಡಿ..
ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶಕ್ಕೆ ಕೋಕ್....ಕರ್ನಾಟಕ ಕಾರ್ಯನಿರತ ಪತ್ರಕರ್ತರ ಶಿವಮೊಗ್ಗ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಅದ್ಯಕ್ಷರು ಟ್ರಸ್ಟ್ ನಿಂದ ಹೊರಕ್ಕೆ!!ಇದು ಟ್ರಸ್ಟಿಗಳು ಮತ್ತು ಸಮಾನ ಮನಸ್ಕ ಪತ್ರಕರ್ತರು ತಿಳಿದು ಕೊಳ್ಳ ಬೇಕಾದ ಮಾಹಿತಿ ಇದು....
ಶಿವಮೊಗ್ಗ RTO ರಸ್ತೆಯಲ್ಲಿ ಇರುವ ಸರ್ಕಾರದ ಅನುದಾನದಿಂದ ಕಟ್ಟಿದ ಪತ್ರಿಕಾಭವನವಿದು....
ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಪತ್ರಿಕಾ ಭವನ ಅಲ್ಲ...ಟ್ರಸ್ಟ್ ಅಧ್ಯಕ್ಷ ಒಂದು ನಯಾ ಪೈಸೆಯನ್ನು ಪತ್ರಿಕಾಭವನ ದ ಕಟ್ಟಡಕ್ಕೆ ಹಾಕಿಲ್ಲ.ಇದು ಸಾರ್ವಜನಿಕರಿಗೆ ಮತ್ತು ಪತ್ರಕರ್ತರಿಗೆ ಮಾಹಿತಿ....
ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಕೆಲವು ಟ್ರಸ್ಟಿಗಳಿಗೂ ದಿಡೀರ್ ಟ್ರಸ್ಟ್ ಡೀಡ್ ತಿದ್ದುಪಡಿ ಆದ ಬಗ್ಗೆ ಮಾಹಿತಿ ಗೊತ್ತಿರುವುದಿಲ್ಲ...
ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಶಿವಮೊಗ್ಗ ಘಟಕ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅದ್ಯಕ್ಷರ ವಿರುದ್ದ ಹಲವು ಆರೋಪಗಳನ್ನು ಮಾಡಿತ್ತು. ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಹ ನೀಡಲಾಗಿತ್ತು. ಸರ್ಕಾರದ ಅನುದಾನದಿಂದ ಕಟ್ಟಿದ ಸರ್ಕಾರಿ ಪತ್ರಿಕಾಭವನದಲ್ಲಿ ಪ್ರೆಸ್ ಟ್ರಸ್ಟ್ ಬೋರ್ಡ್ ಹಾಕಿಕೊಂಡು ಸುದ್ದಿಗೋಷ್ಟಿ ಹೆಸರಲ್ಲಿ, ಪ್ರೆಸ್ ನೋಟ್ ಹೆಸರಲ್ಲಿ,ಕಾರ್ಯಕ್ರಮದ ಹೆಸರಲ್ಲಿ ಹಣ ವಸೂಲಿಯನ್ನು ಸಾರ್ವಜನಿಕರಿಂದ ಮಾಡಲಾಗುತ್ತಿದೆ.ಇದನ್ನು ಸರ್ಕಾರಕ್ಕೆ ಸಂದಾಯ ಮಾಡದೇ ಆ ಹಣವನ್ನು ಪ್ರೆಸ್ ಟ್ರಸ್ಟ್ ಅದ್ಯಕ್ಷರು ಉಪಯೋಗಿಸಿಕೊಂಡು ಸರ್ಕಾರಕ್ಕೆ ವಂಚಿಸಿದ್ದಾರೆ 15 ವರ್ಷದಿಂದ ವಸೂಲಿಯಾದ ಹಣವನ್ನು ಟ್ರಸ್ಟ್ ಅದ್ಯಕ್ಷರಿಂದ ವಸೂಲಿ ಮಾಡಬೇಕು ಎಙದು ಜಿಲ್ಲಾಧಿಕಾರಿಗಳು ಶಿವಮೊಗ್ಗ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮತ್ತು ದೂರು ನೀಡಲಾಗಿತ್ತು. ಅದರ ಪರಿಣಾಮವಾಗಿ ಧ್ವನಿ ಸಂಘಟನೆ ಮಾಡಿದ ಆರೋಪಕ್ಕೆ ಹೆದರಿ ಇದೀಗ ದಿಡೀರ್ ಅಂತಾ ಮೂಲ ಟ್ರಸ್ಟ್ ಡೀಡನ್ನು ಅದ್ಯಕ್ಷ ಮಂಜುನಾಥ್ ತನಗೆ ಬೇಕಾದ ಹಾಗೆಯೇ ಮತ್ತೆ ತಿದ್ದುಪಡಿ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ದಿಡೀರ್ ಮೂಲ ಟ್ರಸ್ಟ್ ಡೀಡ್ ತಿದ್ದುಪಡಿ ವಿಷಯ ಸಾರ್ವಜನಿಕ ವಲಯದಲ್ಲಿ ಮತ್ತು ಪತ್ರಿಕಾ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗತೊಡಗಿದೆ.ಸರಿ ತಪ್ಪು ಚರ್ಚೆಯಾಗತೊಡಗಿದೆ.
ದಿನಾಂಕ:14-3-2025 ರಂದು ನೊಂದಣಿ: ಮೂಲ ಟ್ರಸ್ಟ್ ಡೀಡ್ ನ್ನು ಮತ್ತೆ ದಿಡೀರ್ ತಿದ್ದುಪಡಿ ಏನೇನು ಅಂತೀರಾ ನೋಡಿ.....
ಎನ್.ಮಂಜುನಾಥ್ ಮತ್ತು ಕಾರ್ಯದರ್ಶಿ ನಾಗರಾಜ್ ನೇರಿಗೆ ಇಬ್ಬರೂ ಸೇರಿ ಟ್ರಸ್ಟ್ ಡೀಡ್ ತಿದ್ದುಪಡಿ ಮಾಡಿದ್ದಾರೆ . ಶಿವಮೊಗ್ಗ ಪ್ರೆಸ್‌ಟ್ರಸ್ಟ್, ಪತ್ರಿಕಾ ಭವನ ನಗರಸಭೆ ಆವರಣ, ಶಿವಮೊಗ್ಗ ಎಂಬ ಹೆಸರಿನಿಂದ ಒಂದುಟ್ರಸ್ಟ್ ನ್ನು ಸ್ಥಾಪಿಸಿ, ಇದರ ಟ್ರಸ್ಟ್ ಡೀಡ್‌ನ್ನು ಶಿವಮೊಗ್ಗ ತಾಲ್ಲೂಕು ಉಪನೊಂದಣಾಧಿಕಾರಿಗಳವರ ಕಛೇರಿಯ 4ನೇಪುಸ್ತಕದ ದಸ್ತಾವೇಜು ಸಂಖ್ಯೆ.ಎಸ್‌ಂಜಿ-4-00043-2009-10ಆಗಿ ಸಿ.ಡಿ.ನಂಬರ್.ಎಸ್‌ಎಂಜಿಡಿ77ರಲ್ಲಿ
28-05-2009ರಂದು ನೊಂದಾಯಿಸಲ್ಪಟ್ಟಿರುತ್ತದೆ. ಆದರೆ, ಇತ್ತೀಚಿನ ವಿದ್ಯಮಾನಗಳನ್ನು
ಅವಲೋಕಿಸಿದಾಗ ಹಾಗೂ ಟ್ರಸ್ಟ್‌ನ ಅಭಿವೃದ್ಧಿಗೋಸ್ಕರ ಸದರಿ ಟ್ರಸ್ಟ್ ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವುದು
ಅವಶ್ಯಕವೆಂದು ಕಂಡು ಬಂದ ಮೇರೆಗೆ ಟ್ರಸ್ಟ್ ಡೀಡ್‌ನಲ್ಲಿ ಮಾಡಬೇಕಾದ ಮಾರ್ಪಾಡುಗಳನ್ನು
ದಿನಾಂಕ:10-09-2012ರಂದು ನಡೆದ ಟ್ರಸ್ಟ್‌ನ ಸರ್ವ ಸದಸ್ಯರ ಸಭೆಯ ಮುಂದೆ ಮಂಡಿಸಿ, ಚರ್ಚಿಸಿ, ಸದರಿ
ಮಾರ್ಪಾಡುಗಳನ್ನು ನಮ್ಮ ಮೂಲ ಟ್ರಸ್ಟ್ ಡೀಡ್‌ಗೆ ತಿದ್ದುಪಡಿ ಮಾಡುವುದರ ಮೂಲಕ ಅಳವಡಿಸಿಕೊಳ್ಳಬೇಕೆಂದು
ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ದಿನಾಂಕ 14-3-2025 ರ ತಿದ್ದುಪಡಿ ಯಲ್ಲಿ ನಮೂದಿಸಲಾಗಿದೆ.
ನಂತರ ಸದರಿ ಟ್ರಸ್ಟ್ ಡೀಡ್ ತಿದ್ದುಪಡಿ ಆಗಿದ್ದು ಸದರಿ ತಿದ್ದುಪಡಿ ಪತ್ರವನ್ನು ಶಿವಮೊಗ್ಗ ತಾಲ್ಲೂಕು ಸಬ್ ರಿಜಿಸ್ಟ್ರಾ
ಕಛೇರಿಯ 4ನೇ ಪುಸ್ತಕದ 2016-17ನೇ ಇಸವಿಯಲ್ಲಿ 127ನೇ ಎಸ್.ಆರ್ ನಂಬರಾಗಿ, ಸಿ.ಡಿ.ನಂಬರ್.
ಎಸ್‌ಎಂಜಿಡಿ292ನೇದ್ದರಲ್ಲಿ ದಿನಾಂಕ:01-06-2016ರಂದು ತಿದ್ದುಪಡಿ ಪತ್ರವು ನೊಂದಣಿಯಾಗಿರುತ್ತದೆ.
ದಿನಾಂಕ:03-07-2020ರಂದು ನಡೆದ ಆಡಳಿತ ಮಂಡಳಿ ಸಭೆ ದಿನಾಂಕ:29-07-2020ರಂದು ನಡೆದ ಸರ್ವ
ಟ್ರಸ್ಟಿಗಳ ಸಭೆಯನ್ನು ಅನುಮೋದನೆ ಸ್ಥಿರೀಕರಣ.
ದಿನಾಂಕ:26-02-2022ರಂದು ಸರ್ವ ಟ್ರಸ್ಟಿಗಳ ಮಹಾ ಸಭೆಯಲ್ಲಿ ಕೈಗೊಂಡ ತಿದ್ದುಪಡಿ ಕುರಿತ ನಿರ್ಣಯ ಮತ್ತು
ಸ್ಥಿರೀಕರಣದ ಅಂಶಗಳು ಈ ಕೆಳಕಂಡಂತೆ ಇದೆ.
ಪ್ರೆಸ್ ಟ್ರಸ್ಟ್ ಡೀಡ್‌ನ ಪೇಜ್ ನಂ.2 ಕ್ರಮಸಂಖ್ಯೆ.3ರಲ್ಲಿ ಕಛೇರಿ ವಿಳಾಸ ಪತ್ರಿಕಾ ಭವನ ನಗರಸಭೆ ಆವರಣ ಎಂದಿದ್ದು,
ಅದನ್ನು ಪತ್ರಿಕಾ ಭವನ ಆರ್.ಟಿ.ಓ ಕಛೇರಿ- ರಸ್ತೆ, ಶಿವಮೊಗ್ಗ ಎಂದು ತಿದ್ದುಪಡಿ ಮಾಡಲಾಗಿದೆ.
ಪೇಜ್ ನಂ.6, ಕ್ರ.ಸಂ.11 ನಿರ್ವಹಣೆ ಮತ್ತು ಹತೋಟಿ ಸದಸ್ಯರು 18 ಎನ್ನುವ ಬದಲು 25 ವರ್ಷ ಎಂದು ಗರಿಷ್ಟ 62
ಎನ್ನುವ ವಯೋಮಿತಿ ಕೈ ಬಿಡಲಾಗಿದೆ.
ಟ್ರಸ್ಟಿಗಳು: 62 ವರ್ಷ ವಯೋಮಿತಿ ಕೈ ಬಿಡಲಾಗಿದೆ.
ಪೇಜ್ ನಂ.9 ಕ್ರ.ಸಂ.15ರಲ್ಲಿ ಜಿಲ್ಲೆ ಎನ್ನುವುದನ್ನು ಶಿವಮೊಗ್ಗ ನಗರ ಎಂದು ತಿದ್ದುಪಡಿ ಮಾಡಿ ಮಾಡಲಾಗಿದೆ.
ಪೇಜ್ ನಂ.9ರ ಕ್ರ ಸಂ.16 ಆಡಳಿತ ಮಂಡಳಿ ಹಾಗೂ ಪ್ರಥಮ ಪದಾದಿಕಾರಿಗಳು ಯಾವುದೇ ಟ್ರಸ್ಟಿಯ ಒಂದುಪದಾದಿಕಾರಿ ಹುದ್ದೆಗೆ ನಿರಂತರವಾಗಿ ಮೂರು ಬಾರಿಗಿಂತ ಹೆಚ್ಚು ಸ್ಪರ್ದಿಸುವಂತಿಲ್ಲ ಎಂಬುದನ್ನು ಕೈ ಬಿಡಲಾಗಿದೆ.
5 ವರ್ಷದ ಅವದಿ ಬದಲು 3 ವರ್ಷ ಎಂದು ತಿದ್ದುಪಡಿ ಮಾಡಲಾಗಿದೆ.ಹಾಗೂ ಸದರಿ ಎಸ್.ಆರ್. ನಂಬರ್.43/2009-10ನೇ ಪತ್ರದ 20ನೇ ಪುಟದ ಕ್ರಮಸಂಖ್ಯೆ.31 ಮತ್ತು 32ನ್ನು ಕೈ
ಬಿಡಲಾಗಿದೆ.
ಮೂಲ ಟ್ರಸ್ಟ್ ಡೀಡ್ ನಲ್ಲಿದ್ದ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶಕ್ಕೆ ಕೂಡ ಕೋಕ್...!!
ಟ್ರಸ್ಟ್‌ನಲ್ಲಿ ಅಥವಾ ಕಾರ್ಯಕಾರಿ ಮಂಡಳಿಯಲ್ಲಿ ತೀವ್ರ ಸ್ವರೂಪದ ಭಿನ್ನಾಭಿಪ್ರಾಯ ಬಂದು ಸುಲಲಿತವಾಗಿ
ನಡೆಸಿಕೊಂಡು ಹೋಗಲು ಸಾಧ್ಯವೇ ಇಲ್ಲವೆನಿಸಿದಾಗ ಶಿವಮೊಗ್ಗ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬಹುದಾಗಿದೆ.
ಆಡಳಿತ ಮಂಡಳಿ ಜೊತೆ ಕುರಿತು ಸಮಸ್ಯೆ ಬಗೆಹರಿಸಲು ಯತ್ನಿಸಬೇಕು. ಸಾಧ್ಯವಾಗದೆ ಟ್ರಸ್ಟ್ ಮುಚ್ಚುವ ಹಂತ
ಬಂದರೆ ತಾತ್ಕಲಿಕವಾಗಿ ಟ್ರಸ್ಟ್‌ನ ಆಡಳಿತವನ್ನು ತಾವೇ ವಹಿಸಿಕೊಂಡು ಮುನ್ನಡೆಸಬೇಕು. ಮತ್ತು ಆರು ತಿಂಗಳ ಒಳಗೆಸಮರ್ಪಕ ವ್ಯವಸ್ಥೆ ಮಾಡಬೇಕು.
ಟ್ರಸ್ಟ್ ವಿಸರ್ಜಿಸಬೇಕು ಎಂಬ ಅಥವಾ ಇದೇ ಅರ್ಥದ ನಿರ್ಣಯವನ್ನು ಟ್ರಸ್ಟ್‌ನ ಆಡಳಿತ ಮಂಡಳಿ
ಕೈಗೊಂಡ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಬಿಡತಕ್ಕದ್ದು ಎಂಬುದನ್ನು ಇದನ್ನು ಸಹ ಕೈ ಬಿಡಲಾಗಿದೆ. ತಿದ್ದುಪಡಿಯನ್ನು ಮಾಡಲಾಗಿದೆ.
ಒಟ್ಟಿನಲ್ಲಿ ಟ್ರಸ್ಟ್ ಅದ್ಯಕ್ಷರಾದ ಎನ್. ಮಂಜುನಾಥ್ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಶಾಶ್ವತವಾಗಿ ಅಧ್ಯಕ್ಷರಾಗಿ ಇರುವುದಕ್ಕೆ ಏನು ಬೇಕು ಅದನ್ನು ಮಾಡಿ ಕೊಂಡಿದ್ದಾರೆ ಎಂಬ ಅಂಶ ತಿದ್ದುಪಡಿ ಯಿಂದ ತಿಳಿದು ಬಂದಿರುತ್ತದೆ.ಅದು ಅವರಿಗೆ ಟ್ರಸ್ಟ್ ಗೆ ಸಂಬಂಧಿಸಿದ ವಿಷಯವಾಗಿದೆ.
ನಮ್ಮದು ಒತ್ತಾಯ ಏನೇಂದರೇ ಶಿವಮೊಗ್ಗದ ಸರ್ಕಾರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಅದ್ಯಕ್ಷ ಮಂಜುನಾಥ್ ನಡೆಸುತ್ತಿರುವ ಎಲ್ಲಾ ಚಟುವಟಿಕೆ ಹಣಕಾಸಿನ ವಹಿವಾಟು ಬಂದ್ ಆಗ ಬೇಕು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಬೋರ್ಡ್ ಸಹ ಇರಬಾರದು ಎಂಬುದಾಗಿದೆ.
ತಿದ್ದುಪಡಿ ಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗೆ ಟ್ರಸ್ಟ್ ನಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ಹುದ್ದೆಯು ಇಲ್ಲ. ಮುಂದೇನಾಗುತ್ತಾ ಕಾದು ನೋಡಬೇಕು...
ನಮ್ಮ ಶಿವಮೊಗ್ಗ ಘಟಕದ ಧ್ವನಿ ಸಂಘದ ಹೋರಾಟ ನಿರಂತರವಾಗಿ ಇರುತ್ತದೆ. ಸರ್ಕಾರಿ ಪತ್ರಿಕಾಭವನಕ್ಕೆ ಆಡಳಿತಾಧಿಕಾರಿ ನೇಮಿಸುವವರೆಗೆ....
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಮಟ್ಟದ ಸಂಘಟನೆ ಆಗಿದ್ದು, ಸರ್ಕಾರದಿಂದ ಮಾನ್ಯತೆಯನ್ನು ಪಡೆದ ಸಂಘಟನೆ ಇದಾಗಿದೆ. 8000 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಸದಸ್ಯರಾಗಿದ್ದಾರೆ. ಶಿವಮೊಗ್ಗದಲ್ಲಿ 300 ಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಇವರೆಲ್ಲಾ ಟ್ರಸ್ಟ್ ಅದ್ಯಕ್ಷರು ಹೇಳಿದಂತೆ ಕೇಳುತ್ತಿರುವುದು ಬೇಸರ ತಂದಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರು ಕೂಡಲೇ ಎಚ್ಚೆತ್ತು ಸರ್ಕಾರಿ ಪತ್ರಿಕಾಭವನವನ್ನು ತಮ್ಮ ಸುಪರ್ದಿಗೆ ಪಡೆಯುವ ಪ್ರಯತ್ನ ಮಾಡಬೇಕು. ಯಾರೋ 23 ಜನರು ಇರುವ ಟ್ರಸ್ಟ್ ಅದ್ಯಕ್ಷರು ಪತ್ರಿಕಾ ಭವನ ನಿರ್ವಹಣೆ ಉಸ್ತುವಾರಿ ಮಾಡುತ್ತಿರುವುದು ಶೋಚನೀಯ ವಾದ ಸಂಗತಿಯಾಗಿದೆ.
ಆದರೇ ಪತ್ರಿಕಾಭವನ ಇದು ಸರ್ಕಾರಿ ಪತ್ರಿಕಾ ಭವನ ಎಲ್ಲಾ ಸಮಾನ ಮನಸ್ಕ ಪತ್ರಕರ್ತರು ಕೂಡ ಅಲ್ಲಿ ಭಾಗವಹಿಸುವಂತೆ ಆಗಬೇಕು ಪತ್ರಿಕಾ ಭವನಕ್ಕೆ ಆಡಳಿತಾಧಿಕಾರಿ ನೇಮಿಸಿ...ಅಲ್ಲಿ ವಸೂಲಿ ಆಗುವ ಹಣ ಸರ್ಕಾರಕ್ಕೆ ಸೇರ ಬೇಕು ಅನ್ನುವುದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ಒತ್ತಾಯವಾಗಿದೆ.
ಈ ನಿಟ್ಟಿನಲ್ಲಿ ಇದೀಗ ಜಿಲ್ಲಾಧಿಕಾರಿಗಳು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಪತ್ರಿಕಾಭವನಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರಧಿನೀಡಲು ನಿವೃತ್ತ ನ್ಯಾಯಾಧೀಶ ರನ್ನು ನೇಮಕ ಮಾಡಿದ್ದಾರೆ. ಮುಂದೇನಾಗುವುದು ಕಾದು ನೋಡಬೇಕಾಗಿದೆ.
*2016 ನೇ ಸಾಲಿನಲ್ಲಿ ದಿನಾಂಕ 1-6-2016 ರಂದು 2 ನೇ ಬಾರಿ ಟ್ರಸ್ಟ್ ಡೀಡ್ ತಿದ್ದುಪಡಿ! ಏನೇನು ಅಂತೀರಾ ನೋಡಿ...*
ದಿನಾಂಕ: 10-9-2012 ರಂದು ನಡೆದ ಟ್ರಸ್ಟ್ ಸರ್ವಸದಸ್ಯರ ಸಭೆ ಮುಂದೇ ಮಂಡಿಸಿ ಚರ್ಚಿಸಿದ ನಂತರ ಮೂಲ ಟ್ರಸ್ಟ್ ಡೀಡ್ ತಿದ್ದುಪಡಿ ಮಾಡುವುದಕ್ಕೆ ನಿರ್ಣಯ ಕೈಗೊಳ್ಳಲಾಗಿದೆ ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಟ್ರಸ್ಟ್ ಅದ್ಯಕ್ಷರಾದ ಎನ್.ಮಂಜುನಾಥ್ ಹೇಳಿದ್ದಾರೆ.
1) ಮೂಲ ಟ್ರಸ್ಟ್ ಡೀಡ್ ಪುಟ 6 ರಲ್ಕಿ ಬರುವ ನಿಬಂಧನೆ-11 ನಿರ್ವಹಣೆ ಮತ್ತು ಹತೋಟಿ ಅಡಿಯಲ್ಲಿ ಟ್ರಸ್ಟಿಗಳು ಆಗಲು (ಅ)ದ ಮೊದಲ ಪ್ಯಾರಾದ ಕೊನೆಯ ವಾಕ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು ಎಂಬುದನ್ನು ಕೈ ಬಿಡಲಾಗಿದೆ.ಅಲ್ಲಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಟ್ರಸ್ಟಿಗಳು ಆಗಲು ಇನ್ನು ಮುಂದೇ ಅವಕಾಶ ಇರುವುದಿಲ್ಲ.
2) ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷ, ನಗರ ಕಾರ್ಯದರ್ಶಿ, ಮತ್ತು ಖಜಾಂಚಿಯವರು ಟ್ರಸ್ಟ್ ನ ಪದನಿಮಿತ್ತ ಟ್ರಸ್ಟಿಯಾಗಿರುತ್ತಾರೆ ಎಂಬುದನ್ನು ಬದಲಾವಣೆ ಮಾಡಿರುತ್ತದೆ
3)ಟ್ರಸ್ಟ್ ಡೀಡ್‌ನ 9ನೇ ಪುಟದಲ್ಲಿರುವ ನಿಬಂಧನೆ 16. ಆಡಳಿತ ಮಂಡಳಿ ಹಾಗೂ ಪ್ರಥಮ
ಪದಾಧಿಕಾರಿಗಳು: ಇದರಡಿ ಬರುವ ಮೊದಲ ಪ್ಯಾರಾವನ್ನು ಆಡಳಿತ ಮಂಡಳಿಯಲ್ಲಿ ಈ ಟ್ರಸ್ಟಿಗಳ
ಪೈಕಿ 11 ಮಂದಿ ಪದಾಧಿಕಾರಿಗಳಿರುತ್ತಾರೆ. ಪ್ರತಿ 5 ವರ್ಷಕ್ಕೊಮ್ಮೆ ಈ ಕಾರ್ಯಕಾರಿ ಸಮಿತಿ ಸದಸ್ಯ
ಸ್ಥಾನಕ್ಕೆ ಚುನಾವಣೆ ನಡೆಯಬೇಕು. ಟ್ರಸ್ಟಿಗಳಿಗೆ ಮಾತ್ರ ಮತದಾನದ ಹಕ್ಕಿರುತ್ತದೆ. ಅಧ್ಯಕ್ಷ, ಉಪಾಧ್ಯಕ್ಷ
ಕಾರ್ಯದರ್ಶಿ ಸಹಕಾರ್ಯದರ್ಶಿ ಖಜಾಂಚಿ ಹುದ್ದೆ ಹಾಗೂ 6 ಕಾರ್ಯಕಾರಿ ಟ್ರಸ್ಟಿಗಳ ಸ್ಥಾನಕ್ಕೆ
ಚುನಾವಣೆ ನಡೆಯತಕ್ಕದ್ದು'' ಎಂಂಬುದಾಗಿ ತಿದ್ದುಪಡಿಯನ್ನು ಮಾಡಲಾಗಿದೆ.
4)ಎರಡನೇ ಪ್ಯಾರಾದ ಕೊನೆಯ ವಾಕ್ಯವನ್ನು ಕೈಬಿಟ್ಟು ಸದರಿ ಪ್ಯಾರಾವನ್ನು ಮೊದಲ ಅವಧಿಗೆ
2008ನೇ ಸಾಲಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷರು,
ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ನಗರ ಕಾರ್ಯದರ್ಶಿ, ಖಜಾಂಚಿಯವರು ಕ್ರಮವಾಗಿ ಟ್ರಸ್ಟಿನ
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹಕಾರ್ಯದರ್ಶಿ, ಖಜಾಂಚಿಗಳನ್ನಾಗಿ ನೇಮಕಗೊಳಿಸಲಾಗಿದೆ.
5)ಮೊದಲ ಆಡಳಿತ ಮಂಡಳಿ ಐದು ವರ್ಷದ ಅವಧಿಯದ್ದಾಗಿರುತ್ತದೆ. ಮೊದಲ ಅವಧಿ ನಂತರ ಅಧ್ಯಕ್ಷರು ಸೇರಿದಂತೆ
ಎಲ್ಲಾ ಪದಾಧಿಕಾರಿಗಳ ಹುದ್ದೆಗಳಿಗೆ ಚುನಾವಣೆ ನಡೆಯುತ್ತದೆ.'' ಎಂಬುದಾಗಿ ತಿದ್ದುಪಡಿಯನ್ನು ಮಾಡಲಾಗಿದೆ. ಅಲ್ಲಿಗೆ ಜಿಲ್ಲಾ ಕಾರ್ಯನಿರತ ಸಂಘದ ಅದ್ಯಕ್ಷರೇ ಟ್ರಸ್ಟಿನ ಅದ್ಯಕ್ಷರಾಗುತ್ತಾರೆ ಎಂಬುದನ್ನು ಕೈ ಬಿಡಲಾಗಿದೆ.
6)ಮೂರನೇ ಪ್ಯಾರಾವನ್ನು ಯಾವುದೇ ಟ್ರಸ್ಟಿಯು ಒಂದು ಪದಾಧಿಕಾರಿ ಹುದ್ದೆಗೆ ನಿರಂತರವಾಗಿ 3
ಬಾರಿಗಿಂತ ಹೆಚ್ಚು ಸ್ಪರ್ಧಿಸುವಂತಿಲ್ಲ' ಎಂದೂ ತಿದ್ದುಪಡಿ ಮಾಡಲಾಗಿದೆ.
ಟ್ರಸ್ಟ್ ಡೀಡ್ 15ನೇ ಪುಟದಲ್ಲಿರುವ ನಿಬಂಧನೆ 18 (ಋ) ಖಂಡಿಕೆಯನ್ನು ಆಡಳಿತ ಮಂಡಳಿಯ
ಸಭೆಗಳ ನೋಟೀಸನ್ನು ಮುದ್ದಾಂ, ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು'' ಎಂದು ತಿದ್ದುಪಡಿ
ಮಾಡಲಾಗಿದೆ.
7)ಟ್ರಸ್ಟ್ ಡೀಡ್‌ನ 16ನೇ ಪುಟದಲ್ಲಿ ನಿಬಂಧನೆ 18(ಐ) ಖಂಡಿಕೆಯ ಮೊದಲ ವಾಕ್ಯವನ್ನು “ಈ ಕೆಳಗೆ ಹೇಳಿದ
ವಿಚಾರಗಳ ಬಗ್ಗೆ ನಿರ್ಣಯವನ್ನು ಆ ಕಾಲದಲ್ಲಿ ಟ್ರಸ್ಟಿನಲ್ಲಿ ಒಟ್ಟು ಎಷ್ಟು ಜನ ಟ್ರಸ್ಟಿಗಳು ಇರುತ್ತಾರೆಯೋ ಆ ಟ್ರಸ್ಟಿಗಳ
ಪೈಕಿ 2/3 ಟ್ರಸ್ಟಿಗಳ ಬಹುಮತದಿಂದ ಪಾಸ್ ಆಗಬೇಕು'' ಎಂಬುದಾಗಿ ತಿದ್ದುಪಡಿ ಮಾಡಲಾಗಿದೆ.
8)ಟ್ರಸ್ಟ್ ಡೀಡ್ 17ನೇ ಪುಟದಲ್ಲಿ ನಿಬಂಧನೆ 19, ಪದಾಧಿಕಾರಿಗಳು: ಇದರ ಮೊದಲ ಪ್ಯಾರಾವನ್ನು
“ಟ್ರಸ್ಟಿಗಳು ಪ್ರತಿ ಐದು ವರ್ಷಕ್ಕೆ ಒಮ್ಮೆ ಆಡಳಿತ ಮಂಡಳಿಯ ಸಭೆಯಲ್ಲಿ ತಮ್ಮ ಪೈಕಿ ಒಬ್ಬ ಅಧ್ಯಕ್ಷರನ್ನೂ ಒಬ್ಬ
ಉಪಾಧ್ಯಕ್ಷರನ್ನೂ ಒಬ್ಬ ಕಾರ್ಯದರ್ಶಿಯನ್ನೂ, ಒಬ್ಬ ಸಹಕಾರ್ಯದರ್ಶಿಯನ್ನೂ ಒಬ್ಬ ಕೋಶಾಧ್ಯಕ್ಷರನ್ನೂ ಆಯ್ಕೆ
ಮಾಡಿಕೊಳ್ಳತಕ್ಕದ್ದು. ಹೀಗೆ ಒಮ್ಮೆ ಒಬ್ಬ ಪದಾಧಿಕಾರಿಯಾಗಿ ಆಯ್ಕೆಗೊಂಡ ಟ್ರಸ್ಟಿಯು ಮೂರು ಬಾರಿಗಿಂತ ಹೆಚ್ಚಿನ
ಅವಧಿಗೆ ಪದಾಧಿಕಾರಿ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ.'' ಎಂಬುದಾಗಿ ತಿದ್ದುಪಡಿ ಮಾಡಲಾಗಿದೆ. ಇದೇ ನಿಬಂಧನೆಯ
ಮೂರನೇ ಪ್ಯಾರಾವನ್ನು ಕೈಬಿಡಲಾಗಿದೆ. ಎರಡು ಮತ್ತು ನಾಲ್ಕನೇ ಪ್ಯಾರಾಗಳು ಯಥಾವತ್ತಾಗಿ
ಮುಂದುವರಿಯುತ್ತವೆ.
ಮೂಲ ಬೈಲಾದಲ್ಲಿ ಮೂರನೇ ಪ್ಯಾರಾದಲ್ಲಿ ನಮೂದಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರ ಹುದ್ದೆಯು ಬದಲಾದಂತೆಲ್ಲಾ ಟ್ರಸ್ಟಿನ ಆಡಳಿತ ಅದ್ಯಕ್ಷರು ಬದಲಾಗುತ್ತಾರೆ.ಉಳಿದ ಎಲ್ಲಾ ಪಧಾದಿಕಾರಿಗಳ ಎರಡು ವರ್ಷಗಳ ಅಧಿಕಾರವಧಿಯೂ ಒಂದೇ ದಿನದಿಂದ ಆರಂಭಗೊಳ್ಳತಕ್ಕದ್ದು ಹಾಗೂ ಮೂರು ವರ್ಷಗಳ ನಂತರ ಒಂದೇ ದಿನದಂದು ಮುಗಿಯತಕ್ಕದ್ದು ಎಂಬುದನ್ನು ಕೈ ಬಿಡಲಾಗಿದೆ.
9)ಟ್ರಸ್ಟ್ ಡೀಡ್ 18ನೇ ಪುಟದಲ್ಲಿ ಬರುವ ನಿಬಂಧನೆ ಸಂಖ್ಯೆ 20. ಪದಾಧಿಕಾರಿಯನ್ನು ತೆಗೆದುಹಾಕುವಿಕೆ:
ಇದರ ಮೊದಲ ಪ್ಯಾರಾದ ಕೊನೆಯ ಸಾಲಿನಲ್ಲಿ “3/4 ಭಾಗ ಟ್ರಸ್ಟಿಗಳು'' ಎಂದಿರುವುದನ್ನು “2/3 ಭಾಗ ಟ್ರಸ್ಟಿಗಳು''
ಎಂದು ತಿದ್ದುಪಡಿ ಮಾಡಲಾಗಿದೆ.
*ಒಟ್ಟಿನಲ್ಲಿ ಕರ್ನಾಟಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರ ಹುದ್ದೆ ಮತ್ತು ಸದರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವನ್ನು ಟ್ರಸ್ಟ್ ನಿಂದ ಟ್ರಸ್ಟ್ ಡೀಡ್ ನಿಂದ ಹೊರಹಾಕಲಾಗಿದೆ.*
ಬಾಕಿ ಉಳಿದ ಎಲ್ಲಾ ಅಂಶವು ಮೂಲ ಪತ್ರದಲ್ಲಿ ಇರುವಂತೆ ಇರುತ್ತದೆ ಎಂದು ನಮೂದಿಸಲಾಗಿದೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಅದ್ಯಕ್ಷ ಮತ್ತು ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ್ ವಿರುದ್ದ ಅಕ್ರಮ ಅವ್ಯವಹಾರ ಗಳ ವಿರುದ್ದ ಸುದ್ದಿಗೋಷ್ಟಿ ಸುದ್ದಿಯನ್ನು ಮಾಡಿದರೇ ಪತ್ರಕರ್ತರ ಮೇಲೆ ಕೇಸು ಹಾಕುತ್ತಾನೆ ಮತ್ತು ಪತ್ರಿಕಾಭವನ ಮತ್ತು ಪ್ರೆಸ್ ಟ್ರಸ್ಟ್ ಬಗ್ಗೆ ಹೋರಾಟ ಪ್ರತಿಭಟನೆ ಮಾಡಿ ಸುದ್ದಿಯನ್ನು ಮಾಡಿದರೇ ಅಂತಹ ಪತ್ರಕರ್ತರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಮಾನನಷ್ಟ ಮೊಕದ್ದಮೆ ಹಾಕಿ ಬೆದರಿಸುವ ತಂತ್ರಗಾರಿಕೆಯನ್ನು ಮಾಡುತ್ತಿದ್ದಾನೆ. ಈ ಬೆದರಿಕೆ ಬಗ್ಗಲ್ಲ ಜಗ್ಗಲ್ಲ. ಕೇಸು ಏನು ನನಗೆ ಹೊಸದಲ್ಲ. ಪೊಲೀಸ್ ಇಲಾಖೆಯಲ್ಲಿ ಎಲ್ಲಾ ನೋಡಿ ಬಂದಿದ್ದೆನೆ. ಎಷ್ಟು ಕೇಸು ಬೇಕಾದರೂ ಹಾಕಿ ಕೊಳ್ಳಲಿ... ಈತನ ಅವ್ಯವಹಾರದ ಬಗ್ಗೆ ನಿರಂತರವಾಗಿ ಧ್ವನಿ ಎತ್ತಲಾಗುವುದು.ಸುದ್ದಿಯನ್ನು ನಿರಂತರವಾಗಿ ಬಿತ್ತರಿಸಲಾಗುತ್ತದೆ ಎಂಬುದನ್ನು ಸಾರ್ವಜನಿಕರ ಮುಂದೇ ಹೇಳುತ್ತೆನೆ. ಸಮಾನ ಮನಸ್ಕ ಪತ್ರಕರ್ತರು ಈತನ ಬೆದರಿಕೆಗೆ ಹೆದರಬೇಡಿ....ಈತನನ್ನು ಪತ್ರಿಕಾ ಭವನದಿಂದ ಹೊರಹಾಕಿದರೇ ಎಲ್ಲಾ ಫುಂಗಿ ಬಂದ್ ಆಗುತ್ತದೆ. ಪತ್ರಿಕಾಭವನದ ವಸೂಲಿಯಾದ ಹಣವನ್ನು ಈತನಿಂದ ಕಕ್ಕಿಸುವರೆಗೆ ಹೋರಾಟ ಮುಂದುವರಿಯುತ್ತದೆ.
ಮತ್ತೆ ಅನೇಕ ಹಗರಣಗಳ ಸುದ್ದಿಯನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುತ್ತದೆ ಕಾದು ನೋಡಿರಿ...
Leave a Comment